ETV Bharat / bharat

ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್​ಗೆ 3 ಕೋಟಿ ವಂಚನೆ - 3 ಕೋಟಿ ರೂಪಾಯಿ ಸಾಲ

Bank Fraud In Bakhtiyarpur: ನಕಲಿ ಚಿನ್ನಾಭರಣ ನೀಡಿ ಬ್ಯಾಂಕ್​ನಿಂದ 3 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

bank-fraud-in-bihar-loan-of-rs-3-crore-taken-by-mortgaging-fake-gold
ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್​ಗೆ 3 ಕೋಟಿ ವಂಚನೆ
author img

By ETV Bharat Karnataka Team

Published : Dec 16, 2023, 5:03 PM IST

ಪಾಟ್ನಾ (ಬಿಹಾರ) : ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್​ಗೆ 3 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು 3 ಕೋಟಿ ರೂ. ಮೌಲ್ಯದ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್​ನಿಂದ ಸಾಲ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಬ್ಯಾಂಕ್​ನ ವ್ಯವಸ್ಥಾಪಕ ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಇಲ್ಲಿನ ಭಕ್ತಿಯಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಬ್ಯಾಂಕ್​ವೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 3 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಸಾಲದ ಅವಧಿ ಬಳಿಕ ಬ್ಯಾಂಕ್​ ಮ್ಯಾನೇಜರ್​ ಸಾಲ ಪಡೆದ ವ್ಯಕ್ತಿಗೆ ಕರೆ ಮಾಡಿ ಚಿನ್ನಾಭರಣ ಪಡೆಯುವಂತೆ ಹೇಳಿದ್ದಾರೆ. ಆದರೆ, ವ್ಯಕ್ತಿಯು ಈ ವೇಳೆ ಬೇರೆ ಬೇರೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದರಿಂದ ಅನುಮಾನಗೊಂಡ ಬ್ಯಾಂಕ್​ ಮ್ಯಾನೇಜರ್​ ಮತ್ತೊಬ್ಬನಿಂದ ಚಿನ್ನಾಭರಣವನ್ನು ಮೌಲ್ಯಮಾಪನ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ.

ಆರೋಪಿಗಳು ಕಡಿಮೆ ಕ್ಯಾರೆಟ್​ನ ಚಿನ್ನವನ್ನು ಬ್ಯಾಂಕ್​ಗೆ​ ನೀಡಿ ಸಾಲ ಪಡೆದಿರುವುದು ಕಂಡು ಬಂದಿದೆ. ಈ ಸಂಬಂಧ ಬ್ಯಾಂಕ್​ ವ್ಯವಸ್ಥಾಪಕರು 82 ಮಂದಿ ಗ್ರಾಹಕರು ಹಾಗೂ ಚಿನ್ನ ಮೌಲ್ಯಮಾಪನ ಮಾಡುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಣಿಪುರದಲ್ಲಿ ಬ್ಯಾಂಕ್​ ದರೋಡೆ : ಮುಸುಕುಧಾರಿ ದರೋಡೆಕೋರರ ಗುಂಪೊಂದು ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ನುಗ್ಗಿ ಹಣ​ ದೋಚಿ ಪರಾರಿಯಾಗಿದ್ದ ಘಟನೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಶಸ್ತ್ರಸಜ್ಜಿತವಾಗಿ ಬ್ಯಾಂಕ್​ಗೆ ನುಗ್ಗಿ ಬರೋಬ್ಬರಿ 18.85 ಕೋಟಿ ರೂಪಾಯಿ ಲೂಟಿ ಮಾಡಿ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು. ಬ್ಯಾಂಕ್​ ಹೊರಗಡೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದರೋಡೆಕೋರರ ಗುಂಪು ಬ್ಯಾಂಕ್‌ ಒಳಗೆ ಪ್ರವೇಶಿಸುತ್ತಿರುವ ವಿಡಿಯೋ ಸೆರೆಯಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ 10 ಜನರ ಅಪರಿಚಿತ ಮುಸುಕುಧಾರಿಗಳ ಗುಂಪು ಸಂಜೆ 5.40ರ ಸುಮಾರಿಗೆ ಉಖ್ರುಲ್‌ನ ವ್ಯೂಲ್ಯಾಂಡ್ ಪ್ರದೇಶದಲ್ಲಿನ ಪಂಜಾಬ್​ ನ್ಯಾಷನಲ್​ ಬ್ಯಾಂಕ್‌ಗೆ ನುಗ್ಗಿದ್ದರು. ಮುಖಕ್ಕೆ ಮಾಸ್ಕ್​ ಧರಿಸಿದ್ದ ದುಷ್ಕರ್ಮಿಗಳು ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳ ಏಕಾಏಕಿ ತಮ್ಮ ಬಳಿಯಿದ್ದ ಬಂದೂಕುಗಳನ್ನು ತೋರಿಸಿ ನೌಕರರನ್ನು ಎಲ್ಲಿಯೂ ಕದಲದಂತೆ ತಡೆದಿದ್ದರು. ಉಳಿದ ದರೋಡೆಕೋರರು ನಗದು ಸಂಗ್ರಹಿಸುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದರು.

ದರೋಡೆ ನಡೆದ ವೇಳೆ ಬ್ಯಾಂಕ್‌ನಲ್ಲಿ ನೌಕರರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಸಂಜೆ 4 ಗಂಟೆಗೆ ಬ್ಯಾಂಕ್​ ವ್ಯವಹಾರಗಳು​ ಮುಕ್ತಾಯಗೊಳ್ಳುವ ಕಾರಣ ಗ್ರಾಹಕರೂ ಇರಲಿಲ್ಲ. ಮ್ಯಾನೇಜರ್ ಕೂಡ ರಜೆಯಲ್ಲಿದ್ದರು. ಬ್ಯಾಂಕ್​ ಆವರಣದಲ್ಲಿ ಆರಂಭದಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ಘಟನೆ ಸಂಭವಿಸಿದಾಗ ಮುಖ್ಯ ಗೇಟ್‌ನಲ್ಲಿ ಒಬ್ಬರೇ ಸಿಬ್ಬಂದಿ ಇದ್ದು, ಇತರರು ಚಹಾ ಸೇವಿಸಲು ತೆರಳಿದ್ದರು. ಈ ವೇಳೆ ದರೋಡೆಕೋರರು ಬ್ಯಾಂಕಿನ ಹಿಂಬದಿಯ ಗೇಟ್ ಮೂಲಕ ಒಳ ಪ್ರವೇಶಿಸಿದ್ದರು ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ : ಲಾಕರ್​ನಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆ ಆರೋಪ: ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.