ಅಗರ್ ಮಾಲ್ವಾ (ಮಧ್ಯಪ್ರದೇಶ): ಮುಸ್ಲಿಂ ಸಮಾಜದ ಪ್ರಮುಖ ಹಬ್ಬ ಬಕ್ರೀದ್ ಇನ್ನೇನು ಹತ್ತಿರದಲ್ಲಿದೆ. ಇದರ ಬೆನ್ನಲ್ಲೇ ಕುರಿ ಖರೀದಿಸಿಸುವ ಕಾರ್ಯ ಸಹ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ 11 ಲಕ್ಷಕ್ಕೆ ಬೆಲೆ ಬಾಳುವ ಮೇಕೆಯೊಂದು ಮಾರುಕಟ್ಟೆಗೆ ಬಂದಿದೆ.
ಸುಸ್ನೇರ್ ನಿವಾಸಿ ಶಾರುಖ್ ತಮ್ಮ ಮೇಕೆಯೊಂದನ್ನು ಮಾರುಕಟ್ಟೆಗೆ ತಂದಿದ್ದರು. ಮೇಕೆಯ ಹೆಸರು ಸುಲ್ತಾನ್. ಇದರ ಬೆಲೆ ಬರೋಬ್ಬರಿ 11 ಲಕ್ಷ 786 ರೂಪಾಯಿ ಎಂದು ಹೇಳಲಾಗುತ್ತಿದೆ. ಮೇಕೆಯ ದೇಹದ ಮೇಲೆ ಅಲ್ಲಾ ಮತ್ತು ಮೊಹಮ್ಮದ್ ಎಂದು ಇದೆಯಂತೆ. ಈ ಕಾರಣಕ್ಕಾಗಿ ಈ ಬೆಲೆ ಎನ್ನುತ್ತಿದ್ದಾರೆ ಇದರ ಮಾಲೀಕ.
ಈ 14 ತಿಂಗಳ ಸುಲ್ತಾನ್ ಮೇಕೆಯ ತಾಯಿಯು ಸಹ ಹೊಟ್ಟೆ ಭಾಗದಲ್ಲಿ ತ್ರಿಶೂಲ ಮತ್ತು ದೇವಾಲಯದಂತಹ ಚಿತ್ರವನ್ನು ಹೊಂದಿದೆಯಂತೆ. ಈ ಮೇಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 100 ಗ್ರಾಂ ಗೋಡಂಬಿ ಮತ್ತು ಬಾದಾಮಿ ತಿನ್ನುತ್ತದೆ. ಮೂರೂವರೆ ಅಡಿಯ ಸುಲ್ತಾನನ ತೂಕ ಸುಮಾರು 60 ಕೆ.ಜಿ. ಇದೆ.
ಇದನ್ನೂ ಓದಿ: ಬಂಧಿತರಾದ ಎಲ್‌ಇಟಿ ಭಯೋತ್ಪಾದಕರಲ್ಲಿ ಓರ್ವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ!