ಚಮೋಲಿ: ನಿರಂತರ ಮಳೆಯಾದ ಕಾರಣ ಭೂಕುಸಿತ ಉಂಟಾಗಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಗುಲಾಬ್‌ಕೋಟಿ ಮತ್ತು ಕೌಡಿಯಾದಲ್ಲಿ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ನಿರ್ಬಂಧಿಸಲಾಗಿದೆ.
ಚಮೋಲಿಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಎರಡೂ ಕಡೆಯಿಂದ ನಿರ್ಬಂಧಿಸಲಾಗಿದೆ. ರಸ್ತೆ ತೆರವುಗೊಳಿಸಲು ಮತ್ತು ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಿಸಲು ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜೂನ್ 7 ರಂದು ಕೂಡ ಉತ್ತರಕಾಶಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ನಿರ್ಬಂಧಿಸಲಾಗಿತ್ತು. ರಸ್ತೆಯಲ್ಲಿ ಬೃಹತ್ ಬಂಡೆಗಳು ಮತ್ತು ದೊಡ್ಡ ಪ್ರಮಾಣದ ಭಗ್ನಾವಶೇಷಗಳು ಬಿದ್ದಿದ್ದವು.
ಗಂಗೋತ್ರಿ ಹೆದ್ದಾರಿ ಮುಚ್ಚಿದ ಕಾರಣ, ಗಂಗೋತ್ರಿ ಧಾಮ್ ಸೇರಿದಂತೆ ಅಂತಾರಾಷ್ಟ್ರೀಯ ಗಡಿ, ಹರ್ಷಿಲ್ ಮತ್ತು ಭಟ್ವಾಡಿ ಕಣಿವೆಯ 11 ಗ್ರಾಮಗಳು ಜಿಲ್ಲಾ ಕೇಂದ್ರದಿಂದ ಕಡಿತವಾಗಿವೆ.