ETV Bharat / bharat

ಪಂಜಾಬ್​​ನಲ್ಲಿ ಉಗ್ರರ ಭಾರಿ ಸಂಚು ವಿಫಲ: ಆರ್​​ಡಿಎಕ್ಸ್​​ ಬಾಕ್ಸ್​ ಪೊಲೀಸರ ವಶಕ್ಕೆ - ಪಂಜಾಬ್​​ನಲ್ಲಿ ಉಗ್ರರ ಭಾರಿ ಸಂಚು ವಿಫಲ

ಆರೋಪಿಗಳು ಬೈಕ್​ನಲ್ಲಿ ಈ ಸ್ಫೋಟಕ ಸಾಧನಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.

Attempts to destabilize Punjab failed
ಪಂಜಾಬ್​​ನಲ್ಲಿ ಉಗ್ರರ ಭಾರಿ ಸಂಚು ವಿಫಲ
author img

By

Published : May 8, 2022, 10:03 PM IST

ಚಂಡೀಗಢ್​( ಪಂಜಾಬ್) : ಪಂಜಾಬ್​​ನಲ್ಲಿ ಭಯೋತ್ಪಾದಕರು ರೂಪಿಸಿದ್ದ ಸಂಚನ್ನು ಪೊಲೀಸರು ಭಾನುವಾರ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನದಲ್ಲಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಆರ್​​ಡಿಎಕ್ಸ್​​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ಐಇಡಿ ಟೈಮರ್, ಡಿಟೋನೇಟರ್ ಮತ್ತು ಬ್ಯಾಟರಿಯನ್ನು ಜಪ್ತಿ ಮಾಡಲಾಗಿದೆ.

ತರ್ನ್ ತರನ್ ಜಿಲ್ಲೆಯಲ್ಲಿ ಲೋಹದ ಕಪ್ಪು ಪೆಟ್ಟಿಗೆಯಲ್ಲಿ ಆರ್​​ಡಿಎಕ್ಸ್​​ ಪ್ಯಾಕ್ ಮಾಡಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲೋಹದ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿದ್ದ ಆರ್‌ಡಿಎಕ್ಸ್‌ನೊಂದಿಗೆ ಐಇಡಿ ಇತ್ತು. ಇದರ ತೂಕ 2.5 ಕೆ.ಜಿ. ಇದೆ. ಸುಬೋದಲ್ಲಿ ದೊಡ್ಡ ಸ್ಫೋಟ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆರೋಪಿಗಳು ಬೈಕ್​ನಲ್ಲಿ ಈ ಸ್ಫೋಟಕ ಸಾಧನಗಳನ್ನು ಸಾಗಿಸುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ವಶಕ್ಕೆ ಪಡೆದ ಸ್ಫೋಟಕಗಳನ್ನು ಪೊಲೀಸರು ಈಗಾಗಲೇ ನಿಷ್ಕ್ರಿಯಗೊಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ: ಏಳು ಜನರ ಸಜೀವ ದಹನಕ್ಕೆ ಕಾರಣವಾದ ಪಾಗಲ್ ಪ್ರೇಮಿ​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.