ETV Bharat / bharat

ಕೊರೊನಾ ತಡೆಗೆ ಕೋವ್ಯಾಕ್ಸಿನ್ ಶೇ.78ರಷ್ಟು ಪರಿಣಾಮಕಾರಿ.. ಭಾರತ್ ಬಯೋಟೆಕ್​ ಫಲಿತಾಂಶ ಬಹಿರಂಗ - ಹೈದರಾಬಾದ್‌ನ ಜೀನೋಮ್ ವ್ಯಾಲಿ

ಜಾಗತಿಕ ಬಯೋಟೆಕ್ ಉದ್ಯಮದ ಕೇಂದ್ರವಾಗಿರುವ ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್, ವಿಶ್ವ ದರ್ಜೆಯ ಲಸಿಕೆ ಮತ್ತು ಜೈವಿಕ ಚಿಕಿತ್ಸಕ, ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ ಮತ್ತು ಲಸಿಕೆ ಪೂರೈಕೆ ಮತ್ತು ವಿತರಣೆ ಮಾಡುವ ಕೇಂದ್ರ ಹೊಂದಿದೆ..

COVAXIN
ಕೋವ್ಯಾಕ್ಸಿನ್
author img

By

Published : Apr 21, 2021, 8:38 PM IST

ಹೈದರಾಬಾದ್ : ಕೊರೊನಾ ತಡೆಗಟ್ಟುವಲ್ಲಿ ಕೋವ್ಯಾಕ್ಸಿನ್ ಲಸಿಕೆ ಶೇ.78ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಮಾಹಿತಿ ನೀಡಿದೆ. ಸಂಸ್ಥೆ ತನ್ನ 2ನೇ ಕಂತಿನ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ಫಲಿತಾಂಶ ಬಹಿರಂಗಪಡಿಸಿದೆ. ಕೊರೊನಾ ಸೋಂಕು ಮಾರಾಣಾಂತಿಕವಾಗದಂತೆ ತಡೆಯುವಲ್ಲಿ ಕೋವ್ಯಾಕ್ಸಿನ್ ಲಸಿಕೆ ಶೇ.100ರಷ್ಟು ಪರಿಣಾಮಕಾರಿ ಎಂದು ವರದಿಯಲ್ಲಿ ತಿಳಿಸಿದೆ.

ಶೇ.78ರಷ್ಟು ಕೊರೊನಾ ತಡೆಯಬಲ್ಲ ಲಸಿಕೆಯು, ಸೋಂಕಿನಿಂದ ದೇಹಕ್ಕೆ ಮಾರಕವಾಗದಂತೆ ತಡೆಯುವಲ್ಲಿ ಕೋವ್ಯಾಕ್ಸಿನ್ ಶೇ.100ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ. ಅಲ್ಲದೆ ಆಸ್ಪತ್ರೆಗೆ ದಾಖಲಾಗದೆ ರೋಗಿಗಳು ಚೇತರಿಸಿಕೊಳ್ಳಲು ಕೋವ್ಯಾಕ್ಸಿನ್ ಸಹಾಯ ಮಾಡಲಿದೆ ಎಂದು ತಿಳಿಸಲಾಗಿದೆ.

ಜೂನ್‌ನಲ್ಲಿ ಫಲಿತಾಂಶ : 3ನೇ ಹಂತದ ಕೋವ್ಯಾಕ್ಸಿನ್ ಅಂತಿಮ ಕಂತಿನ ಫಲಿತಾಂಶವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಭಾರತ್ ಬಯೋಟೆಕ್ ತಿಳಿಸಿದೆ. 18 ರಿಂದ 98 ವಯಸ್ಸಿನವರು ಸೇರಿ 25,800 ಸ್ವಯಂಸೇವಕರನ್ನು ಈ 3ನೇ ಹಂತದ ಪರೀಕ್ಷೆಗೊಳಪಡಿಸಲಾಗಿತ್ತು.

ಅವರಲ್ಲಿ ಸುಮಾರು 10 ಪ್ರತಿಶತ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು ಎಂದಿದ್ದಾರೆ. ಕೋವ್ಯಾಕ್ಸಿನ್ 2ನೇ ಡೋಸ್ ಪಡೆದ ಪರೀಕ್ಷಾರ್ಥಿಗಳಿಗೆ 14 ದಿನಗಳ ನಂತರ ಕೊರೊನಾ ಪರಿಣಾಮ ನಿರ್ಣಯಿಸಲಾಗುತ್ತದೆ. ಇದೀಗ ಈ ಪರೀಕ್ಷೆಯ ಫಲಿತಾಂಶ ಬಹಿರಂಗಗೊಳಿಸಲಾಗಿದೆ.

ಲಸಿಕೆಯ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದ ಭಾರತ್ ಬಯೋಟೆಕ್ ಎಂಡಿ ಕೃಷ್ಣ ಎಲಾ, ಕೋವ್ಯಾಕ್ಸಿನ್ ಕೊರೊನಾ ವಿರುದ್ಧ ಅದರ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿದೆ. ಜಾಗತಿಕವಾಗಿ ದೇಶೀಯ ಲಸಿಕೆ ಕೋವ್ಯಾಕ್ಸಿನ್‌ ಅತ್ಯುನ್ನತ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ಸೋಂಕಿತರ ಸಾವನ್ನು ತಡೆಯುವಲ್ಲಿ ಅದ್ಭುತ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆಯು 145ಕ್ಕೂ ಹೆಚ್ಚು ಜಾಗತಿಕ ಪೇಟೆಂಟ್‌ಗಳು, 16ಕ್ಕೂ ಹೆಚ್ಚು ಲಸಿಕೆಗಳ ವ್ಯಾಪಕ ಉತ್ಪನ್ನ ಪೋರ್ಟ್ಫೋಲಿಯೊ, 4 ಜೈವಿಕ ಚಿಕಿತ್ಸಕ, 123ಕ್ಕೂ ಹೆಚ್ಚು ದೇಶಗಳಲ್ಲಿ ನೋಂದಣಿ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪೂರ್ವ-ಅರ್ಹತೆಗಳೊಂದಿಗೆ ನಾವೀನ್ಯತೆಯ ಅತ್ಯುತ್ತಮ ದಾಖಲೆ ನಿರ್ಮಿಸಿದೆ.

ಜಾಗತಿಕ ಬಯೋಟೆಕ್ ಉದ್ಯಮದ ಕೇಂದ್ರವಾಗಿರುವ ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್, ವಿಶ್ವ ದರ್ಜೆಯ ಲಸಿಕೆ ಮತ್ತು ಜೈವಿಕ ಚಿಕಿತ್ಸಕ, ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ ಮತ್ತು ಲಸಿಕೆ ಪೂರೈಕೆ ಮತ್ತು ವಿತರಣೆ ಮಾಡುವ ಕೇಂದ್ರ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.