ಹೈದರಾಬಾದ್ : ಮುಂಬೈನ ಜುಹು ಪ್ರದೇಶದಲ್ಲಿರುವ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ ಒಡೆತನದ ಬಂಗಲೆಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಇಂದು ಬ್ಯಾಂಕ್ ಆಫ್ ಬರೋಡಾ ಪ್ರಕಟಣೆ ಹೊರಡಿಸಿದೆ. ಇ-ಹರಾಜು ಮೂಲಕ ಗದರ್ 2 ನಟನ ಆಸ್ತಿಯನ್ನು ಆಗಸ್ಟ್ 25 ರಂದು ಮಾರಾಟ ಮಾಡಿ ಬಾಕಿ ಇರುವ 56 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಾಗುವುದು ಎಂದು ನಿನ್ನೆ (ಭಾನುವಾರ) ತಿಳಿಸಿತ್ತು.
-
Yesterday afternoon the nation got to know that Bank of Baroda had put up the Juhu residence of BJP MP Sunny Deol for e-auction since he has not paid up Rs 56 crore owed to the Bank.
— Jairam Ramesh (@Jairam_Ramesh) August 21, 2023 " class="align-text-top noRightClick twitterSection" data="
This morning, in less than 24 hours, the nation has got to know that the Bank of Baroda has…
">Yesterday afternoon the nation got to know that Bank of Baroda had put up the Juhu residence of BJP MP Sunny Deol for e-auction since he has not paid up Rs 56 crore owed to the Bank.
— Jairam Ramesh (@Jairam_Ramesh) August 21, 2023
This morning, in less than 24 hours, the nation has got to know that the Bank of Baroda has…Yesterday afternoon the nation got to know that Bank of Baroda had put up the Juhu residence of BJP MP Sunny Deol for e-auction since he has not paid up Rs 56 crore owed to the Bank.
— Jairam Ramesh (@Jairam_Ramesh) August 21, 2023
This morning, in less than 24 hours, the nation has got to know that the Bank of Baroda has…
ಸನ್ನಿ ಡಿಯೋಲ್ ಎಂಬ ಹೆಸರಿನಿಂದ ಕರೆಯಲ್ಪಡುವ ಶ್ರೀ ಅಜಯ್ ಸಿಂಗ್ ಡಿಯೋಲ್ ಅವರಿಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ವಿವರಿಸಿದೆ. ಸನ್ನಿಯ ಬಂಗಲೆ, ಸನ್ನಿ ವಿಲ್ಲಾ ಹೊರತಾಗಿ ಅದರ ಸುತ್ತ ಇರುವ 599.44 ಚದರ ಮೀಟರ್ ಪ್ರದೇಶ ಮತ್ತು ನಟನ ಕುಟುಂಬದ ಒಡೆತನದಲ್ಲಿರುವ ಸನ್ನಿ ಸೌಂಡ್ಸ್ ಕಂಪನಿಯನ್ನು ಹರಾಜು ಹಾಕಲಾಗುವುದು. ಜುಹು ಆಸ್ತಿಯ ಹರಾಜು 51.43 ಕೋಟಿ ರೂಪಾಯಿಗಳಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ, ಕನಿಷ್ಠ ಬಿಡ್ಡಿಂಗ್ ಮೊತ್ತವನ್ನು 5.14 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ನಿನ್ನೆ ಬ್ಯಾಂಕ್ ಹೇಳಿತ್ತು. ಇದೀಗ ಹರಾಜಿಗೂ ಮುನ್ನವೇ ಬ್ಯಾಂಕ್ ನೋಟಿಸ್ ಹಿಂಪಡೆದಿದ್ದು, ನಟನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸಾಲಕ್ಕೆ ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.
ಈ ಮಧ್ಯೆ ಹರಾಜು ನೋಟಿಸ್ ತ್ವರಿತ ಬದಲಾವಣೆಯ ಕುರಿತು ಕಾಂಗ್ರೆಸ್ ಆಕ್ರೋಶಗೊಂಡಿದೆ. ಈ ಬಗ್ಗೆ ಎಕ್ಸ್ ಆ್ಯಪ್ನಲ್ಲಿ ಅಭಿಪ್ರಾಯ ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್, " 56 ಕೋಟಿ ರೂಪಾಯಿಗಳನ್ನು ಪಾವತಿಸದ ಕಾರಣ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಜುಹು ನಿವಾಸವನ್ನು ಬ್ಯಾಂಕ್ ಆಫ್ ಬರೋಡಾ ಇ-ಹರಾಜಿಗೆ ಇಡಲಾಗಿದೆ ಎಂದು ನಿನ್ನೆ ಮಧ್ಯಾಹ್ನ ತಿಳಿಯಿತ್ತು. ಆದರೆ, 24 ಗಂಟೆಗಳು ಕಳೆಯುವ ಮುನ್ನವೇ 'ತಾಂತ್ರಿಕ ಕಾರಣಗಳಿಂದ' ಹರಾಜು ಸೂಚನೆಯನ್ನು ಹಿಂತೆಗೆದುಕೊಂಡಿದೆ ಎಂದು ತಿಳಿಸಿದೆ. ಈ ತಾಂತ್ರಿಕ ಕಾರಣಗಳನ್ನು ಯಾರು ಪ್ರಚೋದಿಸಿದರು?, ನೋಟಿಸ್ ಹಿಂತೆಗೆದುಕೊಳ್ಳುವಿಕೆಯ ಹಿಂದಿನ ಕಾರಣ ಏನು?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : 'ಗದರ್ 2' ಸಕ್ಸಸ್ ಮೂಡ್ನಲ್ಲಿದ್ದ ಸನ್ನಿ ಡಿಯೋಲ್ಗೆ ಶಾಕ್... ಮುಂಬೈನಲ್ಲಿರುನ ನಟನ ವಿಲ್ಲಾ ಹರಾಜಿಗಿಟ್ಟ ಬ್ಯಾಂಕ್!
ಇನ್ನೊಂದೆಡೆ, ಬಾಲಿವುಡ್ ನಿರ್ದೇಶಕ ಅನಿಲ್ ಶರ್ಮಾ ಅವರ ಹೊಸ ಸಿನಿಮಾ ಗದಾರ್ 2 ದಲ್ಲಿ ಸನ್ನಿ ಡಿಯೋಲ್ ಹಾಗೂ ಅಮೀಶಾ ಪಟೇಲ್ ಅವರು ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಅಫೀಸ್ ಹಿಟ್ ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆಗಸ್ಟ್ 11 ರಂದು ಅಕ್ಷಯ್ ಕುಮಾರ್ ಅವರ OMG 2 ಜೊತೆಗೆ ಏಕಕಾಲದಲ್ಲಿ ಬಿಡುಗಡೆಯಾದ ಗದರ್ 2 ಇಲ್ಲಿಯವರೆಗೆ ಭಾರತದಲ್ಲಿ 377.20 ಕೋಟಿ ರೂಪಾಯಿಗಳನ್ನು ಗಳಿಸಿದೆ.