ETV Bharat / bharat

ಮಹಿಳೆಯರಿಗೆ ಕಿರುಕುಳ ಆರೋಪ.. ಬಳೆ ಮಾರುವ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ: Video Viral​ - bangle seller beaten in Indore video viral

ಮಧ್ಯಪ್ರದೇಶದ ಇಂದೋರ್​ನ ಬಂಗಂಗಾ ಪೋಲಿಸ್ ಸ್ಟೇಷನ್ ಪ್ರದೇಶದ ಗೋವಿಂದ್ ನಗರದಲ್ಲಿ ಬಳೆ ಮಾರುವ ನೆಪದಲ್ಲಿ ವ್ಯಕ್ತಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಮನ ಬಂದಂತೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

bangle seller beaten in allegation of molestation
ಬಳೆ ಮಾರುವ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ವಿಡಿಯೋ ವೈರಲ್​
author img

By

Published : Aug 23, 2021, 3:40 PM IST

ಇಂದೋರ್ (ಮಧ್ಯಪ್ರದೇಶ): ಇಲ್ಲಿ ವ್ಯಕ್ತಿಯೋರ್ವನನ್ನು ಜನರು ಹಿಗ್ಗಾಮುಗ್ಗ ಥಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇಂದೋರ್​ನ ಬಂಗಂಗಾ ಪೊಲೀಸ್​​​​ ಸ್ಟೇಷನ್ ಪ್ರದೇಶದ ಗೋವಿಂದ್ ನಗರದಲ್ಲಿ ಬಳೆ ಮಾರುವ ನೆಪದಲ್ಲಿ ವ್ಯಕ್ತಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಮನಬಂದಂತೆ ಹೊಡೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಸಖತ್ ವೈರಲ್​ ಆಗಿದೆ.

ಆದರೆ, ಥಳಿತಕ್ಕೆ ಒಳಗಾದ ವ್ಯಕ್ತಿ ತಸ್ಲೀಮ್, ಗೋವಿಂದ್ ಕಾಲೋನಿಯಲ್ಲಿ ಬಳೆಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಜನರು ನನ್ನ ಜಾತಿ ಕೇಳಿದರು. ನಾನು ಜಾತಿ ಹೇಳಿದ ಬಳಿಕ ಅವರು ನನ್ನ ಮೇಲೆ ಹಲ್ಲೆ ಮಾಡಿ ನನ್ನ ಹತ್ತಿರವಿದ್ದ ಹಣ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.

ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್​ ಅಧಿಕಾರಿ ಅಶುತೋಷ್ ಮಾತನಾಡಿ, ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುವಕನ ಮೇಲೆ ಹಲ್ಲೆ ಮಾಡುವ ದೃಶ್ಯಗಳಿವೆ. ದೂರಿನ ನಂತರ ಎಫ್ಐಆರ್ ದಾಖಲಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಓದಿ: ಎಚ್ಚೆತ್ತ ಬಂಗಾಳ ಪೊಲೀಸ್.. ರಾಜ್ಯದಲ್ಲಿ ನೆಲೆಸಿರುವ ಆಫ್ಘನ್​ ಪ್ರಜೆಗಳ ಮೇಲೆ ತೀವ್ರ ನಿಗಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.