ETV Bharat / bharat

ಹಳ್ಳಿಗಳಿಗೆ ಹಿಂದಿರುಗಿ ಯೋಜನೆ: 14,000 ಮಕ್ಕಳು ಮರಳಿ ಶಾಲೆಗೆ - ಈಟಿವಿ ಕನ್ನಡ ನ್ಯೂಸ್

ಜಮ್ಮು ಮತ್ತು ಕಾಶ್ಮೀರನಲ್ಲಿ ಬ್ಯಾಕ್-ಟು-ವಿಲೇಜ್ ಕಾರ್ಯಕ್ರಮದ ವೇಳೆ ಸುಮಾರು 14,000 ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಅವರು ಹೇಳಿದರು.

Back-to-Village: 14,000 children re-enrolled in schools
ಬ್ಯಾಕ್-ಟು-ವಿಲೇಜ್:14,000 ಮಕ್ಕಳು ಮರಳಿ ಶಾಲೆಗಳಿಗೆ ಸೇರ್ಪಡೆ
author img

By

Published : Nov 9, 2022, 3:26 PM IST

ಜಮ್ಮು( ಜಮ್ಮು- ಕಾಶ್ಮೀರ): ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಅಧ್ಯಕ್ಷತೆಯಲ್ಲಿ ಬ್ಯಾಕ್ ಟು ವಿಲೇಜ್ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆದಿದೆ. ನವೆಂಬರ್ 8 ರಂದು ನಡೆದ ನಾಲ್ಕನೇ ಹಂತದ ಬ್ಯಾಕ್-ಟು-ವಿಲೇಜ್ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟ ಸುಮಾರು 14,000 ಮಕ್ಕಳು, ಶಾಲೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಹೇಳಿದ್ದಾರೆ.

ಮಕ್ಕಳು ಮರಳಿ ಶಾಲೆಗೆ ಬಂದಿರುವುದು ಬ್ಯಾಕ್ ಟು ವಿಲೇಜ್ ಕಾರ್ಯಕ್ರಮದ ದೊಡ್ಡ ಸಾಧನೆಯಾಗಿದೆ ಎಂದ ಮುಖ್ಯ ಕಾರ್ಯದರ್ಶಿ, ಶಾಲೆಗೆ ಸೇರಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿದರು.

ಕೋಳಿ ಸಾಕಾಣಿಕೆ, ವಸತಿ, ಸಾರಿಗೆ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಒಟ್ಟು 277 ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ. ಬ್ಯಾಕ್ ಟು ವಿಲೇಜ್ ಯೋಜನೆಯ ಭಾಗಔಆಗಿ 8.46 ಲಕ್ಷ ಜನರನ್ನು 'ಅಪ್ಕಿ ಜಮೀನ್ ಆಪ್ಕಿ ನಿಗ್ರಾನಿ' ಪೋರ್ಟಲ್‌ಗೆ ಪರಿಚಯಿಸಲಾಗಿದ್ದು, ಮೂಲ ದಾಖಲೆಗಳನ್ನು ಪೋರ್ಟಲ್​ ಮೂಲಕ ಅಪ್ಲೋಡ್​ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ ಯೋಜನೆಯನ್ನು ಶೇ. 88ರಷ್ಟು ಪೂರ್ಣಗೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ 95,959 PMJAY- SEHAT ಗೋಲ್ಡನ್ ಕಾರ್ಡ್‌(ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಮತ್ತು 49,526 ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ಮಾಡಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯು 5,159 ವಿಕಲಚೇತನರ ಕಾರ್ಡ್‌ಗಳನ್ನು (ಯುಡಿಐಡಿ) ಡಿಜಿಟಲೀಕರಣಗೊಳಿಸಿದೆ. ಹಾಗೂ 30,231 ಅಂಗನವಾಡಿ ಫಲಾನುಭವಿಗಳು ಮತ್ತು 11,313 ‘ಲಾಡ್ಲಿ ಬೇಟಿ’ ಫಲಾನುಭವಿಗಳನ್ನು ಆಧಾರ್‌ನೊಂದಿಗೆ ಜೊಡಣೆ ಮಾಡಿ ಅನುಕೂಲ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಮಕ್ಕಳಿಂದಲೇ ಜಾಗೃತಿ.|!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.