ETV Bharat / bharat

ಮಗುವಿನ ಶಿರಚ್ಛೇದನ ಮಾಡಿ ತಾನೂ ಪ್ರಾಣಬಿಟ್ಟ ಮಾನಸಿಕ ಅಸ್ವಸ್ಥ ತಾಯಿ - ಉತ್ತರ ಪ್ರದೇಶ ಕ್ರೈಂ ಸುದ್ದಿ

ಉತ್ತರ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ ಮಗುವಿನ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Baby beheaded, mother found dead in UP
ಮಗುವಿನ ಶಿರಚ್ಛೇದ ಮಾಡಿ ತಾನೂ ಪ್ರಾಣಬಿಟ್ಟ ಮಾನಸಿಕ ಅಸ್ವಸ್ಥ ತಾಯಿ
author img

By

Published : Feb 26, 2021, 11:51 AM IST

ಬುಲಂದ್‌ಶಹರ್ (ಉತ್ತರ ಪ್ರದೇಶ): ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ 13 ತಿಂಗಳ ಗಂಡು ಮಗುವಿನ ಶಿರಚ್ಛೇದ ಮಾಡಿ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಜಿತೇಂದ್ರಿ (23) ಎಂಬ ಮಹಿಳೆ ಮಾನಸಿಕ ಅಸ್ವಸ್ಥರಾಗಿದ್ದು, ಆಕೆಯ ಪತಿ ರಾಜಸ್ಥಾನದಲ್ಲಿ ಟೈಲರ್​ ಆಗಿ ಕೆಲಸ ಮಾಡುತ್ತಾರೆ. ಕತ್ತಿಯಿಂದ ಮಗುವಿನ ತಲೆ ಕತ್ತರಿಸಿ ಮನೆಯಿಂದ ಹೊರ ನೂಕಿದ್ದಾಳೆ. ಬಳಿಕ ಕೋಣೆಯೊಂದರ ಬಾಗಿಲು ಲಾಕ್​ ಮಾಡಿಕೊಂಡು ತನ್ನ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ: ಬಾಯ್​ಫ್ರೆಂಡ್​ನೊಂದಿಗೆ ಆಟೋದಲ್ಲಿ ಗಲಾಟೆ : ಕೆಳಗುರುಳಿದ ಯುವತಿ ಸಾವು

ಬಾಗಿಲು ಒಡೆದು ಕೋಣೆಯೊಳಗೆ ಬಂದ ಪೊಲೀಸರು ಅಸ್ವಸ್ಥಳಾಗಿ ಬಿದ್ದಿದ್ದ ಜಿತೇಂದ್ರಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.