ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಐದು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ನಾಲ್ಕು ಹಂತದ ಪ್ರಚಾರಕ್ಕಾಗಿ ಬಿಜೆಪಿ ವಿಶೇಷ ಕ್ರಮ ಕೈಗೊಂಡಿದೆ. ತಾನು ನಡೆಸುವ ರ‍್ಯಾಲಿಗಳಲ್ಲಿ 500 ವ್ಯಕ್ತಿಗಳನ್ನ ಮೀರದಂತೆ ಕ್ರಮ ಕೈಗೊಂಡಿದೆ.
ದೇಶದಲ್ಲಿ ಎರಡನೇ ಹಂತದ ಕೋವಿಡ್ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಮಾಹಿತಿ ಹೊರಹಾಕಿದ್ದಾರೆ. ಏಪ್ರಿಲ್ 23ರಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಅದರಲ್ಲಿ 500 ಜನರು ಮಾತ್ರ ಭಾಗಿಯಾಗಲಿದ್ದಾರೆ, ಕೋವಿಡ್ ಮಾರ್ಗಸೂಚಿಗಳೊಂದಿಗೆ ಮುಂದಿನ ಎಲ್ಲ ಚುನಾವಣಾ ಪ್ರಚಾರ ನಡೆಸಲು ಬಿಜೆಪಿ ನಿರ್ಧರಿಸಿದ್ದು, ಹೆಚ್ಚಿನ ಎಲ್ಇಡಿ ಸ್ಕ್ರೀನ್ ಬಳಕೆ ಮಾಡಲು ಮುಂದಾಗಿದೆ.
ಏಪ್ರಿಲ್ 23ರಂದು ನಮೋ, ಮುರ್ಷಿದಾಬಾದ್, ಸೌತ್ ಕೋಲ್ಕತ್ತಾ, ಸಿಯೋರಿ ಹಾಗೂ ಮಾಲ್ಡಾದಲ್ಲಿ ಪ್ರಚಾರ ಸಭೆ ನಡೆಸಲಿದ್ದು, ಹೆಚ್ಚಿನ ಎಲ್ಇಡಿ ಸ್ಕ್ರೀನ್ ಬಳಕೆ ಮಾಡುವ ಮೂಲಕ ಪ್ರಚಾರ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕೇಂದ್ರ ಚುನಾವಣಾ ಆಯೋಗ ಕೂಡ ಕೆಲವೊಂದು ಮಾರ್ಗಸೂಚಿ ಹೊರಡಿಸಲಾಗಿದ್ದು, ಪ್ರತಿಯೊಂದು ಹಂತದಲ್ಲೂ 72 ಗಂಟೆ ಶಾಂತಿ ಕಾಪಾಡುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ಪಾದಕರಿಂದ ನೇರವಾಗಿ ಕೋವಿಡ್ ವ್ಯಾಕ್ಸಿನ್ ಖರೀದಿ: ರಾಜ್ಯಗಳಿಗೆ ಕೇಂದ್ರ ಹಸಿರು ನಿಶಾನೆ!
ಆರು ಕೋಟಿ ಮಾಸ್ಕ್ ಸ್ಯಾನಿಟೈಸರ್ ವಿತರಣೆ
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆರು ಕೋಟಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುವ ಉದ್ದೇಶ ಇಟ್ಟುಕೊಂಡಿದೆ ಎಂದು ಬಿಜೆಪಿ ತಿಳಿಸಿದೆ. ಅಪ್ನಾ ಬೂತ್ ಕೊರೊನಾ ಮುಕ್ತ ಕಾರ್ಯಕ್ರಮಕ್ಕೆಎ ನಾಳೆ ಚಾಲನೆ ನೀಡುವುದಾಗಿ ನಡ್ಡಾ ತಿಳಿಸಿದ್ದಾರೆ.
ಕೊರೊನಾ ಹೆಚ್ಚಾಗಿರುವ ಕಾರಣ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಯಾವುದೇ ಪ್ರಚಾರ ರ‍್ಯಾಲಿ ನಡೆಸುವುದಿಲ್ಲ ಎಂದು ಘೋಷಣೆ ಮಾಡಿದ್ದು, ರಾಹುಲ್ ಗಾಂಧಿ ಕೂಡ ತಮ್ಮ ಎಲ್ಲ ಪ್ರಚಾರ ಸಭೆ ರದ್ದುಗೊಳಿಸಿದ್ದಾರೆ