ಮಂಚೇರಿಯಲ್(ತೆಲಂಗಾಣ): ಮಂಚೇರಿಯಲ್ ಜಿಲ್ಲೆಯಲ್ಲಿರುವ ಬಾಯ್ಸ್ ಹಾಸ್ಟೇಲ್ನಲ್ಲಿ ವಿದ್ಯಾರ್ಥಿಗಳು ಬಿಯರ್ ಮತ್ತು ಚಿಕನ್ ಪಾರ್ಟಿ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಬಿಸಿ ಎಂಬ ಹೆಸರಿನ ಹಾಸ್ಟೆಲ್ನಲ್ಲಿ 10 ಮತ್ತು ಅದಕ್ಕಿಂತಲೂ ಕೆಳ ತರಗತಿಗಳ ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡಿದ್ದಾರೆ. ಹಾಸ್ಟೆಲ್ ವಾರ್ಡನ್ ಅನುಮತಿ ಪಡೆದು ಏಪ್ರಿಲ್ 17ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ವ್ಯಕ್ತಿ ಚಿಕನ್ ಅಡುಗೆ ಮಾಡಿದ್ದರೆಂದು ವರದಿಯಾಗಿದೆ.
ರಾತ್ರಿ ರಾತ್ರಿ 9.30ರ ವೇಳೆ ವಿದ್ಯಾರ್ಥಿಗಳು ಊಟ ಮಾಡಿದ್ದು, ಇದಾದ ಬಳಿಕ ವಾರ್ಡನ್ ಮನೆಗೆ ತೆರಳಿದ್ದಾನೆ. ಇದರ ಬೆನ್ನಲ್ಲೇ ಹೊರಗಿನ ಸ್ನೇಹಿತರ ಸಹಾಯದಿಂದ ಬಿಯರ್ ಬಾಟಲಿ ಖರೀದಿಸಿ, ಪಾರ್ಟಿ ಮಾಡಿದ್ದಾರೆ. ತಮ್ಮ ಮೊಬೈಲ್ನಲ್ಲಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನೋಡಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಕೆಜಿಎಫ್ 2; ಭಾವನಾತ್ಮಕ ವಿಡಿಯೋ ಹರಿಬಿಟ್ಟ ಯಶ್
ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಅಧಿಕಾರಿ ಭಾಗ್ಯಮತಿ ಮಾಹಿತಿ ಪಡೆದುಕೊಂಡಿದ್ದು, ಪೋಷಕರ ಮುಂದೆ ಕೌನ್ಸಿಲಿಂಗ್ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ವಾರ್ಡನ್ ಅನುಮತಿ ಪಡೆದೇ ಚಿಕನ್ ಬೇಯಿಸಿ ತಿಂದಿದ್ದಾರೆ. ವಾರ್ಡನ್ ಮನೆಗೆ ಹೋದ ನಂತರ ಬಿಯರ್ ಪಾರ್ಟಿ ಮಾಡಿದ್ದು, ಇದರಲ್ಲಿ ಹಾಸ್ಟಲ್ ವಾರ್ಡನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದಿದ್ದಾರೆ.