ETV Bharat / bharat

ಪ್ರೀತಿಸಲು ನಿರಾಕರಿಸಿದ ಯುವತಿ: ಉದ್ಯಮಿ ಮಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ - ಪ್ರೀತಿಸಲು ನಿರಾಕರಿಸಿದ ಯುವತಿ

ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಯುವಕನೋರ್ವ ಉದ್ಯಮಿ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ.

ಉದ್ಯಮಿ ಮಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಉದ್ಯಮಿ ಮಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
author img

By

Published : Aug 23, 2022, 9:18 PM IST

ದುಮ್ಕಾ(ಜಾರ್ಖಂಡ್​): ಪ್ರೀತಿಸಲು ನಿರಾಕರಿಸಿದ್ದಳು ಎಂಬ ಕಾರಣಕ್ಕಾಗಿ ಯುವತಿಯೋರ್ವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಜಾರ್ಖಂಡ್​ನ ದುಮ್ಕಾದಲ್ಲಿ ನಡೆದಿದೆ. ಯುವತಿಯನ್ನು ಕೊಲೆ ಯತ್ನದಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಜಾರ್ಖಂಡ್​ನ ದಮ್ಕಾದಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿಯೋರ್ವರ ಮಗಳಿಗೆ ಪ್ರೀತಿಸಲು ಒತ್ತಡ ಹಾಕ್ತಿದ್ದ ಅನ್ಯ ಧರ್ಮದ ಯುವಕ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿದು ಬಂದಿದೆ. ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ತೀವ್ರ ಸುಟ್ಟ ಗಾಯಗಳಾಗಿವೆ. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಜಾನೋ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಚಂದ್ರಜಿತ್ ಸಿಂಗ್​, ಎಸ್‌ಡಿಪಿಒ ನೂರ್ ಮುಸ್ತಫಾ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದರು.

ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ ಯುವತಿ ಕೊಲೆ ಯತ್ನ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ಹುಬ್ಬಳ್ಳಿ ನ್ಯಾಯಾಲಯ

ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿಯನ್ನು ಶಾರುಖ್ ಎಂದು ಗುರುತಿಸಲಾಗಿದೆ. ಯುವತಿಯ ಪಕ್ಕದ ಮನೆಯಲ್ಲೇ ಈತ ವಾಸವಾಗಿದ್ದನು. ಉದ್ಯಮಿ ಸಂಜೀವ್​​ ಸಿಂಗ್​ ಅವರ ಪುತ್ರಿಗೆ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯ ಮೊಬೈಲ್​ ನಂಬರ್ ಪಡೆದುಕೊಂಡು ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದನು. ಈ ವಿಷಯವಾಗಿ ಆತನಿಗೆ ಛೀಮಾರಿ ಹಾಕಿರುವ ಘಟನೆ ನಡೆದಿತ್ತು. ಇದಾದ ಕೆಲ ದಿನಗಳ ಬಳಿಕ ತನ್ನನ್ನು ಪ್ರೀತಿಸದಿದ್ದರೆ, ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದನು.

ಮಂಗಳವಾರ ಬೆಳಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಮಲಗಿದ್ದಳು. ಈ ವೇಳೆ, ಮನೆಯ ಕಿಟಕಿಯಿಂದ ಪೆಟ್ರೋಲ್​ ಎರಚಿ, ಆಕೆಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಎಸ್​​ಡಿಪಿಒ ನೂರ್ ಮುಸ್ತಫಾ, ಒನ್​ ವೇ ಪ್ರೀತಿ ಪ್ರಕರಣ ಇದಾಗಿದ್ದು, ವಿದ್ಯಾರ್ಥಿನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ಆರೋಪಿಯನ್ನು ಬಂಧನ ಮಾಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.