ETV Bharat / bharat

ಹಿಂದೂ ಯುವಕನನ್ನು ಮದುವೆಯಾಗಿ ತನ್ನ ದೇಶಕ್ಕೆ ಕರೆದೊಯ್ದ ಬಾಂಗ್ಲಾ ಹುಡುಗಿ: ಪಾಕ್​ನ ಸೀಮಾ ಹೈದರ್ ಪ್ರಕರಣ ಹೋಲುವ ಘಟನೆ...

ಪಾಕ್​ ಪ್ರಜೆ ಸೀಮಾ ಹೈದರ್​ ನಂತಹ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಬಾಂಗ್ಲಾದೇಶದ ಹುಡುಗಿಯೊಬ್ಬಳು ಗಡಿ ದಾಟಿ ಭಾರತಕ್ಕೆ ಬಂದು ಹಿಂದೂ ಯುವಕನನ್ನು ಮದುವೆಯಾಗಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿರುವ ಘಟನೆ ಜರುಗಿದೆ. ಇದೀಗ ಯುವಕ ತನ್ನ ರಕ್ತಸಿಕ್ತ ಫೋಟೋವನ್ನು ತಾಯಿಗೆ ಕಳುಹಿಸಿ ಸಹಾಯ ಕೇಳುತ್ತಿದ್ದಾನೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ...

Bangladeshi girl like Seema Haider married
ಹಿಂದೂ ಯುವಕನನ್ನು ಮದುವೆಯಾಗಿ ತನ್ನ ದೇಶಕ್ಕೆ ಕರೆದೊಯ್ದ ಬಾಂಗ್ಲಾ ಹುಡುಗಿ: ಪಾಕ್​ನ ಸೀಮಾ ಹೈದರ್ ಪ್ರಕರಣ ಹೋಲುವ ಘಟನೆ...
author img

By

Published : Jul 17, 2023, 9:15 PM IST

ಮೊರಾದಾಬಾದ್ (ಉತ್ತರ ಪ್ರದೇಶ): ಪಾಕಿಸ್ತಾನದ ಗಡಿ ದಾಟಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ನಂತರ, ಇದೀಗ ಬಾಂಗ್ಲಾದೇಶದ ಮಹಿಳೆ ಜೂಲಿ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಪ್ರಕರಣವು ಸೀಮಾ ಹೈದರ್ ಪ್ರಕರಣವನ್ನು ಹೋಲುತ್ತದೆ. ಬಾಂಗ್ಲಾದೇಶದಿಂದ ಗಡಿ ದಾಟಿ ಯುವತಿಯೊಬ್ಬಳು ಮೊರಾದಾಬಾದ್‌ಗೆ ಬಂದು ಹಿಂದೂ ಯುವಕನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾಳೆ. ಕೆಲವು ತಿಂಗಳ ನಂತರ ಅವಳು ತನ್ನ ಗಂಡನನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದಳು.

ಸೀಮಾ ಹೈದರ್ ಪ್ರಕರಣದಂತಹ ಮತ್ತೊಂದು ಕೇಸ್​ ಮುನ್ನೆಲೆಗೆ: ಬಾಂಗ್ಲಾದೇಶಕ್ಕೆ ತೆರಳಿದ ಯುವಕ ತನ್ನ ತಾಯಿ ಹಾಗೂ ಸಹೋದರಿ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಾನೆ. ಯುವಕ ತನ್ನ ತಾಯಿಯ ವಾಟ್ಸ್​ಆ್ಯಪ್​​ ನಂಬರ್‌ಗೆ ತನ್ನ ರಕ್ತಸಿಕ್ತ ಫೋಟೋ ಕಳುಹಿಸುತ್ತಿದ್ದಾನೆ. ಮಗನನ್ನು ಭಾರತಕ್ಕೆ ಕರೆತರುವಂತೆ ಯುವಕನ ತಾಯಿ ಆಡಳಿತಾಧಿಕಾರಿಗಳ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ ಮಾಡಿದರು. ಸೀಮಾ ಹೈದರ್ ತನ್ನ 4 ಮಕ್ಕಳೊಂದಿಗೆ ಪಾಕಿಸ್ತಾನದಿಂದ ನೇಪಾಳದ ಮೂಲಕ ತನ್ನ ಪ್ರೀತಿಯನ್ನು ಪಡೆಯಲು ಭಾರತಕ್ಕೆ ಬಂದಿದ್ದಳು. ಸೀಮಾ ಹೈದರ್ ಪ್ರಕರಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸುದ್ದಿಯಾಗಿದೆ. ಪ್ರಸ್ತುತ ಮತ್ತೊಂದು ಹೊಸ ಪ್ರಕರಣ ಮುನ್ನೆಲೆಗೆ ಬಂದಿದೆ.

ಸಂತ್ರಸ್ತನ ತಾಯಿ ಸುನೀತಾ ಹೇಳಿದ್ದೇನು?: ಸಂತ್ರಸ್ತನ ತಾಯಿ ಸುನೀತಾ ಪ್ರಕಾರ, ''ಬಾಂಗ್ಲಾದೇಶದ ಜೂಲಿ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಿದ ನಂತರ ಮೊರಾದಾಬಾದ್‌ನ ಅಜಯ್‌ನನ್ನು ಪ್ರೀತಿಸುತ್ತಿದ್ದಳು. ಅವಳು ಬಾಂಗ್ಲಾದೇಶದಿಂದ ಮೊರಾದಾಬಾದ್‌ಗೆ ಬಂದಳು. ಹಿಂದೂ ಸಂಪ್ರದಾಯದ ಪ್ರಕಾರ ಅಜಯ್‌ನನ್ನು ಮದುವೆಯಾದಳು. ಕೆಲವು ತಿಂಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ಜೂಲಿ ವೀಸಾ ಮಿತಿ ಮುಗಿದಿದೆ ಎಂದು ಕ್ಷಮಿಸಿ. ನನ್ನ ವೀಸಾ ಅವಧಿ ಮುಗಿದಿದೆ. ವೀಸಾ ಮಿತಿಯನ್ನು ವಿಸ್ತರಿಸಿದ ನಂತರ ನಾನು ಹಿಂತಿರುಗುತ್ತೇನೆ. ನೀವು ನನ್ನನ್ನು ಬಾಂಗ್ಲಾದೇಶದ ಗಡಿಯಲ್ಲಿ ಅಂದರೆ, ಕೋಲ್ಕತ್ತಾದಲ್ಲಿ ಬಿಡುತ್ತೀರಿ. ಅಜಯ್ ಜೂಲಿಯನ್ನು ಗಡಿಗೆ ಬಿಡಲು ಹೋದಾಗ ಹಿಂತಿರುಗಲಿಲ್ಲ'' ಎಂದು ತಿಳಿಸಿದರು.

ಪುತ್ರನನ್ನು ಭಾರತಕ್ಕೆ ವಾಪಸ್ ಕರೆತರುವಂತೆ ಒತ್ತಾಯ: ''ತಾಯಿ ನಾನು ಬಾಂಗ್ಲಾದೇಶದಲ್ಲಿದ್ದೇನೆ, 10 ರಿಂದ 15 ದಿನಗಳಲ್ಲಿ ಹಿಂತಿರುಗುತ್ತೇನೆ ಎಂದು ಮಗ ಅಜಯ್‌ ಸ್ವಲ್ಪ ಸಮಯದ ಹಿಂದೆ ಕರೆ ಮಾಡಿದ್ದ. ಕೆಲವು ದಿನಗಳ ನಂತರ ಅಜಯ್‌, ನನಗೆ 15,000 ರೂ.ಗಳ ಅವಶ್ಯಕತೆಯಿದ್ದು, ತನ್ನ ಸಹೋದರಿಯಿಂದ ತೆಗೆದುಕೊಂಡು ಕೊಡು, ನಾನು ತೊಂದರೆಯಲ್ಲಿದ್ದೇನೆ ಎಂದು ಮತ್ತೊಮ್ಮೆ ಕರೆ ಮಾಡಿ ಹೇಳಿದ್ದ. ಬಳಿಕ ಫೋನ್ ಡಿಸ್ಕನೆಕ್ಟ್ ಆಯಿತು. ಆ ನಂತರ ಸುನೀತಾ ಅವರ ವಾಟ್ಸ್​ಆ್ಯಪ್​ ನಂಬರ್‌ಗೆ ಮಗ ಅಜಯ್‌ನ ರಕ್ತಸಿಕ್ತ ಫೋಟೋ ಬಂದಿತ್ತು. ಇದೀಗ ಸುನೀತಾ ಬಾಂಗ್ಲಾದೇಶದಿಂದ ಮಗನನ್ನು ಕರೆತರಲು ಮನೆ ಮನೆಗೆ ಅಲೆದಾಡುತ್ತಿದ್ದಾರೆ. ಸಂತ್ರಸ್ತನ ತಾಯಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ತನ್ನ ಮಗನನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ವಾಪಸ್ ಕರೆತರುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಎಐ ಬಳಸಿ ವ್ಯಕ್ತಿಗೆ ವಂಚನೆ.. ಸೈಬರ್​ ಬ್ರ್ಯಾಂಚ್​​​ನಿಂದ​ ಹಣ ಮರಳಿ ಪಡೆದ ವ್ಯಕ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.