ETV Bharat / bharat

ವಧುವನ್ನು ಚಿನ್ನದಿಂದ ಅಲಂಕರಿಸುವ ಜಾಹೀರಾತುಗಳು ಬೇಡ: ಕೇರಳ ರಾಜ್ಯಪಾಲರ ಕಳಕಳಿ - ಕೇರಳದಲ್ಲಿ ಚಿನ್ನದ ಜಾಹೀರಾತುಗಳು

ವರದಕ್ಷಿಣೆ ವಿರೋಧಿ ಅಭಿಯಾನದಲ್ಲಿ ನಾನೂ ಕೂಡಾ ಸ್ವಯಂಸೇವಕನಾಗಿ ಭಾಗವಹಿಸಲು ಸಿದ್ಧ ಎಂದು ಕೇರಳ ರಾಜ್ಯಪಾಲರು ಹೇಳಿದ್ದು, ಜಾಹೀರಾತುಗಳ ವಿರುದ್ಧವೂ ಕಡಿವಾಣ ಅಗತ್ಯ ಎಂದಿದ್ದಾರೆ.

avoid-pictures-of-bride-decked-with-gold-in-advertisements-kerala-governor-urges-jewelers
ವಧುವನ್ನು ಚಿನ್ನದಿಂದ ಅಲಂಕರಿಸುವ ಜಾಹೀರಾತುಗಳು ಬೇಡ: ಕೇರಳ ರಾಜ್ಯಪಾಲರ ಕಳಕಳಿ
author img

By

Published : Aug 13, 2021, 6:56 AM IST

Updated : Aug 13, 2021, 8:14 AM IST

ಕೊಚ್ಚಿ(ಕೇರಳ): ವರದಕ್ಷಿಣಾ ಸಂಬಂಧಿ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ವಧುವನ್ನು ಚಿನ್ನದ ಆಭರಣಗಳಿಂದ ಅಲಂಕರಿಸುವ ಜಾಹೀರಾತುಗಳನ್ನು ಹೆಚ್ಚು ತೋರಬಾರದೆಂದು ಮತ್ತು ಈ ಬಗ್ಗೆ ನಿಯಂತ್ರಣ ಹೇರಬೇಕೆಂದು ಕೇರಳ ರಾಜ್ಯಪಾಲರು ಮನವಿ ಮಾಡಿದ್ದಾರೆ.

ಕೇರಳದಲ್ಲಿ ವರದಕ್ಷಿಣಾ ಸಂಬಂಧಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಜಾಹೀರಾತುಗಳನ್ನು ತೋರಿಸಬಾರದೆಂದು ಜ್ಯುವೆಲ್ಲರಿ ಉದ್ಯಮಗಳ ಮಾಲೀಕರಿಗೆ ರಾಜ್ಯಪಾಲ ಆರೀಫ್​ ಮೊಹಮದ್ ಖಾನ್ ಮನವಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೇರಳದ ಮೀನುಗಾರಿಕೆ ಮತ್ತು ಸಾಗರೋತ್ತರ ಅಧ್ಯಯನ ವಿಶ್ವವಿದ್ಯಾಲಯ(ಕೆಯುಎಫ್​ಒಎಸ್​​)ನ ಏಳನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಆರೀಫ್​ ಮೊಹಮದ್ ಖಾನ್ ಇಂಥಹ ಜಾಹೀರಾತುಗಳು ಸಮಾಜದ ದಾರಿ ತಪ್ಪಿಸುತ್ತವೆ, ತಪ್ಪು ಸಂದೇಶ ರವಾನಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ವರದಕ್ಷಿಣೆ ಖಂಡಿಸಿ ವಿದ್ಯಾರ್ಥಿಗಳಿಂದ ಸ್ವಯಂ ಘೋಷಣಾ ಪತ್ರಗಳನ್ನು ವಿಶ್ವವಿದ್ಯಾಲಯ ಸಂಗ್ರಹಿಸಿತ್ತು. ಈ ಘೋಷಣಾ ಪತ್ರಗಳನ್ನು ವಿವಿಯ ಉಪಕುಲಪತಿ ಪ್ರೊ.ಡಾ.ರಿಗಿ ಜಾನ್ ರಾಜ್ಯಪಾಲರಿಗೆ ನೀಡಿದರು. ಈ ವೇಳೆ ಸುಮಾರು 386 ಪದವಿ, ಸ್ನಾತಕೋತ್ತರ ಪದವಿ ಮತ್ತು ಒಂಬತ್ತು ಜನರಿಗೆ ಪಿಎಚ್‌ಡಿ ನೀಡಲಾಯಿತು. ವರದಕ್ಷಿಣೆ ವಿರೋಧಿ ನಿಲುವು ತಳೆದ ಎಲ್ಲಾ ವಿದ್ಯಾರ್ಥಿಗಳನ್ನು ರಾಜ್ಯಪಾಲರು ಅಭಿನಂದಿಸಿದರು.

avoid-pictures-of-bride-decked-with-gold-in-advertisements-kerala-governor-urges-jewelers
ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳೊಂದಿಗೆ ಕೇರಳ ರಾಜ್ಯಪಾಲರು

ಇದಕ್ಕೂ ಮೊದಲು ವರದಕ್ಷಿಣೆ ಪಿಡುಗಿನ ವಿರುದ್ಧ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜುಲೈ 14ರಂದು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಎನ್​ಜಿಒಗಳು ಮತ್ತು ಸ್ವಯಂಸೇವಕರು ವರದಕ್ಷಿಣೆ ವಿರುದ್ಧದ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ತಾನೂ ಈ ವಿಚಾರವಾಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ಸಿದ್ಧ ಎಂದು ಭರವಸೆಯನ್ನು ರಾಜ್ಯಪಾಲರು ನೀಡಿದ್ದರು.

ಇದನ್ನೂ ಓದಿ: ರಾಜೌರಿಯಲ್ಲಿ ಬಾಂಬ್‌ ಸ್ಫೋಟ: ಬಿಜೆಪಿ ನಾಯಕನ ಕುಟುಂಬದ ನಾಲ್ವರಿಗೆ ಗಾಯ; ಓರ್ವ ಸಾವು

Last Updated : Aug 13, 2021, 8:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.