ಕೊಯಮತ್ತೂರು: ಗರ್ಭಿಣಿಯೋರ್ವಳು ಆಸ್ಪತ್ರೆಗೆ ಹೋಗಲು ನಿರಾಕರಿಸಿ ಮನೆಯಲ್ಲಿಯೇ ಹೆರಿಗೆ ಮಾಡಿಕೊಂಡಿದ್ದು, ಶಿಶು ಮೃತಪಟ್ಟಿದೆ. ಶಿಶುವಿನ ಸಾವಿಗೆ ಕಾರಣಳಾದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಯಮತ್ತೂರಿನ ಉಪ್ಪುಕಾರ ಎಂಬಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಮೂರು ಮಕ್ಕಳ ತಾಯಿಯಾಗಿರುವ ಮಹಿಳೆ ಪುಣ್ಯವತಿಗೆ ಮತ್ತೆ ಗರ್ಭಿಣಿಯಾಗಿರುವ ಬಗ್ಗೆ ಬೇಸರವಿತ್ತು. ಇದೇ ಕಾರಣದಿಂದ ಅವಳು ಹೆರಿಗೆಗೆ ಆಸ್ಪತ್ರೆಗೆ ತೆರಳಲು ಒಪ್ಪಿರಲಿಲ್ಲ.
ಮಹಿಳೆಯು ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದು, ಆದರೆ ಶಿಶುವಿನ ಹೊಕ್ಕುಳಬಳ್ಳಿ ಕತ್ತರಿಸುವ ವೇಳೆ ಉಂಟಾದ ಪ್ರಮಾದದಿಂದ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೆರಿಯಕಡೈ ಪೊಲೀಸರು ಮಹಿಳೆಯ ಮನೆಗೆ ತೆರಳಿ ದಂಪತಿಯ ವಿಚಾರಣೆಗೆ ನಡೆಸಿದ್ದು, ಬಳಿಕ ಆಕೆಯನ್ನು ಐಪಿಸಿ ಸೆಕ್ಷನ್ 315ರ ಅಡಿ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಶೈಕ್ಷಣಿಕ ಪ್ರವಾಸದ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ