ETV Bharat / bharat

ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಅಲ್‌ ಖೈದಾ ಉಗ್ರರ ಸೆರೆ

ಉತ್ತರ ಪ್ರದೇಶದ ಲಖನೌದಲ್ಲಿರುವ ಕಾಕೋರಿಯ ರಿಂಗ್ ರೋಡ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ ಎಟಿಎಸ್ ತಂಡ ಇಬ್ಬರು ಶಂಕಿತ ಅಲ್ಖೈದಾ ಉಗ್ರರನ್ನು ಸೆರೆ ಹಿಡಿದಿದೆ.

ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಅಲ್-ಖೈದಾ ಉಗ್ರರ ಸೆರೆ

author img

By

Published : Jul 11, 2021, 1:18 PM IST

Updated : Jul 11, 2021, 4:08 PM IST

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಲಖನೌದಲ್ಲಿರುವ ಕಾಕೋರಿಯ ರಿಂಗ್ ರಸ್ತೆಯ ಬಳಿಯ ದುಬಗ್ಗ ಪ್ರದೇಶದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಶಂಕೆಯ ಮೇರೆಗೆ ಕಾಕೋರಿಯ ರಿಂಗ್ ರೋಡ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ ಎಟಿಎಸ್ ತಂಡ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಗೆ ಅಲ್-ಖೈದಾ ಉಗ್ರ ಸಂಘಟನೆಯ ಜತೆ ಸಂಪರ್ಕವಿದೆ ಎಂದು ಶಂಕಿಸಲಾಗಿರುವ ಕುರಿತು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಎರಡು ಪ್ರೆಶರ್-ಕುಕ್ಕರ್ ಬಾಂಬ್‌ಗಳು, ಅರೆ ತಯಾರಿಸಿದ ಟೈಮ್ ಬಾಂಬ್ ಮತ್ತು ಆರರಿಂದ ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.

Last Updated : Jul 11, 2021, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.