ಚಮೋಲಿ(ಉತ್ತರಾಖಂಡ): ಲಂಬಗಡ್ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಖಚರಾ ಮತ್ತು ಲಂಬಗಡ್ ಚರಂಡಿಗಳಲ್ಲಿ ನೀರು ತುಂಬಿದ ಪರಿಣಾಮ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ -7ರ ಅನೇಕ ಸ್ಥಳಗಳಲ್ಲಿ ಹಾನಿಯಾಗಿದೆ.
ಇಲ್ಲಿನ ಹಿಮನದಿ ತುಂಬಿ ಹರಿದು ಹತ್ತಿರದ ಅಂಗಡಿಗಳಿಗೂ ಹಾನಿಯಾಗಿದ್ದು, ಅಲ್ಲದೇ ಬದ್ರಿನಾಥ್‌ಗೆ ಹೋಗುವ ರಸ್ತೆ ಲಂಬಾದ್‌ನಲ್ಲಿ ಕೊಚ್ಚಿಹೋಗಿದೆ. ಹಾಗೆಯೇ ಒಂದು ಟ್ರಕ್ ಕೂಡ ಮಧ್ಯದ ಚರಂಡಿಯಲ್ಲಿ ಸಿಲುಕಿರುವುದು ಕಂಡುಬಂದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಚಮೋಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿದ್ದು, ಲಂಬಗಡ್ ಪ್ರದೇಶದಲ್ಲಿ ಚರಂಡಿಗಳು ಉಕ್ಕಿ ಹರಿದು ಹಲವು ಅನಾಹುತಗಳಿಗೆ ಕಾರಣವಾಗಿದೆ.
ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಲಂಬಗಡ್‌ನಲ್ಲಿ ಸುರಿದ ಮಳೆಗೆ ಚರಂಡಿ ಹಠಾತ್ತನೆ ತುಂಬಿದ ಪರಿಣಾಮ ಸರಕಿನ ಟ್ರಕ್ ರಸ್ತೆ ಮಧ್ಯದ ಚರಂಡಿಗೆ ಸಿಲುಕಿಕೊಂಡಿತ್ತು. ಈ ವೇಳೆ ಚಾಲಕ ಮತ್ತು ಸಹಾಯಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಓದಿ: ಕೋವಿಡ್ ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿ ಗ್ಯಾಂಗ್ರೇಪ್; ಮಹಿಳೆ ಸಾವು