ಪುಣೆ : ಹಿರಿಯ ಉದ್ಯಮಿ, ಬಜಾಜ್ ಗ್ರೂಪ್ ನಿರ್ದೇಶಕ ರಾಹುಲ್ ಬಜಾಜ್ ಅವರು ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ 5 ದಶಕಗಳಲ್ಲಿ ಬಜಾಜ್ ಸಮೂಹವನ್ನು ಪ್ರವರ್ಧಮಾನಕ್ಕೆ ತರುವಲ್ಲಿ ರಾಹುಲ್ ಬಜಾಜ್ ಪ್ರಮುಖ ಪಾತ್ರ ವಹಿಸಿದ್ದರು. ರಾಹುಲ್ ಬಜಾಜ್ ಅವರು ಜೂನ್ 10, 1938ರಂದು ಜನಿಸಿದ್ದರು. ಅವರು ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ, ಹುವಾರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ.
-
Padma Bhushan-awardee industrialist Rahul Bajaj passes away at the age of 83, tweets Union Minister Nitin Gadkari pic.twitter.com/7FLceiGgxQ
— ANI (@ANI) February 12, 2022 " class="align-text-top noRightClick twitterSection" data="
">Padma Bhushan-awardee industrialist Rahul Bajaj passes away at the age of 83, tweets Union Minister Nitin Gadkari pic.twitter.com/7FLceiGgxQ
— ANI (@ANI) February 12, 2022Padma Bhushan-awardee industrialist Rahul Bajaj passes away at the age of 83, tweets Union Minister Nitin Gadkari pic.twitter.com/7FLceiGgxQ
— ANI (@ANI) February 12, 2022
1968 ರಲ್ಲಿ ಬಜಾಜ್ ಆಟೋಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರಿದ್ದರು. ವಾಹನ ಉದ್ಯಮದಲ್ಲಿ ಬಜಾಜ್ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದಾರೆ. 2001 ರಲ್ಲಿ ರಾಹುಲ್ ಬಜಾಜ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
5 ದಶಕಗಳಿಂದ ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಬಜಾಜ್ ಅವರು ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ನಂತರ 67 ವರ್ಷದ ನೀರಜ್ ಬಜಾಜ್ರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಓದಿ: ಅಬ್ಬಬ್ಬಾ.. ಸ್ಪೂನ್ನಿಂದ ಹಿಡಿದು ಒಳಕಲ್ವರೆಗೂ ಮಗಳಿಗೆ 'ಬೆಳ್ಳಿ' ಬಳುವಳಿ..