ETV Bharat / bharat

ಗರ್ಬಾ ನೃತ್ಯಕ್ಕೆ ಹಿಂದೂಯೇತರರಿಗೆ ನಿರ್ಬಂಧ ಇದ್ದರೂ ಭಾಗಿ: ಮೂವರನ್ನು ಹಿಡಿದು ಥಳಿಸಿದ ಬಜರಂಗ ದಳ

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದ ಮೂವರು ಅನ್ಯ ಕೋಮಿನ ಮೂವರು ಯುವಕರನ್ನು ಬಜರಂಗ ದಳ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ.

bajrang-dal-beaten-up-non-hindu-boy-in-ujjain-garba-pandal
ಗರ್ಬಾ ನೃತ್ಯಕ್ಕೆ ಹಿಂದೂಯೇತರರಿಗೆ ನಿರ್ಬಂಧ ಇದ್ದರೂ ಭಾಗಿ: ಮೂವರನ್ನು ಹಿಡಿದು ಥಳಿಸಿದ ಬಜರಂಗ ದಳ
author img

By

Published : Oct 2, 2022, 5:56 PM IST

Updated : Oct 2, 2022, 6:01 PM IST

ಉಜ್ಜೈನಿ (ಮಧ್ಯಪ್ರದೇಶ): ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದ ಮೂವರು ಅನ್ಯ ಕೋಮಿನ ಮೂವರು ಯುವಕರನ್ನು ಹಿಡಿದು ಥಳಿಸಿರುವ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಬಜರಂಗ ದಳ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ನಡೆದಿದೆ.

ನವರಾತ್ರಿಯಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮದಲ್ಲಿ ಬಾರಿ ಹಿಂದೂಯೇತರರಿಗೆ ನಿಷೇಧಿಸಲಾಗಿದೆ. ಆದರೆ, ಕೆಲವು ಅನ್ಯ ಕೋಮಿನ ಯುವಕರು ತಮ್ಮ ಮೂಲ ಹೆಸರು ಮರೆಮಾಚಿ ಗರ್ಬಾದಲ್ಲಿ ಭಾಗವಹಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಉಜ್ಜೈನಿಯಲ್ಲಿ ಕಾಳಿದಾಸ್ ಅಕಾಡೆಮಿಯ ಆಯೋಜಿಸಿದ್ದ ಗರ್ಬಾ ನೃತ್ಯದಲ್ಲಿ ಅನ್ಯ ಕೋಮಿನ ಯುವಕರು ಪಾಲ್ಗೊಂಡಿದ್ದರು. ಈ ವಿಷಯ ತಿಳಿದ ಬಜರಂಗದಳದ ಕಾರ್ಯಕರ್ತರು ಆರೋಪಿಗಳನ್ನು ಹಿಡಿದಿದ್ದಾರೆ. ನಂತರ ಸಾರ್ವಜನಿಕರೊಂದಿಗೆ ಸೇರಿಕೊಂಡು ಮೂವರನ್ನೂ ಬಜರಂಗದಳದ ಕಾರ್ಯಕರ್ತರು ಥಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಭಾಂಗ್ರಾ, ಗರ್ಭಾ ನೃತ್ಯ ಮಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್ - VIDEO

ಇದೇ ವೇಳೆ ಮಾಧವನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಜನರ ಗುಂಪಿನಿಂದ ಮೂವರನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ಆರೋಪಿಗಳ ರಕ್ಷಣೆಗೆ ಬಂದಿದ್ದಾರೆ ಎಂದು ಹೇಳಿ ಬಜರಂಗದಳ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದಾರೆ. ಇದರಿಂದ ಪೊಲೀಸರು ಹಾಗೂ ಬಜರಂಗ ದಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಕೆಲ ಹೊತ್ತು ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು, ರಾಜ್ಯದಲ್ಲಿ ಗರ್ಬಾ ಕೃತ್ಯದಲ್ಲಿ ಅನ್ಯ ಧರ್ಮೀಯರ ಪ್ರವೇಶವನ್ನು ತಡೆಯಲು ಸಚಿವೆ ಉಷಾ ಠಾಕೂರ್, ಪ್ರತಿಯೊಬ್ಬರ ಆಧಾರ್ ಕಾರ್ಡ್​ ಮತ್ತು ಗುರುತಿನ ಚೀಟಿಗಳನ್ನು ಪರಿಶೀಲಿಸುವಂತೆ ಈ ಹಿಂದೆ ಹೇಳಿಕೆ ನೀಡಿದ್ದರು. ಇವರ ಹೇಳಿಕೆಯನ್ನು ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ, ಭೋಪಾಲ್ ಸಂಸದೆ ಪ್ರಜ್ಞಾ ಭಾರತಿ ಕೂಡ ಬೆಂಬಲಿಸಿದ್ದರು. ಅಲ್ಲದೇ, ಕೆಲವೆಡೆ ಗರ್ಬಾ ಪಂಡಲ್‌ಗಳ ಹೊರಗೆ ಹಿಂದೂಯೇತರಿಗೆ ನಿಷೇಧಿಸಲಾಗಿದೆ ಎಂದು ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಇದನ್ನೂ ಓದಿ: ನವರಾತ್ರಿ ಆಚರಣೆ, ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ನಿರ್ಬಂಧ

Last Updated : Oct 2, 2022, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.