ETV Bharat / bharat

ಜಾರ್ಖಂಡ್​ ಆಯುಷ್​​ ಪೋರ್ಟಲ್​ ನಿಂದ ದಾಖಲೆಗಳ ಸೋರಿಕೆ ; 3.2 ಲಕ್ಷ ರೋಗಿಗಳ ಮಾಹಿತಿ ಬಯಲು: ಸೆಕ್ಯೂರಿಟಿ ಸಂಶೋಧಕರು

author img

By ETV Bharat Karnataka Team

Published : Sep 4, 2023, 4:59 PM IST

ಸೈಬರ್​ ಸೆಕ್ಯೂರಿಟಿ ಕಂಪನಿ ಕ್ಲಡ್​ಸೆಕ್​ ಪ್ರಕಾರ, ವೆಬ್​ಸೈಟ್​ನ ಡಾಡಾಬೇಸ್​, ಸುಮಾರು 7.3 ಎಂಬಿ ಅಷ್ಟು ರೋಗಿಗಳ ದಾಖಲಾತಿ ನಿಯಮಗಳು ಸೋರಿಕೆ ಆಗಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

Ayush Jharkhand portal breached 3 2L patients records exposed Security researchers

ನವದೆಹಲಿ: ಜಾರ್ಖಂಡ್​​ ಆಯುಷ್​​ ಸಚಿವಾಲಯದ ಅಧಿಕೃತ ವೆಬ್​ಸೈಟ್ ಮಾಹಿತಿಗಳನ್ನು ಉಲ್ಲಂಘಿಸಿ ಸೋರಿಕೆ ಆಗಿದ್ದು, 3.2 ಲಕ್ಷ ರೋಗಿಗಳ ಮಾಹಿತಿ ಡಾರ್ಕ್​ ವೆಬ್​ನಲ್ಲಿ ಬಹಿರಂಗಗೊಂಡಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಸೈಬರ್​ ಸೆಕ್ಯೂರಿಟಿ ಕಂಪನಿ ಕ್ಲಡ್​ಸೆಕ್​ ಪ್ರಕಾರ, ವೆಬ್​ಸೈಟ್​ನ ಡಾಡಾಬೇಸ್​, ಸುಮಾರು 7.3 ಎಂಬಿ ಅಷ್ಟು ರೋಗಿಗಳ ದಾಖಲಾತಿ ಉಲ್ಲಂಘನೆ ಆಗಿದ್ದು, ಇದು ಡಾರ್ಕ್​ ವೆಬ್​​ನಲ್ಲಿ ಪ್ರಕಟಗೊಂಡಿದೆ. ಇದರಲ್ಲಿ ರೋಗಿಗಳು ಮತ್ತು ವೈದ್ಯರ ವೈಯಕ್ತಿಕ ಗುರುತಿನ ಮಾಹಿತಿ (ಪಿಐಐ) ಮತ್ತು ವೈದ್ಯಕೀಯ ದಾಖಲಾತಿ ಮಾಹಿತಿ ಕೂಡ ಒಳಗೊಂಡಿತ್ತು. ಈ ದತ್ತಾಂಶದಲ್ಲಿ ಡಾಕ್ಟರ್​ ಸೇರಿದಂತೆ ರೋಗಿಗಳ ಪಿಐಐ, ಲಾಗಿನ್​ ಮಾಹಿತಿ, ಯಸರ್​ ನೇಮ್​ ಪಾಸ್​ವರ್ಡ್​ ಮತ್ತು ಫೋನ್​ ನಂಬರ್​ ಒಳಗೊಂಡಂತೆ ಸೂಕ್ಷ್ಮ ಮಾಹಿತಿ ಹೊಂದಿತು. ದತ್ತಾಂಶಗಳನ್ನು ಬೆದರಿಕೆ ನಟರೊಬ್ಬರ ಹೆಸರಿನಲ್ಲಿ ಉಲ್ಲಂಘನೆ ಮಾಡಲಾಗಿದೆ.

ಆಯುಷ್​ ವೆಬ್​ಸೈಟ್​​ ಆಯುರ್ವೇದ, ಯೋಗ, ನೇಚರೋಪತಿ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ಚಿಕಿತ್ಸೆಯ ಕುರಿತಾದ ನಿರ್ಣಾಯಕ ಮಾಹಿತಿಗಳನ್ನು ಒಳಗೊಂಡಿದೆ.

ದತ್ತಾಂಶಗಳ ಸೋರಿಕೆ: ದತ್ತಾಂಶ ಮತ್ತು ಜಾರ್ಖಂಡ್​ ಆಯುಷ್​ ವೆಬ್​ಸೈಟ್​ ನಡುವಿನ ಲಿಂಕ್​ ಅನ್ನು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ದತ್ತಾಂಶದೊಂದಿಗೆ ಪಡೆಯಲಾಗಿದೆ. ನಟರೊಬ್ಬರು ಹಂಚಿಕೊಂಡ ಚಾಟ್​ಬಾಟ್​ ಮತ್ತು ಬ್ಕಾಗ್​ ಪೋಸ್ಟ್​​ ದತ್ತಾಂಶವನ್ನು ಸ್ಥಾಪಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವರದಿ ಅನುಸಾರ, ದತ್ತಾಂಶ ಉಲ್ಲಂಘನೆ 500 ಲಾಗಿನ್​ ಕ್ರೆಡಿಷಿಯಲ್ಸ್​​, 737ಕಾಂಟಕ್ಟ್​​ ಇನ್ಫಾರ್ಮೆಷನ್, 472 ಡಾಕ್ಟರ್​ಗಳ ಪಿಐಐ ಮಾಹಿತಿ , 91 ಡಾಕ್ಟರ್​ ಪಿಐಐ ದತ್ತಾಂಶ ಸೇರಿದಂತೆ ಮಾಹಿತಿಗಳನ್ನು ಪೋಸ್ಟ್​ ಮಾಡಲಾಗಿದೆ.

ಸೋರಿಕೆ ಮಾಹಿತಿಗಳ ಹೈಲೈಟ್​: ಇದಕ್ಕಿಂತ ಹೆಚ್ಚಾಗಿ ಸಂಶೋಧಕರು ಹೇಳುವಂತೆ, ದತ್ತಾಂಶ ಉಲ್ಲಂಘನೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ. ದತ್ತಾಂಶ ಸೋರಿಕೆ, ಸಾಮಾನ್ಯ ಅಥವಾ ಕಳಪೆ ಪಾಸ್​ವರ್ಡ್​​ಗಳನ್ನು ಇಟ್ಟಿರುವುದು ಈ ದಾಳಿ ಅಪಾಯ ಮತ್ತು ಅತ್ಯಾಧುನಿಕ ಫಿಶಿಂಗ್​ ದಾಳಿಯನ್ನು ಹೆಚ್ಚುವಂತೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಅಸುರಕ್ಷಿತ ಲಾಗಿನ ಐಡಿ ಮತ್ತು ಪಾಸ್​ವರ್ಡ್​ಗಳಿಂದ ದೂರ ಇರಬೇಕು. ದುರ್ಬಲ ಮತ್ತು ಶೋಷಣೆಯ ಅಂತಿಮ ಬಿಂದುಗಳ ಪ್ರಾಂಪ್ಟ್ ಪ್ಯಾಚಿಂಗ್, ಎನ್‌ಕ್ರಿಪ್ಟ್ ಮಾಡಿ ರಹಸ್ಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಂತ್ರಜ್ಞರು ಶಿಫಾರಸು ಮಾಡಿದ್ದಾರೆ. ಇಂತಹ ಉಲ್ಲಂಘನೆಗಳು ಭಾರತದ ಆರೋಗ್ಯ ವ್ಯವಸ್ಥೆಯಲ್ಲಿನ ದಾಖಲೆಗಳನ್ನು ಅಸುರಕ್ಷತೆಗೊಳಿಸುತ್ತವೆ. ಈ ಬಗ್ಗೆ ಎಚ್ಚರಿಕೆ ಹೊಂದಬೇಕಾಗಿರುವುದು ಅವಶ್ಯಕವಾಗಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹೃದಯಾಘಾತದ ಅಪಾಯವನ್ನು ಹೆಚ್ಚಿಸಿಲ್ಲ ಕೋವಿಶೀಲ್ಡ್​​ ಮತ್ತು ಕೋವಾಕ್ಸಿನ್​ ಲಸಿಕೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.