ETV Bharat / bharat

ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಹೋದ ಮಗಳು: ಅಂಗಡಿಯಲ್ಲಿ ಫ್ರಿಡ್ಜ್​ನ​ ಶಾಕ್​ನಿಂದ ಸಾವು - ಐಸ್​ ಕ್ರೀಂಗಳನ್ನಟ್ಟಿದ್ದ ಫ್ರಿಡ್ಜ್

ನಾಸಿಕ್​ನಲ್ಲಿ ಐಸ್​ ಕ್ರೀಂಗಳನ್ನಟ್ಟಿದ್ದ ಫ್ರಿಡ್ಜ್ ಹತ್ತಿರ ನಿಂತಾಗ ವಿದ್ಯುತ್ ಶಾಕ್​ ಉಂಟಾಗಿ ಬಾಲಕಿ ಮೃತಪಟ್ಟ ದುರಂತ ನಡೆದಿದೆ.

baby-dies-due-to-electric-shock-from-fridge
ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಹೋದ ಮಗಳು: ಅಂಗಡಿಯಲ್ಲಿ ಫ್ರಿಡ್ಜ್​ನ​ ಶಾಕ್​ನಿಂದ ಸಾವು
author img

By

Published : Sep 2, 2022, 9:47 PM IST

Updated : Sep 2, 2022, 10:11 PM IST

ನಾಸಿಕ್‌ (ಮಹಾರಾಷ್ಟ್ರ): ಫ್ರಿಡ್ಜ್​ನಿಂದ ವಿದ್ಯುತ್​ ಶಾಕ್​ ಉಂಟಾಗಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ. ಅಂಗಡಿಯಲ್ಲಿ ಐಸ್‌ಕ್ರೀಂ ಖರೀದಿ ಮಾಡಲು ಹೋದಾಗ ಬಾಲಕಿ ಫ್ರಿಡ್ಜ್​ ಮುಟ್ಟಿದ್ದು, ಈ ವೇಳೆ ವಿದ್ಯುತ್​ ಸ್ಪರ್ಶವಾಗಿ ಈ ದುರಂತ ನಡೆದಿದೆ.

ಗ್ರೀಷ್ಮಾ ಎಂಬ ಬಾಲಕಿಯೇ ಮೃತಳಾಗಿದ್ದು, ತಂದೆ ವಿಶಾಲ್ ಕುಲಕರ್ಣಿ ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಮನೆ ಸಮೀಪದ ಅಂಗಡಿಗೆ ಐಸ್​ ಕ್ರೀಂ ಖರೀದಿಸಲು ಹೋಗಿದ್ದರು. ಈ ವೇಳೆ, ಐಸ್​ ಕ್ರೀಂಗಳನ್ನಟ್ಟಿದ್ದ ಫ್ರಿಡ್ಜ್ ಹತ್ತಿರ ತಂದೆ ಮತ್ತು ಮಗಳು ನಿಂತಿದ್ದರು. ಫ್ರಿಡ್ಜ್​ನಿಂದ ವಿದ್ಯುತ್​ ಶಾಕ್​ ಉಂಟಾಗಿದೆ. ಇದರಿಂದ ನೋಡ ನೋಡುತ್ತಿದ್ದ ಬಾಲಕಿ ಗ್ರೀಷ್ಮಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಈ ಇಡೀ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಹೋದ ಮಗಳು: ಅಂಗಡಿಯಲ್ಲಿ ಫ್ರಿಡ್ಜ್​ನ​ ಶಾಕ್​ನಿಂದ ಸಾವು

ಬಾಲಕಿ ಗ್ರೀಷ್ಮಾ ಕುಸಿದು ಬಿದ್ದಿರುವುದನ್ನು ಕಂಡ ತಂದೆ ವಿಶಾಲ್​ ಕುಲಕರ್ಣಿ ಮತ್ತು ಸುತ್ತ-ಮತ್ತಲು ಇದ್ದವರು ಕೂಡ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸಾಗಿದಿದ್ದಾರೆ. ಆದರೆ, ಅಷ್ಟರಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಮಗಳನ್ನು ಕಳೆದುಕೊಂಡು ವಿಶಾಲ್​ ಕುಲಕರ್ಣಿ ಕುಟುಂಬ ದುಃಖದಲ್ಲಿ ಮುಳುಗಿದೆ.

ಕಳೆದ ಎರಡು ದಿನಗಳಿಂದ ನಾಸಿಕ್​ನಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಳೆಯಿಂದಾಗಿಯೇ ವಿದ್ಯುತ್​ ಶಾಕ್​ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡು ಮಗುವಿಲ್ಲದ ಚಿಂತೆ: ಇದ್ದ ಮೂವರು ಹೆಣ್ಣು ಮಕ್ಕಳನ್ನೂ ಕೊಂದ ಅಮ್ಮ!

Last Updated : Sep 2, 2022, 10:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.