ETV Bharat / bharat

ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ​, ಧರ್ಮ ಪರಿವರ್ತನೆ: ಮೂವರು ದುರುಳರ ಬಂಧನ - 15 ವರ್ಷದ ಬಾಲಕಿ

ಕಳೆದ ಮೂರು ವರ್ಷಗಳಿಂದ ಅಪ್ರಾಪ್ತೆಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

gang rape in bagpat
gang rape in bagpat
author img

By

Published : Jul 19, 2021, 4:48 PM IST

ಭಾಗಪತ್​(ಉತ್ತರ ಪ್ರದೇಶ): 15 ವರ್ಷದ ಬಾಲಕಿಯೋರ್ವಳ ಮೇಲೆ ವಿವಾಹಿತ ವ್ಯಕ್ತಿ ಸೇರಿ ದುಷ್ಕರ್ಮಿಗಳ ತಂಡ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದೆ. ಇದ್ರ ಜೊತೆಗೆ ಆಕೆಯ ಧರ್ಮ ಪರಿವರ್ತನೆಯನ್ನೂ ಮಾಡಿರುವ ಅಮಾನವೀಯ ಘಟನೆ ಯುಪಿಯ ಭಾಗಪತ್‌ ಎಂಬಲ್ಲಿ ನಡೆದಿದೆ.

ಪ್ರಕರಣದ ಮುಖ್ಯ ಆರೋಪಿ ಶಹಜಾದ್​​ ಮತ್ತು ಆತನ ಇಬ್ಬರು ಸಹೋದರರಾದ ಬಿಲಾಲ್ ಹಾಗೂ ಫರ್ಮಾನ್‌ ಮತ್ತವರ ಸ್ನೇಹಿತರು ಈ ರೀತಿ ದುಷ್ಕೃತ್ಯವೆಸಗಿದ್ದಾರೆ. ಬಾಲಕಿಯ ಧರ್ಮ ಪರಿವರ್ತನೆಯನ್ನೂ ಮಾಡಿ, ಗೋ ಮಾಂಸ ತಿನ್ನಿಸಿದ್ದು ತನಿಖೆಯ ವೇಳೆ ಬಯಲಾಗಿದೆ.

ಇದನ್ನೂ ಓದಿ: ತನ್ನಿಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ತಾಯಿ

ಕಳೆದ ಕೆಲವು ದಿನಗಳ ಹಿಂದೆ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಘಟನೆ ಬಯಲಾಗಿದೆ. ಈ ವೇಳೆ ಬಾಲಕಿಯನ್ನು ಕುಟುಂಬಸ್ಥರು ಪ್ರಶ್ನಿಸಿದ್ದು ನಡೆದಿರುವ ಘಟನಾವಳಿಗಳನ್ನು ಆಕೆ ವಿವರಿಸಿದ್ದಾಳೆ. ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದೆ. ಇದರನ್ವಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು ಉಳಿದವರಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರೋಪಿಗಳಲ್ಲೊಬ್ಬ ಶಹಜಾದ್‌ಗೆ ಈಗಾಗಲೇ ಮದುವೆಯಾಗಿದೆ. ಆತನಿಗೆ ಮಗು ಸಹ ಇದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.