ಹೂಗ್ಲಿ(ಪಶ್ಚಿಮ ಬಂಗಾಳ): ಮೌಂಟ್ ಎವರೆಸ್ಟ್ ಶಿಖರವನ್ನು ಏರುವುದು ಅಷ್ಟು ಸುಲಭವಲ್ಲ. ಮೇಲೆ ಹತ್ತಿದಂತೆ ಗಾಳಿಯ ಪ್ರಮಾಣ ಕಡಿಮೆಯಾಗಿ, ಆಮ್ಲಜಕದ ಕೊರತೆಯಾಗುತ್ತದೆ. ಹೀಗಾಗಿ ಪರ್ವತಾರೋಹಿಗಳು ಆಮ್ಲಜನಕ ಸಿಲಿಂಡರ್ ಕೊಂಡೊಯ್ಯುತ್ತಾರೆ. ಆದರೆ, ಯುವ ಮಹಿಳಾ ಪರ್ವತಾರೋಹಿಯಾದ ಪಶ್ಚಿಮಬಂಗಾಳದ ಪಿಯಾಲಿ ಬಸಕ್ ಆಮ್ಲಜನಕ ಸಿಲಿಂಡರ್ ಇಲ್ಲದೇ ಮೌಂಟ್ ಎವರೆಸ್ಟ್ ಶಿಖರ ಹತ್ತಿದ್ದು, ಮೊದಲ ಭಾರತೀಯರು ಎಂಬ ದಾಖಲೆ ಬರೆದಿದ್ದಾರೆ.
ಮೇ 22 ರಂದು ಭಾನುವಾರ ಬೆಳಗ್ಗೆ 8:30ಕ್ಕೆ ಪಿಯಾಲಿ ಬಸಕ್ ಅವರು ಈ ಸಾಧನೆ ಮಾಡಿದರು. ಪಿಯಾಲಿ ಸಾಕಷ್ಟು ಸಮಯದಿಂದ ಇದಕ್ಕಾಗಿ ತಯಾರಿ ನಡೆಸಿದ್ದರು. ಎವರೆಸ್ಟ್ ಹತ್ತಲು ಪೂರ್ವಾಭ್ಯಾಸ ನಡೆಸಿದ್ದರು.
ವಿಶ್ವದ ಅತಿ ಎತ್ತರದ ಶಿಖರವನ್ನು ಹತ್ತುವ ಪಿಯಾಲಿ ಅವರ ಹಾದಿಯು ಸುಲಭವಾಗಿರಲಿಲ್ಲ. ಕೆಲವು ದಿನಗಳ ಹಿಂದೆ, ಅವರು ಎತ್ತರದ ಶಿಖರವನ್ನು ಹತ್ತುವ ಕುರಿತು ಬೇಸ್ ಕ್ಯಾಂಪ್‌ನಿಂದ ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಳು.
ಓದಿ: ಜೈಲಿನಲ್ಲಿರುವ ನವಜೋತ್ ಸಿಧು ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ: ಪಂಜಾಬ್ ಜೈಲು ಇಲಾಖೆ