ETV Bharat / bharat

ಕರ್ನಾಟಕದಲ್ಲಿ ಮರಾಠಿಗರ ಮೇಲಿನ ದೌರ್ಜನ್ಯ ನಿಲ್ಲಿಸಿ; ಶಿವಸೇನಾ ಮುಖವಾಣಿ ಸಾಮ್ನಾ ಮೊಂಡಾಟ - ಕರ್ನಾಟಕದಲ್ಲಿ ಮರಾಠಿಗರ ಮೇಲಿನ ದೌರ್ಜನ್ಯ ನಿಲ್ಲಿಸಿ

ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಕೆಲವು ವರ್ಷಗಳಿಂದ ಇದನ್ನು ನೋಡುತ್ತಿದ್ದೇವೆ. ಇಂತಹ ಪ್ರಕರಣಗಳು ಶಾಶ್ವತವಾಗಿ ನಿಲ್ಲಿಸಬೇಕೆಂದು ಶಿವಸೇನಾ ಮುಖವಾಣಿ ಸಾಮ್ನಾ ತಮ್ಮ ಸಂಪಾದಕೀಯ ಪುಟದಲ್ಲಿ ವರದಿ ಪ್ರಕಟಿಸಿ ಒತ್ತಾಯಿಸಿದೆ.

Belgaum border dispute: Stop 'onslaught' on Marathi people living in Karnataka
ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರ ಮೇಲಿನ ದೌರ್ಜನ್ಯ ನಿಲ್ಲಿಸಿ; ಶಿವಸೇನಾ ಮುಖವಾಣಿ ಸಾಮ್ನಾ ಮೊಂಡಾಟ
author img

By

Published : Dec 16, 2021, 7:33 PM IST

Updated : Dec 16, 2021, 7:50 PM IST

ಮುಂಬೈ: ಮಹಾರಾಷ್ಟ್ರದ ಗಡಿ ಸಮೀಪದ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಮರಾಠಿ ಜನರು ವಾಸಿಸುತ್ತಿದ್ದಾರೆ. ಇವರನ್ನು ಯಾವಾಗಲೂ ಹೊರಗಿನವರಂತೆ ನೋಡಲಾಗುತ್ತಿದ್ದು, ಆಗಾಗ ಹಲ್ಲೆಗಳು ಮಾಡುತ್ತಿರುವುದನ್ನು ನಾನು ಹಲವು ವರ್ಷಗಳಿಂದ ನೋಡುತ್ತಲೇ ಬಂದಿದ್ದೇವೆ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಬರೆದುಕೊಂಡಿದೆ.

ತನ್ನ ಸಂಪಾದಕೀಯ ಪುಟದಲ್ಲಿ ವರದಿ ಪ್ರಕಟಿಸಿರುವ ಸಾಮ್ನಾ, ಮರಾಠಿ ಜನರಿಗೆ ಅಲ್ಲಿ ತಾರತಮ್ಯ ಜೊತೆಗೆ ಅವರ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಫೋರಂನ ನಾಯಕ ದೀಪಕ್‌ ದಳವಿಗೆ ಕೆಲ ದುಷ್ಕರ್ಮಿಗಳು ಮಸಿ ಬಳಿದಿದ್ದಾರೆ. ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಹೇಳಿದೆ.

ಪ್ರಕರಣವನ್ನು ಮಹಾರಾಷ್ಟ್ರದ ಆಡಳಿತ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಘಟನೆಯನ್ನು ಖಂಡಿಸಿದ್ದಾರಷ್ಟೇ. ಇದರಲ್ಲಿ ಬಹಳ ವ್ಯತ್ಯಾಸವೇನಿಲ್ಲ. ಮರಾಠಿಗರ ಮೇಲೆ ನಡೆಯುತ್ತಿರುವ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತವಾಗಿ ನಿಲ್ಲಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೆಲವು ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುತ್ತಿರುವ ಮರಾಠಿಗರು 60-65 ವರ್ಷಗಳಿಂದ ಕೆಲವು ಸಾಕಷ್ಟು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಅದಷ್ಟೂ ಬೇಗ ಇದನ್ನು ನಿಲ್ಲಿಸಬೇಕೆಂದು ಎಂದು ಹೇಳಿದೆ. ಅದೇನೇ ಇದ್ದರೂ, ಕಾಲಾನಂತರದಲ್ಲಿ ಮರಾಠಿ ಮಾತನಾಡುವವರ ಒಗ್ಗಟ್ಟು ದುರ್ಬಲಗೊಂಡಿತು, ಆದರೆ, ಕರ್ನಾಟಕದಲ್ಲಿ ವಾಸಿಸುವ ಜನರ ಉದ್ದೇಶಕ್ಕಾಗಿ ಹೋರಾಟ ಮಾಡುವ ವೇದಿಕೆ ಇದೆ. ಹಾಗಾಗಿ ‘ಮರಾಠಿ ಅಸ್ಮಿತೆ’ಗಾಗಿ ಹೋರಾಡುತ್ತಿರುವ ಜನರ ಕೈಗಳನ್ನು ಬಲಪಡಿಸಲು ಮಹಾರಾಷ್ಟ್ರದ ನಾಯಕರು ಮುಂದಾಗಬೇಕು ಎಂದು ಹೇಳಿದೆ.

ಇದನ್ನೂ ಓದಿ: ಲಖೀಂಪುರ ಖೇರಿ ಪ್ರಕರಣ; ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರತಿಭಟನೆ: ಸಚಿವ ಟೆನಿ ರಾಜೀನಾಮೆಗೆ ಪಟ್ಟು

Last Updated : Dec 16, 2021, 7:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.