ಮೊಹಾಲಿ(ಪಂಜಾಬ್): ಹರಿಯಾಣ ಭೇಟಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಮೊಹಾಲಿಗೆ ತೆರಳಿದ್ದು ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ತೊಟ್ಟು ಬಂದವರಿಗೆ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದ್ದಾರೆ. ಈ ಹಿಂದೆ ಪಂಜಾಬ್ ಪ್ರವಾಸ ಕೈಗೊಂಡಿದ್ದ ಮೋದಿ ಭದ್ರತೆಯಲ್ಲಿ ಲೋಪ ಕಂಡುಬಂದಿದ್ದು ಈ ಹೆಚ್ಚಿನ ನಿಗಾ ವಹಿಸಲಾಗಿತ್ತು.
ಪಂಜಾಬ್ನಲ್ಲಿ ಭಗವಂತ್ ಮಾನ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ. ಮಾನ್ ಸಿಎಂ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೊಂಡಿದ್ದ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದು, ಜನರು ಕಪ್ಪು ಬಟ್ಟೆ ಧರಿಸಿ ಒಳಹೋಗಲು ಅನುಮತಿ ನೀಡಿಲ್ಲ.
-
Punjab CM Bhagwant Mann felicitates PM Modi at the inauguration of Homi Bhabha Cancer Hospital and Research Centre in Punjab's Mohali district pic.twitter.com/HuYf1mEdrG
— ANI (@ANI) August 24, 2022 " class="align-text-top noRightClick twitterSection" data="
">Punjab CM Bhagwant Mann felicitates PM Modi at the inauguration of Homi Bhabha Cancer Hospital and Research Centre in Punjab's Mohali district pic.twitter.com/HuYf1mEdrG
— ANI (@ANI) August 24, 2022Punjab CM Bhagwant Mann felicitates PM Modi at the inauguration of Homi Bhabha Cancer Hospital and Research Centre in Punjab's Mohali district pic.twitter.com/HuYf1mEdrG
— ANI (@ANI) August 24, 2022
24 ವಸ್ತುಗಳಿಗೆ ನಿಷೇಧ, ಕಟ್ಟುನಿಟ್ಟಿನ ಭದ್ರತೆ: ಕಾರ್ಯಕ್ರಮಕ್ಕೆ ಹಗ್ಗ, ಕ್ರೀಡಾ ಉಪಕರಣಗಳು, ವಾಕಿಟಾಕಿ, ನೀರಿನ ಬಾಟಲ್, ಕತ್ತರಿ, ಚಾಕು, ಚೂಪಾದ ಕಬ್ಬಿಣದ ವಸ್ತು, ರಾಸಾಯನಿಕ, ದಹಿಸುವ ವಸ್ತು, ಉಗುರು ಕಟ್ಟರ್, ಲಾಂಡ್ರಿ ಸೋಪ್, ರಿಮೋಟ್, ವೈರ್‌ಲೆಸ್ ಸಾಧನ, ಫುಟ್‌ಬಾಲ್, ಚೆಂಡು, ಆಕ್ಷೇಪಾರ್ಹ ಪದಾರ್ಥಗಳು, ಲೇಡಿ ಮೇಕಪ್ ಐಟಂ, ಕಪ್ಪು ಬಟ್ಟೆ ಅಥವಾ ಕರವಸ್ತ್ರ, ಕಪ್ಪು ಸ್ಪ್ರೇ, ಕಪ್ಪು ಶಾಯಿ ಅಥವಾ ಬಣ್ಣ, ಬ್ಯಾನರ್ ಅಥವಾ ಪೇಪರ್ ಪ್ರಿಂಟ್ ಔಟ್ ಪ್ರತಿ, ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಧ್ವಜ, ಪೆನ್ನು, ಪೆನ್ಸಿಲ್ ಸೇರಿದಂತೆ ಈ ರೀತಿ ಹಲವು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ.
660 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಮೊಹಾಲಿಯ ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, 300 ಬೆಡ್ಗಳ ವಿಶೇಷ ಆಸ್ಪತ್ರೆಗೋಸ್ಕರ 660 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಪಂಜಾಬ್ ಮಾತ್ರವಲ್ಲದೆ, ಜಮ್ಮು-ಕಾಶ್ಮೀರ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡದ ಕ್ಯಾನ್ಸರ್ ರೋಗಿಗಳಿಗೆ ಈ ಆಸ್ಪತ್ರೆ ಅನುಕೂಲವಾಗಲಿದೆ.
ಇದನ್ನೂ ಓದಿ: ಭಾರತದ ಅತಿದೊಡ್ಡ ಆಸ್ಪತ್ರೆ ಉದ್ಘಾಟಿಸಿದ ಮೋದಿ: 6000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
ಅಂದು ಭದ್ರತಾ ವೈಫಲ್ಯ ಎದುರಿಸಿದ್ದ ಮೋದಿ: ಕಳೆದ ಜನವರಿಯಲ್ಲಿ ಪ್ರಧಾನಿ ಮೋದಿ ಪಂಜಾಬ್ ಪ್ರವಾಸ ಕೈಗೊಂಡಿದ್ದರು. ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಅವರು ಮೊದಲು ಬಠಿಂಡಾಕ್ಕೆ ತೆರಳಿದ್ದರು. ಅಲ್ಲಿಂದ ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಬೇಕಿತ್ತು. ಆದರೆ, ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದ ಕಾರಣ 20 ನಿಮಿಷ ಕಾದು ಕುಳಿತ ಮೋದಿ ಬಳಿಕ ಹೆಲಿಕಾಪ್ಟರ್ ಹಾರಲು ಸಾಧ್ಯವಾಗದೇ ಇದ್ದುದಕ್ಕೆ ರಸ್ತೆ ಮಾರ್ಗದ ಮೂಲಕ ಹುಸೇನಿವಾಲಾಗೆ ತೆರಳಲು ಮುಂದಾಗಿದ್ದರು.
ಆದರೆ, ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ಕಾರಣ ಪ್ರಧಾನಿ ವಾಪಸ್ಸಾಗಬೇಕಾಗಿತ್ತು. ಪಂಜಾಬ್‌ನ ಹುಸೈನಿವಾಲಾ ಮಾರ್ಗದಲ್ಲಿರುವ ಫ್ಲೈಓವರ್ ಮೇಲೆ ನರೇಂದ್ರ ಮೋದಿ ಅವರು ತೆರಳುತ್ತಿದ್ದಾಗ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರು. ಹೀಗಾಗಿ ಅಂದಿನ ಕಾಂಗ್ರೆಸ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.