ಖರಗ್‌ಪುರ (ಪಶ್ಚಿಮ ಬಂಗಾಳ): ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಿಜೆಪಿಯನ್ನು ಆಶೀರ್ವದಿಸಲು ಬಂದಿರುವುದು ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕಾಂಗ್ರೆಸ್ ಮತ್ತು ಎಡಪಂಥೀಯರಿಂದ ನೀವು ವಿನಾಶವನ್ನು ನೋಡಿದ್ದೀರಿ. ಟಿಎಂಸಿ ನಿಮ್ಮ ಕನಸುಗಳನ್ನು ಹಾಳು ಮಾಡಿತು. ಕಳೆದ 70 ವರ್ಷಗಳಲ್ಲಿ ನೀವು ಎಲ್ಲರಿಗೂ ಅವಕಾಶಗಳನ್ನು ನೀಡಿದ್ದೀರಿ. ಆದರೆ ನಮಗೆ 5 ವರ್ಷಗಳನ್ನು ನೀಡಿ, 70 ವರ್ಷಗಳ ವಿನಾಶದಿಂದ ನಾವು ಬಂಗಾಳವನ್ನು ಮುಕ್ತಗೊಳಿಸುತ್ತೇವೆ, ನಿಮಗಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರಕ್ಕೆ ಶ್ರೀಲಂಕಾದ ಸೀತಾ ಮಂದಿರದ ಕಲ್ಲು
ನಿನ್ನೆ ರ‍್ಯಾ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ 50 ರಿಂದ 55 ನಿಮಿಷದ ವರೆಗೆ ಸ್ಥಗಿತಗೊಂಡಿತ್ತು. ಆದರೆ ಬಂಗಾಳದಲ್ಲಿ ಅಭಿವೃದ್ಧಿ ಮತ್ತು ಕನಸುಗಳು 50-55 ವರ್ಷಗಳಿಂದ ಸ್ಥಗಿತಗೊಂಡಿವೆ. ಮೊದಲು ಕಾಂಗ್ರೆಸ್ ಸರ್ಕಾರ, ಬಳಿಕ ಎಡಪಕ್ಷ ಹಾಗೂ ಈಗ ತೃಣಮೂಲ ಕಾಂಗ್ರೆಸ್ನಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮೋದಿ ಆರೋಪಿಸಿದರು.