ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ವ್ಯಾವಹಾರಿಕ ದಿನಗಳ ಸಂಖ್ಯೆ ಬಹಳ ಕಡಿಮೆ ಇದೆ. ದೇಶದ ನಾನಾ ಭಾಗಗಳಿಗೆ ಸಂಬಂಧಿಸಿದಂತೆ ಒಟ್ಟು ಈ ತಿಂಗಳಲ್ಲಿ 21 ರಜಾ ದಿನಗಳಿವೆ.
ರಿಸರ್ವ್ ಬ್ಯಾಂಕಿನ ಕ್ಯಾಲೆಂಡರ್ ಪ್ರಕಾರ, ಇಂದಿನಿಂದ ಮುಂದಿನ ವಾರದ ನಡುವೆ ಸುಮಾರು 8 ದಿನ ದೇಶದ ನಾನಾ ಭಾಗದಲ್ಲಿ ಬ್ಯಾಂಕ್ಗಳು ಮುಚ್ಚಿರಲಿವೆ.
ಸಾರ್ವಜನಿಕ ರಜಾ ದಿನಗಳು ಆಯಾ ರಾಜ್ಯಕ್ಕೆ ಅನುಗುಣವಾಗಿ ಬದಲಾಗಲಿವೆ. ಅಕ್ಟೋಬರ್‌ನಲ್ಲಿ 21 ಬ್ಯಾಂಕ್ ರಜಾ ದಿನಗಳಿವೆ. ಇಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ. ಅಕ್ಟೋಬರ್ 20ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಈದ್ ಮಿಲಾದ್ ಕಾರಣಕ್ಕೆ ಬ್ಯಾಂಕ್ ಬಾಗಿಲು ತೆರೆಯಲ್ಲ.
ಅಕ್ಟೋಬರ್ 21ರಂದು ಎಂದಿನಂತೆ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಮರುದಿನ ಅಕ್ಟೋಬರ್ 22ರಂದು ಈದ್-ಮಿಲಾದ್-ಉಲ್-ನಬಿ ಹಬ್ಬದ ಅಂಗವಾಗಿ ಜಮ್ಮು, ಶ್ರೀನಗರ ಭಾಗದಲ್ಲಿ ಬ್ಯಾಂಕ್ ರಜೆ ಇರಲಿದೆ.
ಅಕ್ಟೋಬರ್ 23 ರಂದು 4ನೇ ಶನಿವಾರ ದೇಶದ ಎಲ್ಲಾ ಭಾಗದಲ್ಲೂ ಬ್ಯಾಂಕ್ ರಜೆ. ಜೊತೆಗೆ 24ರ ಭಾನುವಾರ ಸಾರ್ವತ್ರಿಕ ರಜಾ ದಿನವಾಗಿರಲಿದೆ. ಬಳಿಕ 25ರಂದು ಎಂದಿನಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಿದರೆ, ಅ.26ರಂದು ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರ್ಪಡೆಗೊಂಡ ದಿನವಾಗಿದ್ದು, ಸಾರ್ವಜನಿಕ ರಜೆ ಘೋಷಿಸಲಾಗಿರುತ್ತದೆ. ಬಳಿಕ ಅ.31ರಂದು ಭಾನುವಾರವಾಗಿದ್ದು ಬ್ಯಾಂಕ್ ಕಾರ್ಯಾಚರಣೆ ಇರಲ್ಲ.
ಈ ರಜಾ ದಿನಗಳ ಗಮನದಲ್ಲಿಟ್ಟುಕೊಂಡು ಗ್ರಾಹಕರು ಬ್ಯಾಂಕಿಂಗ್ ಸಂಬಂಧಿಸಿದ ವ್ಯವಹಾರಗಳನ್ನು ನಡೆಸುವುದೊಳಿತು. ಒಂದು ವೇಳೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಸಮಸ್ಯೆ ಎದುರಾದರೆ ರಜೆ ಮುಗಿಯುವವರೆಗೂ ಕಾಯಬೇಕಾಗುತ್ತದೆ.