ಹೈದರಾಬಾದ್: ಇಂದು ಎಲ್ಲೆಡೆ ಈದ್ ಸಂಭ್ರಮ ಮನೆ ಮಾಡಿದೆ. ಈದ್-ಉಲ್-ಅಧಾ ದಿನದಂದು ಆಡನ್ನು ಬಲಿ ನೀಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ದೇಶದಲ್ಲಿ ಬಕ್ರಿದ್ ಎಂದೂ ಕರೆಯುತ್ತಾರೆ. ಈ ದಿನ ಆಡುಗಳನ್ನು ಬಲಿ ನೀಡುವ ಈ ಧಾರ್ಮಿಕ ಪ್ರಕ್ರಿಯೆಯನ್ನು ಫರ್ಜ್-ಎ-ಕುರ್ಬನ್ ಎಂದು ಕರೆಯಲಾಗುತ್ತದೆ.
ಪ್ರಾಮುಖ್ಯತೆ:
ಬಕ್ರಿದ್ ಅನ್ನು ಈದ್-ಅಲ್-ಅಧಾ ಅಥವಾ ಈದ್-ಉಲ್-ಜುಹಾ ಎಂದೂ ಕರೆಯುತ್ತಾರೆ. ರಂಜಾನ್ ಹಬ್ಬದ 70 ದಿನಗಳ ನಂತರ ಇದನ್ನು ಆಚರಿಸಲಾಗುತ್ತದೆ. ಇಂದು ನಮಾಜ್ ಅರ್ಪಿಸಿದ ನಂತರ ಆಡುಗಳನ್ನು ಬಲಿ ನೀಡಲಾಗುತ್ತದೆ.
ಈ ತ್ಯಾಗದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ಬಡವರಿಗೆ ನೀಡಲಾಗುತ್ತದೆ, ಇನ್ನೊಂದು ಭಾಗವನ್ನು ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿತರಿಸಲಾಗುತ್ತದೆ. ಅದೇ ಸಮಯದಲ್ಲಿ, ಮೂರನೇ ಭಾಗವನ್ನು ತನಗಾಗಿ ಇರಿಸಿಕೊಳ್ಳಲಾಗುತ್ತದೆ. ಇದು ಸಾಮಾಜಿಕ ಸಾಮರಸ್ಯದ ಸೂಚಕವೂ ಆಗಿದೆ.
ಹಿನ್ನೆಲೆ:
ಬಕ್ರಿದ್ ಆಚರನಣೆ ಹಿಂದೆ ಕಾರಣವೂ ಇದೆ. ಪ್ರವಾದಿ ಇಬ್ರಾಹಿಂ ಕಠಿಣ ಪರೀಕ್ಷೆಗೆ ಒಳಗಾಗಿದ್ದರು ಎಂದು ಮುಸ್ಲಿಮರು ನಂಬುತ್ತಾರೆ. ಇದಕ್ಕಾಗಿ ಅಲ್ಲಾಹನು ಇಬ್ರಾಹಿಂನ ಮಗ ಪ್ರವಾದಿ ಇಸ್ಮಾಯಿಲ್ನನ್ನು ಬಲಿ ಕೊಡುವಂತೆ ಕೇಳಿಕೊಂಡಿದ್ದನು. ಇಬ್ರಾಹಿಂ ಆದೇಶವನ್ನು ಅನುಸರಿಸಲು ಒಪ್ಪಿದ್ದರು.
ಆದರೆ ಅಲ್ಹಾಹನು ಅದನ್ನು ತಡೆದ ನಂತರ ಕುರಿ ಅಥವಾ ಯಾವುದಾದರೂ ಪ್ರಾಣಿಗಳನ್ನು ಬಲಿ ಕೊಡಲು ಕೇಳಿದ್ದರಂತೆ. ಹೀಗೆ ಆ ದಿನದಿಂದ ಜನರು ಬಕ್ರಿದ್ ಆಚರಿಸುತ್ತಿದ್ದಾರೆ. ಈ ದಿನದಂದು ಆಡು ಬಲಿ ನೀಡುವ ಪದ್ಧತಿ ಇದೆ. ಕೋವಿಡ್ ಹಿನ್ನೆಲೆ, ಈ ವರ್ಷವೂ ಜನರು ಮನೆಯಲ್ಲಿಯೇ ಬಕ್ರಿದ್ ಅಚರಿಸುತ್ತಿದ್ದಾರೆ. ನಮಾಜ್ ಅನ್ನು ಮನೆಯಲ್ಲಿಯೇ ಮಾಡಲಾಗುತ್ತಿದೆ.
ಪ್ರಧಾನಿಯಿಂದ ಶುಭಾಶಯ:
ಸರ್ವರಿಗೂ ಈದ್ ಮುಬಾರಕ್ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
-
Prime Minister Narendra Modi wishes Eid Mubarak to everyone. #EidAlAdha pic.twitter.com/TAFPzuQj4G
— ANI (@ANI) July 21, 2021 " class="align-text-top noRightClick twitterSection" data="
">Prime Minister Narendra Modi wishes Eid Mubarak to everyone. #EidAlAdha pic.twitter.com/TAFPzuQj4G
— ANI (@ANI) July 21, 2021Prime Minister Narendra Modi wishes Eid Mubarak to everyone. #EidAlAdha pic.twitter.com/TAFPzuQj4G
— ANI (@ANI) July 21, 2021
ದೇಶದ ಒಳಿತಿಗಾಗಿ ಸಹಾನುಭೂತಿ, ಸೌಹಾರ್ದ ಮನೋಭಾವವನ್ನು ಆ ಅಲ್ಲಾಹನು ಕರುಣಿಸಲಿ ಎಂದು ಹಾರೈಸಿದ್ದಾರೆ.