ETV Bharat / bharat

ಮಾಂಸದಂಗಡಿಗಳ ಮೇಲೆ ಕರಡಿಗಳ ದಾಳಿ.. ಭಯ- ಭೀತರಾದ ಜನ - ಉತ್ತರಾಖಂಡದ ಪೌರಿ ಕೋಟ್‌ದ್ವಾರ

ಮಾಂಸದಂಗಡಿಯೊಂದರ ಮೇಲೆ ಕರಡಿಗಳು ದಾಳಿ ಮಾಡಿರುವ ಘಟನೆ ಉತ್ತರಾಖಂಡದ ಪೌರಿ ಕೋಟ್‌ದ್ವಾರದಲ್ಲಿ ನಡೆದಿದೆ.

bear-menace-in-pauri-region-of-uttarakhand-raiding-chicken-and-mutton-shops
ಮಾಂಸದಂಗಡಿಗಳ ಮೇಲೆ ಕರಡಿಗಳ ದಾಳಿ
author img

By

Published : Dec 7, 2022, 5:11 PM IST

ಪೌರಿ (ಉತ್ತರಾಖಂಡ): ಉತ್ತರಾಖಂಡದ ಪೌರಿ ಕೋಟ್‌ದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಆಗ್ರೋಡಾ ಕಸ್ಬಾ ಪ್ರದೇಶದಲ್ಲಿ ಇತ್ತೀಚೆಗೆ ಕರಡಿಗಳ ಹಾವಳಿ ಹೆಚ್ಚಾಗಿದೆ. ನಸುಕಿನಲ್ಲಿ ಮಾಂಸದಂಗಡಿಗಳ ಮೇಲೆ ಕರಡಿಗಳು ದಾಳಿ ಮಾಡುತ್ತಿವೆ.

ಮಂಗಳವಾರ ಕೂಡ ಮಾಂಸದಂಗಡಿಯೊಂದರಲ್ಲಿ ಕರಡಿಗಳು ದಾಳಿ ಮಾಡಿ ಕೋಳಿ ಮತ್ತು ಕುರಿ ಮಾಂಸವನ್ನು ತಿಂದು ಹಾಕಿವೆ. ಕರಡಿಗಳ ಹಾವಳಿ ಬಗ್ಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕರಡಿ ದಾಳಿಯ ಘಟನೆ ವರದಿಯಾದಾಗಲೆಲ್ಲ ಸ್ಥಳದಲ್ಲಿ ಒಂದಿಬ್ಬರು ಅರಣ್ಯ ಸಿಬ್ಬಂದಿಯನ್ನು ಕೆಲ ಕಾಲ ನಿಯೋಜಿಸಲಾಗಿತ್ತು. ಇದಾದ ಬಳಿಕ ಅವುಗಳ ಸೆರೆಗೂ ಯಾವ ಕ್ರಮಗಳ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನೂ ಓದಿ: ಕಬ್ಬಿನ ತೋಟದಲ್ಲಿ3 ಚಿರತೆ ಮರಿ ಪತ್ತೆ: ಮರಿಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ತಾಯಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.