ನವದೆಹಲಿ: ಇಂದು ದೇಶಾದ್ಯಂತ 72 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ ದೆಹಲಿಯ ರಾಜಪಥದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ನೆರವೇರಿಸಿದ ಬಳಿಕ ನಡೆದ ಪಥಸಂಚಲನದಲ್ಲಿ ಭಾರತದ ಸೇನಾ ಶಕ್ತಿ ಪ್ರದರ್ಶನಗೊಂಡಿತು.
ಇನ್ನೊಂದು ವಿಶೇಷ ಎಂದರೆ ಈ ಬಾರಿ ಬಾಂಗ್ಲಾದೇಶದ ಸೇನೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿರುವುದು. ಪರೇಡ್ನಲ್ಲಿ ಭಾರತ ಮತ್ತು ಬಾಂಗ್ಲಾ ಸೇನೆಗಳು ಒಟ್ಟಿಗೆ ಪಾಲ್ಗೊಂಡಿದ್ದವು.
1971ರಲ್ಲಿ ನಡೆದ ಯುದ್ಧದಲ್ಲಿ ಭಾರತವು ಪಾಕ್ ಅನ್ನು ಮಣ್ಣು ಮುಕ್ಕಿಸಿತ್ತು. ಅಂದೇ ಪಾಕಿಸ್ತಾನದ ಆಡಳಿತದಿಂದ ಬಾಂಗ್ಲಾದೇಶ ವಿಮೋಚನೆಯಾಯಿತು. ಈ ಸುದಿನಕ್ಕೆ 50 ವರ್ಷಗಳಾಗಿವೆ. ಈ ಯುದ್ಧದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ಭಾರತ-ಬಾಂಗ್ಲಾ ಸೇನೆಗಳು ಒಟ್ಟಿಗೆ ಪರೇಡ್ನಲ್ಲಿ ಭಾಗಿಯಾಗಿವೆ.
122 ಸದಸ್ಯರಿದ್ದ ಬಾಂಗ್ಲಾದೇಶ ಸೇನಾದಳದ ನೇತೃತ್ವವನ್ನು ಲೆಫ್ಟಿನೆಂಟ್ ಕರ್ನಲ್ ಅಬು ಮೊಹಮ್ಮದ್ ಶಹನೂರ್ ಶವಾನ್ ವಹಿಸಿದ್ದರು.