ನವದೆಹಲಿ: ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣವೊಂದರ ಅಪರಾಧಿಯನ್ನು ಇಂಟರ್ಪೋಲ್ ಸಹಾಯದಿಂದ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳು ಅಮೆರಿಕದಿಂದ ಇಂದು ಭಾರತಕ್ಕೆ ಕರೆತಂದಿದ್ದಾರೆ. ಟಿ.ರವಿಂದ್ರನಾಥ್ ಗುಪ್ತಾ ಎಂಬಾತ ಅಪರಾಧಿಯಾಗಿದ್ದು, ಸಿಬಿಐ ನ್ಯಾಯಾಲಯ ದೋಷಿ ತೀರ್ಪು ಪ್ರಕಟಿಸಿದ ಬಳಿಕ ಪಲಾಯನಗೊಂಡಿದ್ದ.
''ಇದಕ್ಕಾಗಿ ಸಿಬಿಐನ ಜಾಗತಿಕ ಕಾರ್ಯಾಚರಣೆಯ ಕೇಂದ್ರವು ಇಂಟರ್‌ಪೋಲ್‌ನೊಂದಿಗೆ ನಿಕಟ ಸಮನ್ವಯ ನಡೆಸಿತ್ತು. ಇದೀಗ ಅಪರಾಧಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗದೆ. ಈತ ಇನ್ಲ್ಯಾಂಡ್ ಲೆಟರ್ ಆಫ್ ಕ್ರೆಡಿಟ್‌ಗಳನ್ನು ನಕಲಿಸುವ ಮೂಲಕ ಬ್ಯಾಂಕ್ಗೆ ವಂಚನೆ ಹಾಗೂ ಫೋರ್ಜರಿ ಮಾಡಿರುವ ಕುರಿತು ಬೆಂಗಳೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿದ್ದ'' ಎಂದು ಸಿಬಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
-
CBI COORDINATES RETURN OF RED NOTICE SUBJECT FROM USA pic.twitter.com/3gmByALuQu
— Central Bureau of Investigation (India) (@CBIHeadquarters) August 9, 2023 " class="align-text-top noRightClick twitterSection" data="
">CBI COORDINATES RETURN OF RED NOTICE SUBJECT FROM USA pic.twitter.com/3gmByALuQu
— Central Bureau of Investigation (India) (@CBIHeadquarters) August 9, 2023CBI COORDINATES RETURN OF RED NOTICE SUBJECT FROM USA pic.twitter.com/3gmByALuQu
— Central Bureau of Investigation (India) (@CBIHeadquarters) August 9, 2023
''ಸಿಬಿಐ ಮನವಿಯ ಮೇರೆಗೆ 2023ರ ಏಪ್ರಿಲ್ 4ರಂದು ಗುಪ್ತಾ ವಿರುದ್ಧ ಇಂಟರ್ಪೋಲ್ ರೆಡ್ ನೋಟಿಸ್ ಹೊರಡಿಸಲಾಗಿತ್ತು. ಆರೋಪಿಯನ್ನು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ದೋಷಿ ಎಂದು ಪ್ರಕಟಿಸಿದ್ದರು. ಇದರ ಜೊತೆಗೆ 3 ವರ್ಷ ಜೈಲು ಶಿಕ್ಷೆ ಘೋಷಿಸಿದ್ದರು. ಇದಾದ ನಂತರ ದೇಶದಿಂದ ತಲೆಮರೆಸಿಕೊಂಡಿದ್ದ'' ಎಂದು ಸಿಬಿಐ ಮಾಹಿತಿ ನೀಡಿದೆ.
''ಅಮೆರಿಕದಿಂದ ಯುಎಇ ಮೂಲಕ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇಂದು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ'' ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: CBI: ಲಂಚ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸೇರಿ ನಾಲ್ವರ ಬಂಧಿಸಿದ ಸಿಬಿಐ