ETV Bharat / bharat

ಲಲನೆಯರ ಸೆಳೆಯುವ ಬಿದಿರಿನ ಆಭರಣ: ಲಾಕ್​ಡೌನ್ ವೇಳೆ ಆದಾಯ ಮೂಲವಾದ ವಿಭಿನ್ನ ಉದ್ಯಮ - ಸ್ವಾವಲಂಬನೆಯ ಪ್ರಜ್ಞೆ

ಬಾಲಕಿಯರಿಗೆ ಎನ್‌ಐಎಫ್‌ಟಿಗಳಂತಹ ಸಂಸ್ಥೆಗಳಿಂದ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಮಟ್ಟದ ಕುಶಲಕರ್ಮಿಗಳ ತಂಡವು ತರಬೇತಿ ನೀಡಿದೆ. ಯುವತಿಯರು ಬಿದಿರನ್ನು ಬೇವು, ಸೋಡಾ ಮತ್ತು ಉಪ್ಪಿನಲ್ಲಿ ಕುದಿಸುತ್ತಾರೆ. ನಂತರ ಅವರು ಅದನ್ನು ಒಣಗಿಸುತ್ತಾರೆ. ಆಭರಣಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಅವರು ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತಾರೆ.

bamboo-craft-has-created-a-sense-of-self-independence
ಲಲನೆಯರ ಸೆಳೆಯುವ ಬಿದಿರಿನ ಆಭರಣ.
author img

By

Published : Jul 19, 2021, 6:03 AM IST

ರಾಯಗಡ (ಒಡಿಶಾ): ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಿಸಲು ಮಾರುಕಟ್ಟೆಯಲ್ಲಿ ತರಹೇವಾರು ಆಭರಣಗಳಿವೆ. ಆಭರಣಗಳು ಸಂಪತ್ತು, ಅಧಿಕಾರ ಮತ್ತು ಸ್ಥಾನಮಾನವನ್ನು ಸಂಕೇತಿಸುತ್ತವಂತೆ. ಸಾಮಾನ್ಯವಾಗಿ ಆಭರಣವು ಚಿನ್ನ, ವಜ್ರ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿರುತ್ತವೆ. ಅಥವಾ ಗಾಜು, ಮೆಟಲ್​ನ ಆಭರಣಗಳೂ ಇವೆ. ಆದರೆ ಬಿದಿರಿನಿಂದ ಮಾಡಿದ ಆಭರಣಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಲಲನೆಯರ ಸೆಳೆಯುವ ಬಿದಿರಿನ ಆಭರಣ

ಒಡಿಶಾದ ರಾಯಗಡ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಪ್ರದೇಶದಲ್ಲಿ ಕಾಲೇಜು ಹೋಗುವ 20 ಬಾಲಕಿಯರಲ್ಲಿ ಬಿದಿರಿನ ಕರಕುಶಲತೆಯು ಸ್ವಾವಲಂಬನೆಯ ಪ್ರಜ್ಞೆಯನ್ನು ಸೃಷ್ಟಿಸಿದೆ. ಕೋಲನಾರಾ ಬ್ಲಾಕ್‌ನ ಚಾಂಡಿಲಿ ಗ್ರಾಮದ ಬಾಲಕಿಯರು ತಮ್ಮ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು, ಹಣ ಸಂಪಾದಿಸಲು ಲಾಕ್‌ಡೌನ್ ಮಾಡಿದಾಗಿನಿಂದ ಬಿದಿರಿನ ಆಭರಣಗಳನ್ನು ತಯಾರಿಸುತ್ತಿದ್ದಾರೆ. ಮಾ ಸಂತೋಶಿ ಸ್ವಸಹಾಯ ಗುಂಪಿನ ಆಶ್ರಯದಲ್ಲಿ ಕೆಲಸ ಮಾಡುತ್ತಾರೆ.

ಬಾಲಕಿಯರಿಗೆ ಎನ್‌ಐಎಫ್‌ಟಿಗಳಂತಹ ಸಂಸ್ಥೆಗಳಿಂದ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಕುಶಲಕರ್ಮಿಗಳ ತಂಡವು ತರಬೇತಿ ನೀಡಿದೆ. ಯುವತಿಯರು ಬಿದಿರನ್ನು ಬೇವು, ಸೋಡಾ ಮತ್ತು ಉಪ್ಪಿನಲ್ಲಿ ಕುದಿಸುತ್ತಾರೆ. ನಂತರ ಅವರು ಅದನ್ನು ಒಣಗಿಸುತ್ತಾರೆ. ಆಭರಣಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಅವರು ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತಾರೆ. ಇದರಿಂದ ಧರಿಸುವವರಿಗೆ ಅಲರ್ಜಿ ಆಗುವುದಿಲ್ಲ. ಈ ಬಿದಿರಿನಿಂದ ಹೇರ್​ ಕ್ಲಿಪ್, ಬಳೆಗಳು, ಕಿವಿಯೋಲೆಗಳು, ಸರ ಸೇರದಂತೆ ಮುಂತಾದ ಬಿದಿರಿನ ಆಭರಣಗಳನ್ನು ತಯಾರಿಸಲು ಆಧುನಿಕ ತಂತ್ರಗಳನ್ನು ಬಳಸುತ್ತಾರೆ.

ಈ ಕರಕುಶಲ ವಸ್ತುಗಳು ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಆದ್ದರಿಂದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಲವಾರು ಆಕರ್ಷಕ ಆಭರಣಗಳನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಕುಶಲಕರ್ಮಿಗಳು ದೇವರುಗಳು, ದೇವತೆಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಪ್ರತಿಮೆಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ಅಲಂಕಾರಿಕ ವಸ್ತುಗಳನ್ನು ಅಹ ಮಾಡುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಈ ಆಭರಣಗಳಿಗೆ ಹೆಚ್ಚು ಬೇಡಿಕೆಯಿದೆಯಂತೆ. ಗ್ರಾಹಕರು ಈ ವಸ್ತುಗಳನ್ನು ಕೈಗೆಟುಕುವ ಬೆಲೆಯಲ್ಲಿ ಪಡೆಯುತ್ತಿದ್ದಾರೆ.

ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವನ್ನು ಪಡೆಯಬೇಕು. ಸರಿಯಾದ ಮಾರುಕಟ್ಟೆ ಸೌಲಭ್ಯವು ವಿವಿಧ ಬಿದಿರಿನ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಸೂಕ್ತವಾದ ವೇದಿಕೆಯನ್ನು ಒದಗಿಸುತ್ತದೆ. ಸ್ಪರ್ಶ್​ ಫೌಂಡೇಶನ್ ಈ ವಸ್ತುಗಳಿಗೆ ಸರಿಯಾದ ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಒಟ್ಟಿನಲ್ಲಿ ಬಿದಿರಿನಿಂದ ಮಾಡಿದ ಈ ಆಭರಣಗಳನ್ನು ಲಲನೆಯರನ್ನು ತನ್ನತ್ತ ಸೆಳೆಯುತ್ತಿದ್ದು, ಹೆಚ್ಚಿನ ಬೇಡಿಕೆ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.