ETV Bharat / bharat

ಕೊರೊನಾದಿಂದ ಗುಣಮುಖ.. ಒಮಿಕ್ರಾನ್​ ವರದಿಯೂ ನೆಗೆಟಿವ್.. ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್​ - Ganguly discharged from hospital

Ganguly discharged from hospital : ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ..

Ganguly tested negative for Omicron
Ganguly tested negative for Omicron
author img

By

Published : Dec 31, 2021, 3:41 PM IST

Updated : Dec 31, 2021, 4:49 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ) : ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇದರ ಜೊತೆಗೆ ಅವರ ಒಮಿಕ್ರಾನ್​​ ವರದಿ ನೆಗೆಟಿವ್​ ಬಂದಿದೆ.

ಕೋವಿಡ್​ನಿಂದ ಗುಣಮುಖ, ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್​

ಕಳೆದ ಸೋಮವಾರ ಆರ್​ಟಿ-ಪಿಸಿಆರ್​ ಪರೀಕ್ಷೆಗೊಳಗಾಗಿದ್ದ ಗಂಗೂಲಿ ಅವರಿಗೆ ಕೋವಿಡ್​-19 ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಅವರನ್ನ ವುಡ್​ಲ್ಯಾಂಡ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾದ ಮೂರನೇ ದಿನ ಸೌರವ್​ ಗಂಗೂಲಿ ಅವರ ಹೀಮೊಡೈನಮಿಕ್‌ ಸ್ಥಿರವಾಗಿತ್ತು ಮತ್ತು ಜ್ವರ ರಹಿತರಾಗಿದ್ದರು.

ಗಂಗೂಲಿ ಅವರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ, ಗಂಗೂಲಿ ಅವರು ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಅವರು ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇಂದು ಅವರ ಒಮಿಕ್ರಾನ್ ವರದಿ ನೆಗೆಟಿವ್ ಬಂದಿದ್ದರಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಇದನ್ನೂ ಓದಿರಿ: ಬಿಗ್​ಬ್ಯಾಷ್ ಲೀಗ್​ನಲ್ಲಿ ಕೋವಿಡ್​ ಆಟ: 11 ಆಟಗಾರರು, 8 ಮಂದಿ ಸಿಬ್ಬಂದಿಗೆ ವೈರಸ್​

49 ವರ್ಷದ ಬಿಸಿಸಿಐ ಅಧ್ಯಕ್ಷ ಕಳೆದ ಸೋಮವಾರ ರಾತ್ರಿ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಥೆರಪಿಗೆ ಒಳಗಾಗಿದ್ದರು. ಎದೆನೋವಿನ ಕಾರಣ ಇದೇ ವರ್ಷದ ಜನವರಿಯಲ್ಲಿ ಗಂಗೂಲಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಲಘು ಹೃದಯಾಘಾತಕ್ಕೊಳಗಾಗಿರುವುದು ದೃಢಗೊಂಡಿತ್ತು.

Last Updated : Dec 31, 2021, 4:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.