ಶ್ರೀಕಾಕುಳಂ (ಆಂಧ್ರಪ್ರದೇಶ): ಜಿಲ್ಲೆಯ ವಜ್ರಪುಕೊತ್ತೂರು ವಲಯದ ಕಿಡಿಸಿಂಗಿ ಗ್ರಾಮದಲ್ಲಿ ಕರಡಿಯೊಂದು 8 ಜನರು ಹಾಗೂ 10 ಹಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಜನರ ಕಣ್ಣು, ಕಿವಿ, ಮುಖದ ಮೇಲೆ ಗಾಯಗಳಾಗಿದ್ದು, ಪಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಇದೇ ಭಾಗದಲ್ಲಿ ಕರಡಿ ದಾಳಿಗೆ ಕೋದಂಡರಾವ್ ಎಂಬ ವೃದ್ಧ ಮೃತಪಟ್ಟಿದ್ದರು. ಬೆಳಗ್ಗೆ ತೋಟಕ್ಕೆ ಹೋಗುತ್ತಿದ್ದಾಗ ಪೊದೆಯಲ್ಲಿದ್ದ ಕರಡಿ ಏಕಾಏಕಿ ಇವರ ಮೇಲೆ ದಾಳಿ ಮಾಡಿತ್ತು. ಈ ರೀತಿಯ ನಿರಂತರ ಘಟನೆಗಳಿಂದ ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: ನಾಲ್ಕು ದಿನಗಳಲ್ಲಿ ಮತ್ತೊಂದು ಘಟನೆ.. ಮನೆಯ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣಬಿಟ್ಟ ತಾಯಿ -ಮಕ್ಕಳು!