ಅಯೋಧ್ಯಾ (ಉತ್ತರಪ್ರದೇಶ) : ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024ರ ಜನವರಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ಭಾರತವೇ ಕಾತರದಿಂದ ಕಾಯುತ್ತಿದೆ. ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್.ಎಸ್.ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ದೀಪೋತ್ಸವಕ್ಕೆ ಶೋಭಾಯಾತ್ರೆಗೆ ಚಾಲನೆ : ಇದಕ್ಕೂ ಮುನ್ನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಜ್ಜಾಗಿದೆ. ದೀಪಾವಳಿ ಹಿನ್ನೆಲೆ ಅಯೋಧ್ಯೆಯಲ್ಲಿನ 51 ಘಾಟ್ಗಳಲ್ಲಿ 24 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಲು ಸಿದ್ಧತೆ ನಡೆಸಲಾಗಿದೆ. ದೀಪೋತ್ಸವ ಸಂಬಂಧ ರಾಮ ಜನ್ಮಭೂಮಿ ಪಥವನ್ನು ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ಇಲ್ಲಿನ ಬೀದಿಗಳು ರಂಗೋಲಿಗಳಿಂದ ಕಂಗೊಳಿಸುತ್ತಿವೆ. ಸುಮಾರು 24 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳಿಂದ ದೀಪೋತ್ಸವ ಆಚರಿಸಲಾಗುತ್ತಿದ್ದು, ಈ ಮೂಲಕ ಗಿನ್ನೆಸ್ ದಾಖಲೆ ಬರೆಯಲು ಮುಂದಾಗಿದೆ. ದೀಪೋತ್ಸವದ ಶೋಭಾಯಾತ್ರೆ ಆರಂಭಗೊಂಡಿದ್ದು, ಈ ವೇಳೆ ಮಹಿಳೆಯರು ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.
-
#WATCH | Ayodhya is all set to hold a grand Deeptosav on the eve of Diwali with over 24 lakh diyas at 51 ghats set to illuminate the city pic.twitter.com/p4cEjJQiCd
— ANI (@ANI) November 11, 2023 " class="align-text-top noRightClick twitterSection" data="
">#WATCH | Ayodhya is all set to hold a grand Deeptosav on the eve of Diwali with over 24 lakh diyas at 51 ghats set to illuminate the city pic.twitter.com/p4cEjJQiCd
— ANI (@ANI) November 11, 2023#WATCH | Ayodhya is all set to hold a grand Deeptosav on the eve of Diwali with over 24 lakh diyas at 51 ghats set to illuminate the city pic.twitter.com/p4cEjJQiCd
— ANI (@ANI) November 11, 2023
ಜಾರ್ಖಂಡ್ನ ಬುಡಕಟ್ಟು ಜನಾಂಗದವರು ಭಾಗಿ : ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇಲ್ಲಿನ ದೀಪೋತ್ಸವದಲ್ಲಿ ಭಾಗಿಯಾಗಿ ಧನ್ಯರಾಗುತ್ತಾರೆ. ಜಾರ್ಖಂಡ್ನ ಪಕೂರ್ ಜಿಲ್ಲೆಯ ಬುಡಕಟ್ಟು ಜನಾಂಗದವರು ಅದ್ಧೂರಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 48 ಮಂದಿ ಬುಡಕಟ್ಟು ಜನಾಂಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಶನಿವಾರ ಅಯೋಧ್ಯೆಗೆ ಬಂದಿಳಿದಿದ್ದಾರೆ.
ಈ ಬುಡಕಟ್ಟು ಜನಾಂಗದವರು ಜಾರ್ಖಂಡ್ನ ಗುಡ್ಡಗಾಡುಗಳಲ್ಲಿ ವಾಸ ಮಾಡುತ್ತಾರೆ. ದೀಪೋತ್ಸವ ಆಚರಿಸಲು ಬರಿಗಾಲಿನಲ್ಲಿ ಅಯೋಧ್ಯೆಗೆ ಆಗಮಿಸಿದ್ದಾರೆ. ಜಾರ್ಖಂಡ್ ಪ್ರದೇಶ್ ಶ್ರೀರಾಮ ಜಾನಕಿ ಚಾರಿಟೇಬಲ್ ಟ್ರಸ್ಟ್ ಬುಡಕಟ್ಟು ಜನಾಂಗದವರನ್ನು ದೀಪೋತ್ಸವದಲ್ಲಿ ಕರೆತಂದಿದೆ. ನಾಳೆ ಬುಡಕಟ್ಟು ಜನರು ಸಿಎಂ ಯೋಗಿ ಆದಿತ್ಯನಾಥ್ ಜೊತೆಯಲ್ಲಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಬುಡಕಟ್ಟು ಜನಾಂಗದವರು ಅವರ ಸಾಂಪ್ರದಾಯಿಕ ಉಡುಪನ್ನು ಧರಿಸಲಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿ ವರ್ಷ ದೀಪೋತ್ಸವ ಆಚರಣೆ ಸಂದರ್ಭ ಬುಡಕಟ್ಟು ಜನರಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಈ ಹಿಂದೆ ಸಂತಾಲಿ ಸಮುದಾಯವು ಅಯೋಧ್ಯೆಯಲ್ಲಿ ನಡೆದ ದೀಪೋತ್ಸವದಲ್ಲಿ ಭಾಗಿಯಾಗಿತ್ತು.
-
#WATCH | Uttar Pradesh: Artists showcase their performances ahead of the Shobhayatra which is a part of the Deepotsav in Ayodhya today pic.twitter.com/ocSY0K5bod
— ANI UP/Uttarakhand (@ANINewsUP) November 11, 2023 " class="align-text-top noRightClick twitterSection" data="
">#WATCH | Uttar Pradesh: Artists showcase their performances ahead of the Shobhayatra which is a part of the Deepotsav in Ayodhya today pic.twitter.com/ocSY0K5bod
— ANI UP/Uttarakhand (@ANINewsUP) November 11, 2023#WATCH | Uttar Pradesh: Artists showcase their performances ahead of the Shobhayatra which is a part of the Deepotsav in Ayodhya today pic.twitter.com/ocSY0K5bod
— ANI UP/Uttarakhand (@ANINewsUP) November 11, 2023
ಮದುಮಗಳಂತೆ ಸಿಂಗಾರಗೊಂಡ ಆಯೋಧ್ಯೆ : ದೀಪೋತ್ಸವ ಹಿನ್ನೆಲೆ ಅಯೋಧ್ಯಾನಗರಿ ಮಧುಮಗಳಂತೆ ಸಿಂಗಾರಗೊಂಡಿದೆ. ಸಾವಿರಾರು ಭಕ್ತರು ದೀಪೋತ್ಸವಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಸಾಕಷ್ಟು ಕೆಲಸ ಈಗಾಗಲೇ ಪೂರ್ಣಗೊಂಡಿದೆ. ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋವೊಂದನ್ನು ರಾಮಜನ್ಮಭೂಮಿ ಟ್ರಸ್ಟ್ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋ ಬಿಡುಗಡೆ.. ಜನವರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ, ಪ್ರಧಾನಿ ಮೋದಿಗೆ ಆಹ್ವಾನ