ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೊಳಗಾಗಿ ತೊಂದರೆ ಅನುಭವಿಸುತ್ತಿರುವ ಜನರಿಗೆ ಭಾರತೀಯ ರಿಜರ್ವ್ ಬ್ಯಾಂಕ್(RBI) ಮತ್ತೊಂದು ಶಾಕ್ ನೀಡಿದೆ. ಮುಂದಿನ ತಿಂಗಳಿಂದ ಎಟಿಎಂ ಹಣ ವಿತ್ ಡ್ರಾ ಮೇಲಿನ ಚಾರ್ಜ್ ಏರಿಕೆ ಮಾಡಿದೆ. ಆಗಸ್ಟ್ 1ರಿಂದಲೇ ಈ ಹೊಸ ನೀತಿ ಜಾರಿಗೊಳ್ಳಲಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಆಗಸ್ಟ್ 1ರಿಂದ ಇತರೆ ಎಟಿಎಂಗಳಲ್ಲಿ 5ಕ್ಕಿಂತಲೂ ಹೆಚ್ಚಿನ ಸಲ ಹಣ ಡ್ರಾ ಮಾಡಿದರೆ ಪ್ರತಿ ಹಿಂತೆಗೆತಕ್ಕೆ 21 ರೂ. ಚಾರ್ಜ್ ಮಾಡಲಾಗುತ್ತಿದೆ. ಈ ಹಿಂದೆ 20 ರೂ. ಚಾರ್ಜ್ ಮಾಡಲಾಗುತ್ತಿತ್ತು. ಇದರ ಜತೆಗೆ ಆರ್ಬಿಐ ಹಣಕಾಸೇತರ ಶುಲ್ಕವನ್ನು 5 ರೂಪಾಯಿಯಿಂದ 6 ರೂ.ಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಇಂಟರ್ ಚೇಂಜ್ ಶುಲ್ಕವನ್ನು 17 ರೂಪಾಯಿಗೆ ಏರಿಕೆ ಮಾಡಿದೆ. ಈ ಹಿಂದೆ 16 ರೂ. ಇತ್ತು.
ಇದನ್ನೂ ಓದಿ: ಸ್ಪರ್ಧಾ ಕಾಯ್ದೆ ಉಲ್ಲಂಘನೆ: ಅಮೆಜಾನ್-ಫ್ಲಿಪ್ಕಾರ್ಟ್ ಮೇಲ್ಮನವಿ ವಜಾ
ಇದಲ್ಲದೆ, ಗ್ರಾಹಕರು ಇತರೆ ಬ್ಯಾಂಕ್ಗಳ ಎಟಿಎಂಗಳಿಂದ ಉಚಿತವಾಗಿ ವಹಿವಾಟು ನಡೆಸಬೇಕಾಗಿದ್ದು, ಮೆಟ್ರೋ ಕೇಂದ್ರಗಳಲ್ಲಿ 3 ಹಾಗೂ ಇತರೆ ಪ್ರದೇಶಗಳಲ್ಲಿ 5 ಸಹ ಹಣ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಇದಾದ ಬಳಿಕ ಪ್ರತಿ ವಹಿವಾಟಿನ ಮೇಲೆ 20 ರೂ. ದಂಡ ವಿಧಿಸಲಾಗುತ್ತದೆ. ಜೂನ್ 2019ರ ಆರ್ಬಿಐ ಸ್ಥಾಪನೆ ಮಾಡಿರುವ ಸಮಿತಿಯ ಸಲಹೆ ಆಧಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.