ಜಗತ್ತಿನಾದ್ಯಂತ ಇಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಮನುಷ್ಯರಿಗೆ ನೀರು, ಆಹಾರ ಮತ್ತು ಗಾಳಿಯಂತೆ ನಿದ್ರೆಯೂ ಬಹಳ ಮುಖ್ಯ. ನಿದ್ದೆ ನಮ್ಮ ದೇಹ ಮತ್ತು ಮನಸ್ಸನ್ನು ಪುನಃಶ್ಚೇತನಗೊಳಿಸುತ್ತದೆ. ನಿಗದಿತ ಸಮಯದ ನಿದ್ದೆ ವ್ಯಕ್ತಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ದಿನವನ್ನು ವಿಶೇಷವಾಗಿ ಆಚರಿಸಲು ಬೆಂಗಳೂರು ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಅಂತಾರಾಷ್ಟ್ರೀಯ ನಿದ್ರಾ ದಿನಾಚರಣೆಯಂದು ಐಚ್ಛಿಕ ರಜೆ ಘೋಷಿಸಿದೆ.
Wakefit Solutions, a D2C home-and-sleep solutions ಎಂಬ ಕಂಪನಿಯು ತನ್ನ ಗೃಹೋಪಯೋಗಿ ಉತ್ಪನ್ನಗಳಿಂದ ಜನಪ್ರಿಯವಾಗಿದೆ. ಇಂದು ಅಂತಾರಾಷ್ಟ್ರೀಯ ನಿದ್ರಾ ದಿನದ ಅಂಗವಾಗಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಆ ಪೋಸ್ಟ್ ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾದ ಇ-ಮೇಲ್‌ನ ಸ್ಕ್ರೀನ್‌ಶಾಟ್ ಆಗಿದೆ. ಇದರಲ್ಲಿ "ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್" ಎಂದು ಶೀರ್ಷಿಕೆ ನೀಡಲಾಗಿದೆ. "ವಿಶ್ವ ನಿದ್ರಾ ದಿನದ ಅಂಗವಾಗಿ ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ಮಾರ್ಚ್ 17, 2023 ರಂದು ವಿಶ್ರಾಂತಿ ಪಡೆಯಲು ರಜೆ ನೀಡಲಾಗಿದೆ. ಉದ್ಯೋಗಿಗಳು ವಿಶ್ರಾಂತಿ ಪಡೆಯಲು ಇದು ಉತ್ತಮ ಅವಕಾಶವಾಗಿದೆ." ಎಂದು ತಿಳಿಸಿದೆ.
-
Official Announcement 📢 #sleep #powernap #afternoonnap pic.twitter.com/9rOiyL3B3S
— Wakefit Solutions (@WakefitCo) May 5, 2022 " class="align-text-top noRightClick twitterSection" data="
">Official Announcement 📢 #sleep #powernap #afternoonnap pic.twitter.com/9rOiyL3B3S
— Wakefit Solutions (@WakefitCo) May 5, 2022Official Announcement 📢 #sleep #powernap #afternoonnap pic.twitter.com/9rOiyL3B3S
— Wakefit Solutions (@WakefitCo) May 5, 2022
"ನಮ್ಮ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6 ನೇ ಆವೃತ್ತಿಯು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕೆಲಸದ ಸಮಯದಲ್ಲಿ ನಿದ್ರೆಗೆ ಜಾರುವವರ ಪ್ರಮಾಣ 2022 ರಿಂದ ಶೇಕಡಾ 21 ಹೆಚ್ಚಳವಾಗಿದೆ ಮತ್ತು ಪ್ರತಿದಿನ ಬೆಳಗ್ಗೆ ಸುಸ್ತಾಗಿ ಏಳುವ ಜನರ ಪ್ರಮಾಣ 11% ಹೆಚ್ಚಳವಾಗಿದೆ ಎಂದು ಬಹಿರಂಗಪಡಿಸಿದೆ. ನಿದ್ರಾಹೀನತೆಯ ವ್ಯಾಪಕತೆಯನ್ನು ಪರಿಗಣಿಸಿ, ನಿದ್ರಾ ದಿನವನ್ನು ಆಚರಿಸಲು ನಮ್ಮ ಕಂಪನಿಯು ಉದ್ಯೋಗಿಗಳಿಗೆ ಈ ಉಡುಗೊರೆ ನೀಡಿದೆ. ನಾವು ಸ್ಲೀಪ್ ಡೇ ಅನ್ನು ಹಬ್ಬವೆಂದು ಪರಿಗಣಿಸುತ್ತೇವೆ, ನೀವು ಈ ರಜೆಯನ್ನು HR ಪೋರ್ಟಲ್ ಮೂಲಕ ಪಡೆಯಬಹುದು" ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: 9 ಗಂಟೆ ನಿದ್ರೆ ಮಾಡಿ 1 ಲಕ್ಷ ರೂ. ಪಡೆಯಿರಿ... ಬಟ್ ಕಂಡಿಷನ್ ಅಪ್ಲೈ..!
ಇನ್ನು ಕಂಪನಿಯು ತನ್ನ ಉದ್ಯೋಗಿಗಳಿಗೆ ಹೀಗೆ ನಿದ್ದೆ ಮಾಡಲು ರಜೆ ಘೋಷಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸಹ "ರೈಟ್ ಟು ನ್ಯಾಪ್ ನೀತಿ" ಯನ್ನು ಘೋಷಿಸಿತ್ತು. ಈ ಮೂಲಕ ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತು.
ಸಾಮಾಜಿಕ ಜಾಲತಾಣದಲ್ಲಿ ಕಂಪನಿಯ ಈ ಪೋಸ್ಟ್ ಹೆಚ್ಚು ಗಮನ ಸೆಳೆಯುತ್ತಿದೆ. ಸಂಸ್ಥೆಯು ಉದ್ಯೋಗಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ನೆಟಿಜನ್ ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ದೀರ್ಘ ಕಾಲದ ನಿದ್ರಾಹೀನತೆಗೆ ಕಾರಣವೇನು ಗೊತ್ತಾ!
ವಿಶ್ವ ನಿದ್ರಾ ದಿನದ ಇತಿಹಾಸ: ವಿಶ್ವ ನಿದ್ರಾ ದಿನವನ್ನು ವರ್ಲ್ಡ್ ಸ್ಲೀಪ್ ಸೊಸೈಟಿಯ ಮಾರ್ಗದರ್ಶನದಲ್ಲಿ ಮಾರ್ಚ್ ಮೂರನೇ ಶುಕ್ರವಾರದಂದು ಆಚರಿಸಲಾಗುವ ವಾರ್ಷಿಕ ಕಾರ್ಯಕ್ರಮವಾಗಿದೆ. ಇದು ವಿಶ್ವಾದ್ಯಂತ ನಿದ್ರೆಯ ಆರೋಗ್ಯವನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಹಿಂದೆ ವರ್ಲ್ಡ್ ಅಸೋಸಿಯೇಷನ್ ಆಫ್ ಸ್ಲೀಪ್ ಮೆಡಿಸಿನ್ ಎಂದು ಈ ಕಮಿಟಿ ಗುರುತಿಸಿಕೊಂಡಿತ್ತು. ಈ ಆಚರಣೆ 2008 ರಿಂದ ಚಾಲ್ತಿಯಲ್ಲಿದೆ. ಈ ವರ್ಷದ ವಿಶ್ವ ನಿದ್ರಾ ದಿನದ ಥೀಮ್ 'ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ'. ಇದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ದೆಯ ಮಹತ್ವವನ್ನು ಒತ್ತಿ ಹೇಳುತ್ತದೆ.