ಕೇದಾರನಾಥ(ಉತ್ತರಾಖಂಡ): ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ ಸಂಭವಿಸಿದೆ. ಇಂದು ಬೆಳಗ್ಗೆ ಹಿಮ ಬೆಳ್ಳಗೆ ಹಾಲಿನ ನೊರೆಯಂತೆ ಅಲೆಗಳ ಮಾದರಿ ಬಂದು ಅಪ್ಪಳಿಸಿದೆ. ಇದರಲ್ಲಿ ವಿಶ್ವಖ್ಯಾತಿಯ ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಕೇದಾರನಾಥ ಕಣಿವೆಯಲ್ಲಿ ಬೃಹತ್ ಪ್ರಮಾಣದ ಹಿಮಪಾತವಾತದಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಇಂದಿನ ಹಿಮಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ. ದೇವಾಲಯಕ್ಕೂ ಏನೂ ಆಗಿಲ್ಲ. ಬೆಳ್ಳಂಬೆಳಗ್ಗೆ ಹಿಮ ದುತ್ತೆಂದು ಕುಸಿಯಿತು. ಇದರಿಂದ ಹಲವೆಡೆ ಮಳೆಯಾಗಿದೆ ಎಂದು ತಿಳಿಸಿದರು.
ವಾರದ ಹಿಂದಷ್ಟೇ ವಿಶ್ವವಿಖ್ಯಾತ ಕೇದಾರನಾಥ ಧಾಮ ಚೋರಬರಿ ಹಿಮನದಿಯ ಜಲಾನಯನ ಪ್ರದೇಶದಲ್ಲಿ ಹಿಮಪಾತವಾಗಿತ್ತು. ಆಗಲೂ ಯಾವುದೇ ಹಾನಿ ಸಂಭವಿಸಿರಲಿಲ್ಲ. ಬಳಿಕ ದೇವಸ್ಥಾನ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಭಕ್ತರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಿತ್ತು.
2013 ರ ವಿನಾಶಕಾರಿ ಹಿಮಕುಸಿತ: 2013 ರಲ್ಲಿ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಭಾರಿ ವಿನಾಶಕಾರಿ ಘಟನೆ ನಡೆದಿತ್ತು. ಹಿಮಕುಸಿತದಿಂದ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿತ್ತು. ಇದರಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಇಡೀ ಬದರಿನಾಥ್ ದೇವಸ್ಥಾನ ಪ್ರವಾಹದಲ್ಲಿ ಮುಳುಗಿತ್ತು.
ಓದಿ: 5ಜಿ ನೆಟ್ವರ್ಕ್ಗೆ ಪ್ರಧಾನಿ ಮೋದಿ ಚಾಲನೆಗೆ ಕ್ಷಣಗಣನೆ.. ಅದರ ಸ್ಪೀಡ್ ಎಷ್ಟಿದೆ ಗೊತ್ತಾ?