ETV Bharat / bharat

ಬಾಟ್ಲಾ ಹೌಸ್​ ಎನ್​ಕೌಂಟರ್​: ಉಗ್ರ ಆರಿಝ್​ ಖಾನ್​ಗೆ ಗಲ್ಲು ಶಿಕ್ಷೆ, 11 ಲಕ್ಷ ರೂ.ದಂಡ - ಇಂಡಿಯನ್​ ಮುಜಾಹಿದ್ದೀನ್​ ಉಗ್ರ ಆರಿಝ್​

ಬಾಟ್ಲಾ ಎನ್​​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಇಂಡಿಯನ್​ ಮುಜಾಹಿದ್ದೀನ್​ ಉಗ್ರನಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿ ಆದೇಶ ಹೊರಡಿಸಿದೆ.

Batla House encounter
Batla House encounter
author img

By

Published : Mar 15, 2021, 7:52 PM IST

ನವದೆಹಲಿ: 2008ರಲ್ಲಿ ಹೆಚ್ಚು ಸದ್ದು ಮಾಡಿದ್ದ ಬಾಟ್ಲಾ ಹೌಸ್​ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬಿದ್ದಿದ್ದು, ಇಂಡಿಯನ್​ ಮುಜಾಹಿದೀನ್​ ಉಗ್ರ ಸಂಘಟನೆ ಆರಿಝ್​​​ ಖಾನ್​ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.

Batla House encounter
ಬಾಟ್ಲಾ ಹೌಸ್​ ಎನ್​ಕೌಂಟರ್​ ಟೈಮ್​ಲೈನ್​​

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್​ಪೆಕ್ಟರ್​ ಮೋಹನ್​ ಚಂದ್​ ಶರ್ಮಾ ಅವರ ಕೊಲೆ ಹಾಗೂ ಇತರೆ ಅಪರಾಧಗಳ ಹಿಂದೆ ಆರಿಝ್​ ಖಾನ್​ ಕೈವಾಡವಿರುವುದು ಸಾಕ್ಷ್ಯಾಧಾರಗಳಿಂದ ದೃಢಗೊಂಡಿತ್ತು. ಹೀಗಾಗಿ 2021ರ ಮಾರ್ಚ್​ 7ರಂದು ದೆಹಲಿ ಕೋರ್ಟ್​ ದೋಷಿ ಎಂದು ತೀರ್ಪು ನೀಡಿತ್ತು, ಜತೆಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತು.

ಆರಿಝ್ ಖಾನ್​ಗೆ ಗಲ್ಲು ಶಿಕ್ಷೆ ಜತೆಗೆ 11 ಲಕ್ಷ ರೂ ದಂಡ ಪಾವತಿ ಮಾಡಲು ಸೂಚನೆ ನೀಡಿದೆ. ಇದರಲ್ಲಿ 10 ಲಕ್ಷ ರೂ. ಹತ್ಯೆಯಾಗಿರುವ ಪೊಲೀಸ್ ಇನ್ಸ್​ಪೆಕ್ಟರ್​ ಮೋಹನ್​ ಚಂದ್​ ಶರ್ಮಾ ಕುಟುಂಬಸ್ಥರಿಗೆ ನೀಡುವಂತೆ ಕೋರ್ಟ್​ ತಿಳಿಸಿದೆ. ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಅರಿಝ್​​ ಖಾನ್​ನನ್ನ ಫೆಬ್ರವರಿ 14, 2018ರಲ್ಲಿ ಬಂಧಿಸಲಾಗಿತ್ತು. ಬಾಟ್ಲಾ ಹೌಸ್​ ಪ್ರಕರಣದಲ್ಲಿ ಸುಮಾರು 30 ಜನರು ಸಾವನ್ನಪ್ಪಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ ಕೂಡ ಸಾವನ್ನಪ್ಪಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.