ETV Bharat / bharat

ಕೋವಿಡ್ 2ನೇ ಅಲೆ: ಭೀತಿಯಲ್ಲಿ ಆಟೋಮೊಬೈಲ್ ಕ್ಷೇತ್ರ

author img

By

Published : Apr 19, 2021, 5:06 PM IST

ದೇಶದಲ್ಲಿ ಕೊರೊನಾ 2ನೇ ಅಲೆ ಆತಂಕ ತಂದೊಡ್ಡಿದ್ದು, ಆಟೋಮೊಬೈಲ್ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ ಕೆಲ ತಿಂಗಳಿನಿಂದ ಬುಕ್ಕಿಂಗ್ ಹಾಗೂ ಡೆಲಿವರಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲ ಕಂಪನಿಗಳ ಮಾರಾಟದಲ್ಲಿ ಇಳಿಕೆ ಭೀತಿ ಎದುರಾಗಿದೆ.

automakers-fear-dent-in-sales-as-covid-19-cases-surge-in-india
ಮಾರಾಟ ಪ್ರಮಾಣ ಇಳಿಕೆ ಭೀತಿಯಲ್ಲಿ ಆಟೋಮೊಬೈಲ್ ಕ್ಷೇತ್ರ

ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆ ಕೈಗಾರಿಕಾ ವಲಯದ ಮೇಲೆ ಇನ್ನಿಲ್ಲದ ಪರಿಣಾಮ ಉಂಟುಮಾಡಿದೆ. ಅದರಲ್ಲೂ ಆಟೋಮೊಬೈಲ್ಸ್ ಕ್ಷೇತ್ರ ಕೊರೊನಾಗೆ ಸಿಲುಕಿ ನಷ್ಟ ಅನುಭವಿಸುವಂತಾಗಿದೆ.

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (ಇಂಡಿಯಾ) ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಹೋಂಡಾ ಕಾರ್ಸ್​ ಮಾರಾಟ ಪ್ರಮಾಣ ಇಳಿಕೆಯಾಗುವ ಭೀತಿ ಎದುರಿಸುತ್ತಿವೆ.

ದೇಶದ ಅತೀದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಕಾರುಗಳ ಮಾರಾಟವು ಗ್ರಾಹಕರ ಆರ್ಥಿಕ ಬೆಳವಣಿಯೊಂದಿಗೆ ನೇರ ಸಂಬಂಧ ಮತ್ತು ಗ್ರಾಹಕರ ಭಾವನೆಗೂ ನಿಕಟ ಸಂಬಂಧವಿದೆ ಎಂದಿದೆ.

ಕೊರೊನಾ ಲಾಕ್​ಡೌನ್​​ನಿಂದಾಗಿ ಕಾರುಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ ಕೊರೊನಾ ಪರಿಸ್ಥಿತಿ ಹದಗೆಡುವುದು ಸಹ ಗ್ರಾಹಕರು ಮಾನಸಿಕವಾಗಿ ಖರೀದಿ ಮೇಲೆ ಒಲವು ತೋರುವುದಿಲ್ಲ ಎಂದಿದ್ದಾರೆ.

ಇದೇ ರೀತಿ ಕೊರೊನಾ 2ನೇ ಅಲೆ ಕುರಿತು ಪ್ರತಿಕ್ರಿಯಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ, ಸ್ಥಳೀಯವಾಗಿ ಹೇರಲಾದ ನಿಯಮಾವಳಿಗಳು ಕಾರುಗಳ ಬುಕ್ಕಿಂಗ್ ಹಾಗೂ ಡೆಲಿವರಿ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ.

ಕೋವಿಡ್​ ನಿಯಮಾವಳಿಗಳು ಸಡಿಲಗೊಂಡ ಬಳಿಕ ತಿಂಗಳ ಅಂತ್ಯದಲ್ಲಿ ನಮಗೆ ಸರಿಯಾದ ಅಂಕಿ - ಅಂಶ ದೊರಕುತ್ತದೆ. ಈ ದಿನಾಂಕದ ವರೆಗೂ ನಾವು ಉತ್ತಮ ಸಂಖ್ಯೆಯ ಬುಕ್ಕಿಂಗ್ ಹೊಂದಿದ್ದೇವೆ. ಆದರೆ, ಎಲ್ಲಾ ಗ್ರಾಹಕರಿಗೂ ನಾವು ಡೆಲಿವರಿ ನೀಡಲಾಗುತ್ತಿಲ್ಲ. ಫೆಬ್ರವರಿ, ಮಾರ್ಚ್​ ಹಾಗೂ ಏಪ್ರಿಲ್​​ನ ಬುಕ್ಕಿಂಗ್​ಗಳನ್ನು ನಾವು ಮುಂದೆ ಹಾಕಿದ್ದೇವೆ. ಲಾಕ್​ಡೌನ್, ಕೊರೊನಾ ನಡುವೆಯೂ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಕೊರೊನಾ; ಸಾವಿರ ಅಂಕ ಕುಸಿದ ಸೆನ್ಸೆಕ್ಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.