ETV Bharat / bharat

ಐಡಿಬಿಐನಲ್ಲಿ 2,100 ಹುದ್ದೆಗಳ ಭರ್ತಿಗೆ ಅಧಿಸೂಚನೆ: ಪದವೀಧರರಿಗೆ ಅವಕಾಶ

author img

By ETV Bharat Karnataka Team

Published : Nov 22, 2023, 12:36 PM IST

Updated : Nov 22, 2023, 3:31 PM IST

IDBI Recruitment: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​ ಮತ್ತು ಎಕ್ಸಿಕ್ಯುಟಿವ್​ (ಸೇಲ್ಸ್​ ಆ್ಯಂಡ್​ ಆಪರೇಷನ್ಸ್​​) ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Banking Job alert form IDBI recruiting 2100 post

ಬೆಂಗಳೂರು: ಇಂಡಸ್ಟ್ರಿಯಲ್​ ಡೆವಲಪ್‌ಮೆಂಟ್​​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ (ಐಡಿಬಿಐ) ಖಾಲಿ ಇರುವ 2,100 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಭಾರತದಾದ್ಯಂತ ನೇಮಕಾತಿ ನಡೆಯಲಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಹುದ್ದೆಗಳ ವಿವರ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​ 800, ಎಕ್ಸಿಕ್ಯುಟಿವ್​ (ಸೇಲ್ಸ್​ ಆ್ಯಂಡ್​ ಆಪರೇಷನ್ಸ್​​) 1,300 ಹುದ್ದೆಗಳಿವೆ.

ಅಧಿಸೂಚನೆ
ಅಧಿಸೂಚನೆ

ವಿದ್ಯಾರ್ಹತೆ: ಅಧಿಕೃತ ವಿಶ್ವವಿದ್ಯಾಲಯ/ಮಂಡಳಿಯಿಂದ ಪದವಿ ಶಿಕ್ಷಣ.

ವೇತನ: ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​​ಗೆ ವಾರ್ಷಿಕ ಪ್ಯಾಕೇಜ್​ 6,14,00-6,50,000 ರೂ. ಎಕ್ಸಿಕ್ಯೂಟಿವ್​ (ಸೇಲ್ಸ್​ ಆ್ಯಂಡ್​ ಆಪರೇಷನ್ಸ್​​) 29,000-31,000 ರೂ ವೇತನ ನಿಗದಿಪಡಿಸಲಾಗಿದೆ.

ವಯೋಮಿತಿ: ಕನಿಷ್ಠ ವಯಸ್ಸು 20. ಗರಿಷ್ಟ 25 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 200 ರೂ ಶುಲ್ಕವಿದೆ. ಸಾಮಾನ್ಯ ಅಭ್ಯರ್ಥಿಗಳು 1,000 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ.

ನವೆಂಬರ್​ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್​ 6 ಕಡೇಯ ದಿನಾಂಕ. ಜ್ಯೂನಿಯರ್​ ಅಸಿಸ್ಟೆಂಟ್​ ಮ್ಯಾನೇಜರ್​​ ಹುದ್ದೆಗೆ ಡಿಸೆಂಬರ್​​ 31ರಂದು ಎಕ್ಸಿಕ್ಯೂಟಿವ್​ ಹುದ್ದೆಗೆ ಡಿಸೆಂಬರ್​ 30ರಂದು ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿ, ಅಧಿಕೃತ ಅಧಿಸೂಚನೆಗೆ idbibank.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ; ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

Last Updated : Nov 22, 2023, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.