ಅಯೋಧ್ಯಾ, ಉತ್ತರ ಪ್ರದೇಶ : ದರೋಡೆಕೋರ ಅತೀಕ್ ಅಹ್ಮದ್ ಪುತ್ರ ಅಸದ್ ಅಹ್ಮದ್‌ನನ್ನು ಎನ್‌ಕೌಂಟರ್‌ನಲ್ಲಿ ಹೊಡೆದಾಕಿದ ಯುಪಿ ಎಸ್‌ಟಿಎಫ್ (ವಿಶೇಷ ಕಾರ್ಯಪಡೆ)ಗೆ ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮುಖ್ಯ ಅರ್ಚಕ ರಾಜು ದಾಸ್ 51,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಪ್ರಯಾಗ್‌ರಾಜ್‌ನ ಪ್ರಸಿದ್ಧ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸದ್, ಅವನ ಸಹಚರ ಗುಲಾಮ್ ಮೊಹಮ್ಮದ್‌ನನ್ನು ಎಸ್‌ಟಿಎಫ್ ತಂಡ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟನು.
ರಾಜ್ಯದ ಝಾನ್ಸಿ ಜಿಲ್ಲೆಯ ಬಬಿನಾ ಪ್ರದೇಶದಲ್ಲಿ ಯುಪಿ ಎಸ್‌ಟಿಎಫ್ ಎನ್‌ಕೌಂಟರ್ ನಡೆಸಿತ್ತು. ಈ ಕುರಿತು ಯುಪಿ ಮುಖ್ಯಮಂತ್ರಿಗಳು ಕಾರ್ಯಾಚರಣೆಯಲ್ಲಿ ತೊಡಗಿರುವ ಎಸ್‌ಟಿಎಫ್ ತಂಡವನ್ನು ಶ್ಲಾಘಿಸಿದ್ದರು. ಈ ಹಿನ್ನೆಲೆ ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಮುಖ್ಯ ಅರ್ಚಕ ರಾಜು ದಾಸ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅರ್ಚಕ ರಾಜು ದಾಸ್, ಯುಪಿ ಎಸ್‌ಟಿಎಫ್ ತಂಡವನ್ನು ಅಭಿನಂದಿಸಿದ್ದಾರೆ. ಯೋಗಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದರಿಂದ ದರೋಡೆಕೋರರಿಗೆ ರಾಜ್ಯವನ್ನು ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಮಾಫಿಯಾಗೆ ಸಲಹೆ ನೀಡಿದ ಅರ್ಚಕ ರಾಜು ದಾಸ್: ಮಾತು ಮುಂದುವರಿಸಿದ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದ ಪ್ರಧಾನ ಅರ್ಚಕ ರಾಜು ದಾಸ್, ರಾಜ್ಯದ ಎಲ್ಲ ಗೂಂಡಾ ಮಾಫಿಯಾಗಳಿಗೆ ನನ್ನ ಸಲಹೆ ಏನೆಂದರೆ, ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವವರೆಗೆ ಮತ್ತು ಬಾಬಾ (ಯೋಗಿ ಆದಿತ್ಯನಾಥ್) ಮುಖ್ಯಮಂತ್ರಿ ಆಗಿರುವವರೆಗೆ ನೀವೆಲ್ಲರೂ ರಾಜ್ಯವನ್ನು ಬಿಟ್ಟು ತೊರೆಯಬೇಕು ಅಥವಾ ತಮ್ಮ ತಮ್ಮ ಸಿದ್ಧಾಂತಗಳನ್ನು ಬದಲಾಯಿಸಬೇಕು ಎಂದು ಕರೆ ನೀಡಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಕ್ರಿಮಿನಲ್‌ಗಳನ್ನು ಕೂಡ ಇದೇ ರೀತಿ ಎನ್‌ಕೌಂಟರ್ ಮಾಡಬೇಕು ಮತ್ತು ಯಾರನ್ನೂ ಬಿಡಬಾರದು ಎಂಬುದು ರಾಜ್ಯ ಸರ್ಕಾರ ಮತ್ತು ಯುಪಿ ಎಸ್‌ಟಿಎಫ್‌ಗೆ ಒತ್ತಾಯಿಸುತ್ತೇವೆ ಎಂದು ರಾಜು ದಾಸ್ ಹೇಳಿದರು. ಖಂಡಿತವಾಗಿಯೂ ಈ ಎನ್‌ಕೌಂಟರ್ ನಡೆಸಿದ ಯುಪಿ ಎಸ್‌ಟಿಎಫ್‌ಗೆ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಎಂದು ಪೂಜಾರಿ ಹೇಳಿದರು.
ಓದಿ: Explainer:ಅತೀಕ್ ಅಹಮದ್ ಪುತ್ರನ ಎನ್‌ಕೌಂಟರ್ ಮರು ದಿನ.. ಉತ್ತರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟ!
ಎನ್‌ಕೌಂಟರ್‌ನಲ್ಲಿ ಅಸಾದ್ ಬಲಿ: ಉತ್ತರ ಪ್ರದೇಶದ ಪಾತಕಿ ಅತೀಕ್ ಅಹ್ಮದ್ ಪುತ್ರ ಅಸಾದ್ ಎನ್‌ಕೌಂಟರ್‌ನಲ್ಲಿ ಎಸ್‌ಟಿಎಫ್ ತಂಡ ಹೊಡೆದು ಹಾಕಿದೆ. ಪೊಲೀಸರ ಗುಂಡಿನ ದಾಳಿಯಲ್ಲಿ ಆತ ಹತನಾಗಿದ್ದಾನೆ. ನಡೆದ ಎನ್‌ಕೌಂಟರ್‌ನಲ್ಲಿ ಅಸದ್ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಪೊಲೀಸರು ಸುಮಾರು 40 ಸುತ್ತುಗಳ ಕಾಲ ಗುಂಡು ಹಾರಿಸಿದರು. ಆದರೆ ಅಸಾದ್ ಓಡಿಹೋಗುವಲ್ಲಿ ಯಶಸ್ವಿಯಾಗಲಿಲ್ಲ. ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಅಸಾದ್ ಮೇಲೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಸಾದ್ ಜೊತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಹೊಡೆದಾಕಿದ್ದಾರೆ. ಈ ಇಬ್ಬರೂ ಕ್ರಿಮಿನಲ್‌ಗಳು ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಎನ್‌ಕೌಂಟರ್‌ಗಳ ಬಗ್ಗೆ ಇಲ್ಲಿಯವರೆಗೆ ಯಾರೂ ಪ್ರಶ್ನೆಗಳನ್ನು ಎತ್ತಿಲ್ಲ. ಇನ್ನು ಈ ಎನ್‌ಕೌಂಟರ್ ನಡೆಸಿದ ತಂಡಕ್ಕೆ ಸಿಎಂ ಯೋಗಿ ಆದಿತ್ಯಾನಾಥ್ ಅಭಿನಂದನೆಗಳು ಸಲ್ಲಿಸಿದ್ದಾರೆ.