ಆಂಧ್ರ ಪ್ರದೇಶ: ಯಾವುದೇ ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದರೆ, ಮೊದಲು ರೋಗಿಗೆ ಪ್ರಜ್ಞೆ ತಪ್ಪಿಸಲಾಗುತ್ತದೆ. ಆದರೆ ಗುಂಟೂರಿನ ವೈದ್ಯರು ರೋಗಿಗೆ ಪ್ರಜ್ಞೆ ಇರುವಾಗಲೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ರೋಗಿಯೊಬ್ಬರಿಗೆ ನೆಚ್ಚಿನ ಟಿವಿ ಕಾರ್ಯಕ್ರಮವನ್ನು ತೋರಿಸುವ ಮೂಲಕ ವೈದ್ಯರು ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದು, ಇದು ಕೇಳಲು ಸ್ವಲ್ಪ ಆಶ್ಚರ್ಯವಾಗಿದ್ದರೂ ನಿಜ.
ಗುಂಟೂರು ಜಿಲ್ಲೆಯ ಪಾಟಿಬಂಡ್ಲಾ ಗ್ರಾಮದ ಬಟುಲಾ ವರಪ್ರಸಾದ್ ಎಂಬ ವ್ಯಕ್ತಿಗೆ, ಬ್ರೈನ್ ಟ್ಯುಮರ್ ಇದೆ. ಈ ಹಿಂದೆ ಹೈದರಾಬಾದ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡನೇ ಹಂತದ ಕಾರ್ಯಾಚರಣೆಗಾಗಿ ಅವರು ಗುಂಟೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಎಲ್ಲ ರೀತಿಯ ಪರೀಕ್ಷೆಗಳ ನಂತರ, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಲಾಗಿತ್ತು.
ಮೆದುಳಿನಂತಹ ಪ್ರಮುಖ ಅಂಗಗಳಿಗೆ ಆಪರೇಷನ್ ಮಾಡುವುದು ತುಂಬಾ ಕಷ್ಟ. ಸ್ಪಲ್ಪ ಹೆಚ್ಚು ಕಡಿಮೆಯಾದರೆ ರೋಗಿಯು ಅಪಾಯಕ್ಕೆ ಸಿಲುಕುತ್ತಾನೆ. ಅದಕ್ಕಾಗಿಯೇ ರೋಗಿಯು ಪ್ರಜ್ಞೆ ಇರುವಾಗ ಇಂತಹ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ. ರೋಗಿಯು ತುಂಬಾ ಧೈರ್ಯಶಾಲಿಯಾಗಿರಬೇಕು. ಅಂದಾಗ ಮಾತ್ರ ಈ ಕಾರ್ಯ ಪೂರ್ಣಗೊಳ್ಳುತ್ತದೆ,
ವೈದ್ಯರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನರಮಂಡಲವನ್ನು ಒತ್ತಡರಹಿತವಾಗಿಡಲು, ರೋಗಿಗೆ ತನ್ನ ಲ್ಯಾಪ್‌ಟಾಪ್‌ನಲ್ಲಿ ಚಲನಚಿತ್ರ ಮತ್ತು ಹಾಗೂ ಬಿಗ್ ಬಾಸ್ ಟಿವಿ ಕಾರ್ಯಕ್ರಮ ಹಾಗೂ ಆತನ ನೆಚ್ಚಿನ ಸಿನಿಮಾ ಅವತಾರ್ ಹಾಲಿವುಡ್ ಸಿನಿಮಾ ತೋರಿಸಿ ಯಶಸ್ವಿಯಾಗಿ ಆಪರೇಷನ್ ಮಾಡಿದ್ದಾರೆ. ಇಂತಹ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಾಗಿ ವಿದೇಶದಲ್ಲಿ ಮಾಡಲಾಗುತ್ತದೆ. ಆದರೆ ಇದು ಭಾರತದಲ್ಲಿ ಅಪರೂಪ.