ETV Bharat / bharat

ಕೇರಳದಲ್ಲಿ ಮಾಟ ಮಂತ್ರ ಪ್ರಕರಣ: ತನ್ನನ್ನು ವಿರೋಧಿಸಿದರೆ 41 ದಿನದಲ್ಲಿ ಸಾಯಿಸುವುದಾಗಿ ಭಯ ಹುಟ್ಟಿಸಿದ್ದ ಮಹಿಳೆ - ಅನುಮಾನಾಸ್ಪದ ಚಟುವಟಿಕೆಗಳು

ಪತ್ತನಂತಿಟ್ಟದ ಮಲಯಾಲಪುಳದಲ್ಲಿ ಬಾಲಕನೊಬ್ಬನಿಗೆ ಮಾಟ ಮಂತ್ರ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಗುರುವಾರ  ವಸಂತಿ ಅಲಿಯಾಸ್ ಶೋಭನಾ ಹಾಗೂ ಆಕೆಯ ಸಹಾಯಕ ಉನ್ನಿಕೃಷ್ಣನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

bermuda-clad-sorcerer-vasanthis-centre-is-shrouded-in-mystery
ಕೇರಳದಲ್ಲಿ ಮಾಟ ಮಂತ್ರ ಪ್ರಕರಣ: ತನ್ನನ್ನು ವಿರೋಧಿಸಿದರೆ 41 ದಿನದಲ್ಲಿ ಸಾಯಿಸುವುದಾಗಿ ಭಯ ಹುಟ್ಟಿಸಿದ್ದ ಮಹಿಳೆ
author img

By

Published : Oct 14, 2022, 6:41 PM IST

ಪತ್ತನಂತಿಟ್ಟ (ಕೇರಳ): ಕೇರಳದಲ್ಲಿ ಆರ್ಥಿಕ ಸಮೃದ್ಧಿಗಾಗಿ ಇಬ್ಬರು ಮಹಿಳೆಯರನ್ನು ಬಲಿ ಕೊಟ್ಟ ಪ್ರಕರಣ ಬೆನ್ನಲ್ಲೇ ಮತ್ತೊಂದು ಇಂತಹದ್ದೇ ವಿಚಿತ್ರ ಆಚರಣೆಯ ಪ್ರಕರಣದ ಬೆಳಕಿಗೆ ಬಂದಿದೆ. ಮಾಟ ಮಂತ್ರದಲ್ಲಿ ತೊಡಗಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಸ್ವಯಂ ಘೋಷಿತ ಮಹಿಳಾ ಮಾಂತ್ರಿಕ ವಿರುದ್ಧ ಸ್ಥಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪತ್ತನಂತಿಟ್ಟದ ಮಲಯಾಲಪುಳದಲ್ಲಿ ಬಾಲಕನೊಬ್ಬನಿಗೆ ಮಾಟ ಮಂತ್ರ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ವಸಂತಿ ಅಲಿಯಾಸ್ ಶೋಭನಾ ಹಾಗೂ ಆಕೆಯ ಸಹಾಯಕ ಉನ್ನಿಕೃಷ್ಣನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ಭಾಗಕ್ಕೆ​ ಚಾಕು ಚುಚ್ಚಿ, ಮಾಂಸ ತಿಂದ ನರಭಕ್ಷಕ.. ಕೇರಳ ನರಬಲಿ ಕೇಸ್​ ತನಿಖೆಗೆ ವಿಶೇಷ ತಂಡ

ಇದೀಗ ಈ ವಿಷಯ ಸ್ಥಳೀಯರು ಮಾತನಾಡಿದ್ದು, ಬಂಧಿತ ಮಹಿಳೆ ವಸಂತಿ ವಾಮಾಚಾರ ಕೇಂದ್ರ ನಡೆಸುತ್ತಿದ್ದರು. ಈ ಕೇಂದ್ರದಲ್ಲಿ ವಿಚಿತ್ರವಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಈ ಹಿಂದೆ ಆಕೆಯೊಂದಿಗೆ ವಾಸಿಸುತ್ತಿದ್ದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಅಲ್ಲದೇ, ವಸಂತಿ ತನ್ನನ್ನು ದೈವಿ ಶಕ್ತಿ ಎಂದು ಹೇಳಿಕೊಂಡು ಅಸಭ್ಯ ಭಾಷೆ ಬಳಸುತ್ತಿದ್ದರು. ಬರ್ಮುಡಾ ಶಾರ್ಟ್ಸ್ ಧರಿಸಿ ಕುಣಿಯುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಹಲವಾರು ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದವು. ಇವುಗಳ ಬಗ್ಗೆ ಪ್ರಶ್ನಿಸಲು ಪ್ರಯತ್ನಿಸಿದಾಗಲೆಲ್ಲಾ ವಸಂತಿ ಸಾರ್ವಜನಿಕರ ಮೇಲೆ ಗೂಂಡಾಗಳ ಮೂಲಕ ಹಲ್ಲೆ ಮಾಡಿಸುತ್ತಿದ್ದರು. ತನ್ನ ವಿರುದ್ಧ ಮಾತನಾಡಿದವರಿಗೆ ಬೆದರಿಕೆ ಹಾಕಿದ್ದರು. ಯಾರಾದರೂ ತನ್ನನ್ನು ವಿರೋಧಿಸಿದರೆ ಅವರು 41 ದಿನಗಳಲ್ಲಿ ಸಾಯುತ್ತಾರೆ ಎಂದು ಭಯ ಹುಟ್ಟಿಸುತ್ತಿದ್ದರು ಎಂದು ಡಿವೈಎಫ್​ಐ ವಲಯ ಅಧ್ಯಕ್ಷರಾದ ವಿನೀತ್ ವಾಸುದೇವನ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮತ್ತೊಂದು ಭಯಾನಕ ಕೇಸ್​.. ನವರಾತ್ರಿ ಮೊದಲ ದಿನವೇ ಮಗಳನ್ನು ಬಲಿಕೊಟ್ಟಿತಾ ಕುಟುಂಬ!?

ಇದಲ್ಲದೇ, ಈ ಕೇಂದ್ರಕ್ಕೆ ನಿತ್ಯವೂ ಹೆಣ್ಣು ಮಕ್ಕಳು ಸೇರಿದಂತೆ ಹಲವು ಮಕ್ಕಳನ್ನು ಕರೆತರುತ್ತಿದ್ದು. ಕೇಂದ್ರದಲ್ಲಿ ಅನೈತಿಕ ಚಟುವಟಿಕೆಗಳು ನಡೆದಿರುವ ಶಂಕೆ ಇದೆ. ವಸಂತಿ ಜೊತೆಗೆ ವಾಸವಿದ್ದ ಇಬ್ಬರು ಪುರುಷರು ಬಹಳ ದಿನಗಳಿಂದ ನಾಪತ್ತೆಯಾಗಿದ್ದಾರೆ. ಎಳಂತೂರಿನಲ್ಲಿ ನರಬಲಿ ಪ್ರಕರಣ ಹೊರಬಿದ್ದ ನಂತರ ಆ ಪುರುಷರಿಗೂ ಏನಾದರೂ ಅನಾಹುತ ಸಂಭವಿಸಿರಬಹುದು ಎಂಬ ಅನುಮಾನ ಇದೆ. ಆದ್ದರಿಂದ ಕುರಿತಾಗಿ ಪೊಲೀಸರು ಸಮಗ್ರ ತನಿಖೆ ಮಾಡಬೇಕೆಂದು ಸ್ಥಳೀಯ ನಿವಾಸಿ ಹರಿ ಶ್ಯಾಮ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಏಳಿಗೆಗಾಗಿ ನರಬಲಿ.. ಮಹಿಳೆಯರನ್ನು ಅಪಹರಿಸಿ ತುಂಡು-ತುಂಡಾಗಿ ಕತ್ತರಿಸಿದ ಹಂತಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.