ETV Bharat / bharat

ಅಶ್ಲೀಲ ಫೋಟೋಗಳಿಗಾಗಿ ಬಾಲಕನಿಗೆ ಹಣ ನೀಡಿದ ಆರೋಪ: ಬಿಬಿಸಿ ನಿರೂಪಕ ಅಮಾನತು - ಅಶ್ಲೀಲ ಫೋಟೋಗಳಿಗಾಗಿ ಬಾಲಕನಿಗೆ ಹಣ ನೀಡಿದ ಆರೋಪ

ಬ್ರಿಟೀಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾನುವಾರ ತನ್ನ ಪ್ರಮುಖ ನಿರೂಪಕರಲ್ಲಿ ಒಬ್ಬರನ್ನು ಅಮಾನತುಗೊಳಿಸಿದೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jul 10, 2023, 2:23 PM IST

ಲಂಡನ್‌: ಅಶ್ಲೀಲ ಫೋಟೋಗಳಿಗಾಗಿ ಬಾಲಕನಿಗೆ ಹಣ ನೀಡಿದ ಆರೋಪದ ಮೇಲೆ ಪ್ರಮುಖ ನಿರೂಪಕನನ್ನು ಅಮಾನತುಗೊಳಿಸಲಾಗಿದೆ ಎಂದು ಬ್ರಿಟೀಷ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್(ಬಿಬಿಸಿ) ಭಾನುವಾರ ತಿಳಿಸಿದೆ. ಪ್ರಚೋದನ್ಮಾತಕ ಹಾಗೂ ಅಸಭ್ಯಕರವಾಗಿ ಚಿತ್ರ ತೆಗೆಯಿಸಿಕೊಳ್ಳಲು ಬಿಬಿಸಿ ವಾಹಿನಿಯ ನಿರೂಪಕರೊಬ್ಬರು ಬಾಲಕನಿಗೆ ಹಣ ನೀಡಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಬ್ರಿಟನ್‌ನ ಹಿರಿಯ ರಾಜಕಾರಣಿಗಳು ಸುದ್ದಿಸಂಸ್ಥೆಗೆ ಒತ್ತಾಯಿಸಿದ್ದರು. ಅದರಂತೆ ಸಂಕೀರ್ಣ ಮತ್ತು ವೇಗವಾಗಿ ಬದಲಾಗುವ ಸನ್ನಿವೇಶಗಳ ಸತ್ಯಗಳನ್ನು ಕಂಡು ಹಿಡಿಯಲು ಅದು ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಸಾರಕರು ಹೇಳಿದ್ದಾರೆ.

ಸುದ್ದಿಸಂಸ್ಥೆಯ ಪುರುಷ ನಿರೂಪಕರೊಬ್ಬರು 17 ವರ್ಷದ ಬಾಲಕನಿಗೆ 35 ಸಾವಿರ ಪೌಂಡ್ ನೀಡಿದ್ದರು ಎಂದು ಸ್ಥಳೀಯ 'ದಿ ಸನ್‌' ದಿನಪತ್ರಿಕೆ ವರದಿ ಮಾಡಿತ್ತು. ಹಣ ನೀಡಿದ್ದ ಆರೋಪ ಕುರಿತಂತೆ ಬಿಬಿಸಿಯು ಪ್ರಸ್ತುತ ನಿರೂಪಕನನ್ನು ಅಮಾನತು ಮಾಡಿದೆ. ಆದರೆ, ನಿರೂಪಕ ಅಥವಾ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಆ ನಿರೂಪಕ ಯಾರಿರಬಹುದು ಎಂಬ ಬಗ್ಗೆ ಜಾಲದಾಣಗಳಲ್ಲಿ ವದಂತಿ, ಚರ್ಚೆ ನಡೆದಿದೆ. ಹೀಗಾಗಿ, ಬಿಬಿಸಿಯ ಹೆಸರಾಂತ ನಿರೂಪಕರು ಸ್ವಯಂಪ್ರೇರಿತವಾಗಿ 'ಆ ನಿರೂಪಕ ನಾನಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಲೈಂಗಿಕತೆಗೆ ಸಮ್ಮತಿ ನೀಡಲು ಕಾನೂನು ಪ್ರಕಾರ ಗರಿಷ್ಠ ವಯೋಮಾನ 16 ವರ್ಷ. ಆದರೆ 18 ವರ್ಷದೊಳಗಿನವರನ್ನು ಅಸಭ್ಯ ರೀತಿಯಲ್ಲಿ ಚಿತ್ರ ತೆಗೆಯಿಸಿಕೊಳ್ಳುವಂತೆ ಪ್ರಚೋದಿಸುವುದು ಅಪರಾಧ. ದಿ ಸನ್‌ ದಿನಪತ್ರಿಕೆಯ ವರದಿ ಪ್ರಕಾರ ಬಾಲಕನ ತಾಯಿ ಮೇ ತಿಂಗಳಲ್ಲಿಯೇ ಬಿಬಿಸಿ ಸುದ್ದಿ ಸಂಸ್ಥೆಗೆ ನಿರೂಪಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದರು. ಆದರೆ ನಿರೂಪಕರು ಪ್ರಸಾರದಲ್ಲಿಯೇ ಉಳಿದಿದ್ದಾರೆ ಎಂದು ದಿ ಸನ್ ಹೇಳಿದೆ.

ಈ ಬೆಳವಣಿಗೆಗೆ ಕುರಿತು ನೀಡಿರುವ ಹೇಳಿಕೆಯಲ್ಲಿ ಬಿಬಿಸಿ ಸಂಸ್ಥೆ "ಯಾವುದೇ ರೀತಿಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಹಾಗೂ ಅಂತಹ ಆರೋಪಗಳನ್ನು ಸಕಾರಾತ್ಮಕವಾಗಿ ನಿರ್ವಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು. ಸಚಿವೆ ವಿಕ್ಟೋರಿಯ ಅಕಿನ್ಸ್ ಅವರು ಬಿಬಿಸಿ ವಿರುದ್ಧದ ಆರೋಪಗಳು ಗಂಭೀರವಾದುದು. ಸಾರ್ವಜನಿಕವಾಗಿ ಈ ಬಗ್ಗೆ ಕಳವಳ ಹೆಚ್ಚುತ್ತಿರುವ ಕಾರಣ ಸುದ್ದಿಸಂಸ್ಥೆಯು ತ್ವರಿತವಾಗಿ ಕ್ರಮಕೈಗೊಳ್ಳಬೇಕು. ಅಗತ್ಯ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದ್ದರು.

ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಸಿಯ ಹೇಳಿಕೆಗಳು:

  • " ಬಿಬಿಸಿ ಯಾವುದೇ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಅಂತಹ ಆರೋಪಗಳನ್ನು ಪೂರ್ವಭಾವಿಯಾಗಿ ಎದುರಿಸಲು ನಾವು ದೃಢವಾದ ಆಂತರಿಕ ಪ್ರಕ್ರಿಯೆಗಳನ್ನು ಹೊಂದಿದ್ದೇವೆ" ಎಂದು ಸುದ್ದಿ ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
  • 'ಬಾಹ್ಯ ಅಧಿಕಾರಿಗಳೊಂದಿಗೆ' ಸಂಪರ್ಕದಲ್ಲಿರುವುದನ್ನು ಬಿಬಿಸಿ ಖಚಿತಪಡಿಸುತ್ತದೆ. ಇದಲ್ಲದೇ "ಪುರುಷ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ" ಎಂದು ದೃಢಪಡಿಸಿದೆ.
  • ಯುಕೆ ಸಂಸ್ಕೃತಿ ಕಾರ್ಯದರ್ಶಿ ಲೂಸಿ ಫ್ರೇಜರ್ ಅವರು ಸುದ್ದಿ ಪ್ರಸಾರದ ಮಹಾನಿರ್ದೇಶಕ ಟಿಮ್ ಡೇವಿ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ಬಿಬಿಸಿ ಬಹಿರಂಗಪಡಿಸಿದೆ.
  • ಹಲವಾರು ಬಿಬಿಸಿ ನಿರೂಪಕರು ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
  • ಆರೋಪ ಬಹಿರಂಗವಾದ ಬಳಿಕ ಹಲವಾರು ಬಿಬಿಸಿ ನಿರೂಪಕರು ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಆಪಾದಿತ ಪ್ರಸಾರಕರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಬಿಸಿ ಇಂಡಿಯಾ ವಿರುದ್ಧ ಫೆಮಾ ಕಾಯ್ದೆಯಡಿ ಕೇಸ್​ ದಾಖಲಿಸಿದ ಇಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.