ಹಲ್ದ್ವಾನಿ(ಗುಜರಾತ್): ಹಲ್ದ್ವಾನಿ ನಗರದ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೇರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುತ್ತಿದ್ದ ಮಗಳ ಮದುವೆ ಮತ್ತು ಮೆರವಣಿಗೆ ನಡೆಯಬೇಕಿತ್ತು. ಆದರೆ, ವಧುವಿನ ಆಭರಣಗಳು ಕಾಣೆಯಾಗಿವೆ. ನಂತರ ಮದುವೆ ಸಮಾರಂಭದಲ್ಲಿ ಕೋಲಾಹಲ ಉಂಟಾಗಿ ಮದುವೆಯ ಸಂತೋಷವು ಕ್ಷಣಾರ್ಧದಲ್ಲಿ ನುಚ್ಚುನೂರಾಗಿದೆ.
ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ಮುಖಾನಿಯಲ್ಲಿ ಶುಕ್ರವಾರ ಮದುವೆ ಇತ್ತು, ವಧುವಿನ ಕುಟುಂಬವು 6 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಖರೀದಿಸಿ ಆಟೋದಲ್ಲಿ ಬ್ಯಾಂಕ್ವೆಟ್ ಹಾಲ್ ಅನ್ನು ತಲುಪಿದ್ದಾರೆ, ಆದರೆ, ಆಟೋದಲ್ಲಿಯೇ ಆಭರಣದ ಚೀಲವನ್ನು ಮರೆತ್ತಿದ್ದಾರೆ. ಈ ವೇಳೆ ಆಟೋ ಚಾಲಕ ಕೀರ್ತಿ ವಲ್ಲಭ್ ಜೋಶಿ ಮನೆಗೆ ತೆರಳಿದ್ದು ಊಟದ ಮುಗಿಸಿಕೊಂಡು ಬಂದು ಆಟೋದ ಹಿಂದೆ ನೋಡಿದಾಗ ಒಂದು ಬ್ಯಾಗ್ ಕಾಣಿಸಿಕೊಂಡಿದೆ ಅದರಲ್ಲಿ ಆಭರಣಗಳು ಮತ್ತು 50,000 ನಗದು ಇರುವುದು ಪತ್ತೆಯಾಗಿದೆ.
ಸುಮಾರು ಎರಡು ಗಂಟೆಗಳ ನಂತರ ಆಟೋ ಚಾಲಕನ ಕೈಯಲ್ಲಿ ಆಭರಣದ ಚೀಲವನ್ನು ಹಿಡಿದು ಮದುವೆ ನಡೆಯುತ್ತಿದ್ದ ಬ್ಯಾಂಕ್ವೆಟ್ ಹಾಲ್ಗೆ ಬಂದಿದ್ದಾರೆ. ಆಭರಣಗಳನ್ನು ಕಳೆದುಕೊಂಡು ಹಾತಶರಾಗಿದ್ದ ವಧುವಿನ ಕುಟುಂಬಸ್ಥರು ಆಟೋ ಚಾಲಕ ಕೀರ್ತಿ ವಲ್ಲಭ್ ಜೋಶಿ ಕೈಯಲ್ಲಿ ಆಭರಣದ ಚೀಲವನ್ನು ನೋಡಿ ಸಂತಸಗೊಂಡಿದ್ದಾರೆ.
ನಂತರ ಆಟೋ ಚಾಲಕ ಆಭರಣದ ಚೀಲವನ್ನು ವಧುವಿನ ಕಡೆಯವರಿಗೆ ಹಸ್ತಾಂತರಿಸಿದರು. ಈ ಮೂಲಕ ಆಟೋ ಚಾಲಕ ಕೀರ್ತಿ ವಲ್ಲಭ್ ಜೋಶಿ ತಮ್ಮ ಪ್ರಾಮಾಣಿಕತೆಯಿಂದ ಇತರರಿಗೆ ಮಾದರಿಯಾದರು.
ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿದ ಮದುವೆ ಮನೆಯವರು ಬಹುಮಾನ ನೀಡಲು ಮುಂದದಾಗ ಬಹುಮಾನವನ್ನು ನಿರಾಕರಿಸಿದರು. ನಂತರ ಅವರು ಮದುವೆಯಲ್ಲಿ ಭಾಗವಹಿಸಿ ವಧುವನ್ನು ಆಶೀರ್ವದಿಸಿದರು.
ಇದನ್ನೂ ಓದಿ:ಜಮ್ಮು ರೈಲು ನಿಲ್ದಾಣಕ್ಕೆ ಈಗ 50ರ ಸಂಭ್ರಮ....! ಅಭಿವೃದ್ಧಿ ಪಥದತ್ತ ನಿಲ್ದಾಣ ನಿತ್ಯ 55ಕ್ಕಿಂತ ಹೆಚ್ಚು ರೈಲು ಸಂಚಾರ