ETV Bharat / bharat

ಅರುಣಾಚಲ ಪ್ರದೇಶ, ಮಣಿಪುರದಲ್ಲಿ ಲಘು ಭೂಕಂಪನ

ಅರುಣಾಚಲ ಪ್ರದೇಶದಲ್ಲಿ ಭೂಮಿ ಕಂಪಿಸಿದ ಬೆನ್ನಲ್ಲೇ ಮಣಿಪುರದಲ್ಲೂ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.1 ರಿಂದ 3.6 ರಷ್ಟು ತೀವ್ರತೆ ದಾಖಲಾಗಿದೆ.

Back-to-back earthquakes rock Arunachal Pradesh, Manipur
ಅರುಣಾಚಲ ಪ್ರದೇಶ, ಮಣಿಪುರದಲ್ಲಿ ಲಘು ಭೂಕಂಪ
author img

By

Published : Jun 20, 2021, 8:35 AM IST

ಮಣಿಪುರ/ಅರುಣಾಚಲ ಪ್ರದೇಶ: ಭಾರತದ ಈಶಾನ್ಯ ಭಾಗದಲ್ಲಿ ತಡರಾತ್ರಿ ಭೂಮಿ ನಡುಗಿದ ಅನುಭವವಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಣಿಪುರದ ಎರಡು ಪ್ರದೇಶಗಳ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವು-ನೋವು ಅಥವಾ ಆಸ್ತಿಗೆ ಹಾನಿ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ಮಾಹಿತಿ ನೀಡಿದೆ.

ಮೊದಲು ಅರುಣಾಚಲ ಪ್ರದೇಶದ ಪಂಗಿನ್‌ ಬಳಿ ತಡರಾತ್ರಿ 1.02 ಗಂಟೆಯ ಸುಮಾರಿಗೆ ಭೂಕಂಪನ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 3.1ರಷ್ಟು ತೀವ್ರತೆ ದಾಖಲಾಗಿದೆ. ಪಂಗಿನ್‌ನಿಂದ ವಾಯುವ್ಯಕ್ಕೆ 95 ಕಿಲೋ ಮೀಟರ್ ದೂರದಲ್ಲಿ ಹಾಗೂ 17 ಕಿಲೋ ಮೀಟರ್ ಆಳದ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಇದನ್ನೂ ಓದಿ: ಕಲ್ಲಿದ್ದಲು ಗಣಿಗೆ ಇದ್ದಕ್ಕಿದ್ದಂತೆ ಹರಿದು ಬಂದ ನೀರು : ಕಾರ್ಮಿಕರ ಸ್ಥಳಾಂತರ

ಮಣಿಪುರದ ಉಕ್ರುಲ್ ಜಿಲ್ಲೆಯಲ್ಲಿ 3.6 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜ್ಯದ ಶಿರುಯಿ ಗ್ರಾಮದ ವಾಯುವ್ಯಕ್ಕೆ 20 ಕಿಲೋ ಮೀಟರ್ ದೂರದಲ್ಲಿ ಹಾಗೂ 30 ಕಿಲೋ ಮೀಟರ್ ಆಳದ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಎನ್​ಸಿಎಸ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.