ETV Bharat / bharat

ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ.. 2 ಕೋಟಿ ಮೌಲ್ಯದ ಚಿನ್ನ, 31 ಲಕ್ಷ ರೂ.ದೋಚಿದ ಕಳ್ಳರು

ಸಿನಿಮೀಯ ರೀತಿಯಲ್ಲಿ ಬ್ಯಾಂಕ್​​​ ಕಳ್ಳತನ ಮಾಡಿರುವ ಐವರು ದುಷ್ಕರ್ಮಿಗಳು ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ 31 ಲಕ್ಷ ರೂ.ನಗದು ಕದ್ದು ಪರಾರಿಯಾಗಿದ್ದಾರೆ.

Bank robbery at Pimparkhed
Bank robbery at Pimparkhed
author img

By

Published : Oct 21, 2021, 7:00 PM IST

ಪುಣೆ(ಮಹಾರಾಷ್ಟ್ರ): ಬ್ಯಾಂಕ್​​ನೊಳಗೆ ನುಗ್ಗಿರುವ ಕಳ್ಳರು ಸಿನಿಮೀಯ ಸ್ಟೈಲ್​​ನಲ್ಲಿ ದರೋಡೆ ಮಾಡಿದ್ದು, ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೈಯಲ್ಲಿ ಗನ್​ ಹಿಡಿದುಕೊಂಡು ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದು, ದಾಖಲೆಯ 2 ಕೋಟಿ ಮೌಲ್ಯದ ಚಿನ್ನ ಹಾಗೂ 31 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ.

ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ ಮಾಡಿದ ಕಳ್ಳರು

ಮಹಾರಾಷ್ಟ್ರದ ಶಿರೂರು​ ತಾಲೂಕಿನ ಪಿಂಪಾರಖೇಡಿಯಲ್ಲಿರುವ ಬ್ಯಾಂಕ್​ ಆಫ್​ ಮಹಾರಾಷ್ಟ್ರ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಐವರು ದರೋಡೆಕೋರರು ರಿವಾಲ್ವರ್​ನಿಂದ ಬ್ಯಾಂಕ್​ ಉದ್ಯೋಗಿಗಳಿಗೆ ಬೆದರಿಸಿದ್ದಾರೆ.

ಇದನ್ನೂ ಓದಿರಿ: ಆರ್ಯನ್​ ಖಾನ್​ಗೆ ಜೈಲೇ ಗತಿ.. ಅ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮಧ್ಯಾಹ್ನ 1:30ರ ಸುಮಾರಿಗೆ ಕಳ್ಳತನ ನಡೆದಿದ್ದು, ಕೈಯಲ್ಲಿ ಗನ್​​ ಹಿಡಿದುಕೊಂಡು ಎಲ್ಲರೂ ಒಳಗೆ ನುಗ್ಗಿದ್ದಾರೆ. ಈ ವೇಳೆ, ಮ್ಯಾನೇಜರ್​ ಹಾಗೂ ಕ್ಯಾಷಿಯರ್​​ನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಲಾಕರ್​ಗಳ ಕೀ ತೆಗೆದುಕೊಂಡಿದ್ದಾರೆ. ತದನಂತರ ​2 ಕೋಟಿ ಮೌಲ್ಯದ ಚಿನ್ನ ಹಾಗೂ 31 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೇ ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.