ETV Bharat / bharat

ಉಮೇಶ್ ಪಾಲ್ ಹತ್ಯೆ ಪ್ರಕರಣ: ಅತೀಕ್ ಅಹ್ಮದ್ ಹಿರಿಯ ಪುತ್ರನೂ ಆರೋಪಿ

author img

By

Published : Apr 27, 2023, 9:47 AM IST

ಪೊಲೀಸರು ಕೈಗೊಂಡ ತನಿಖೆಯಲ್ಲಿ ಉಮೇಶ್ ಪಾಲ್ ಹತ್ಯೆಯ ಸಂಚಿನಲ್ಲಿ ಉಮರ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಉಮೇಶ್ ಪಾಲ್ ಹತ್ಯೆ ಮುನ್ನ ಅಸಾದ್ ಜೈಲಿಗೆ ಹೋಗಿ ಉಮರ್​ನನ್ನು ಭೇಟಿಯಾಗಿದ್ದನು ಎಂದು ಪೊಲೀಸ್​​ರು ಖಚಿತಪಡಿಸಿದ್ದಾರೆ.

Lucknow Jail
ಲಖನೌ ಜೈಲು

ಪ್ರಯಾಗರಾಜ್(ಉತ್ತರಪ್ರದೇಶ): ಹತ್ಯೆಗೀಡಾದ ಅಪರಾಧಿ ರಾಜಕಾರಣಿ ಅತಿಕ್ ಅಹ್ಮದ್ ಅವರ ಹಿರಿಯ ಪುತ್ರ ಪ್ರಸ್ತುತ ಲಖನೌ ಜೈಲಿನಲ್ಲಿರುವ ಉಮರ್​​​ನೂ ಸಹ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೈಗೊಂಡ ತನಿಖೆ ಸಮಯದಲ್ಲಿ ಉಮೇಶ್ ಪಾಲ್ ಹತ್ಯೆಯ ಸಂಚಿನಲ್ಲಿ ಉಮರ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಉಮೇಶ್ ಪಾಲ್ ಹತ್ಯೆ ಮುನ್ನ ಅಸದ್ ಕೂಡ ಜೈಲಿಗೆ ಹೋಗಿ ಉಮರ್​​ನನ್ನು ಭೇಟಿ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅತಿಕ್ ಅಹ್ಮದ್ ಪುತ್ರ ಅಸಾದ್​ನೂ ಬಿಲ್ಡರ್ ಮೊಹಮ್ಮದ್​ಗೆ ಉಮರ್​ಗೆ ಭೇಟಿಯಾಗುವಂತೆ ಬೆದರಿಕೆ ವೊಡ್ಡಿದ್ದನು. ಈ ಹಿಂದೆ ಸಿಬಿಐ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲು 2 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ನಂತರ ಬಂಧನಕ್ಕೊಳಗಾಗಿ ಉಮರ್ ಸದ್ಯ ಲಖನೌ ಜೈಲಿನಲ್ಲಿದ್ದಾರೆ.

ಇವರೊಂದಿಗೆ ಅತೀಕ್ ಅಹ್ಮದ್, ಅವರ ಪತ್ನಿ ಶೈಸ್ತಾ ಪರ್ವೀನ್, ಮಕ್ಕಳಾದ ಅಸಾದ್, ಅಲಿ ಮತ್ತು ಈಗ ಉಮರ್ ಕೂಡ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಉಮೇಶ್ ಪಾಲ್ ಹತ್ಯೆಯಲ್ಲಿ ಲಖನೌ ಜೈಲಿನಲ್ಲಿರುವ ಆರೋಪಿ ಉಮರ್ ಭಾಗವಹಿಸಿರುವುದು ಖಚಿತ ಆಗುತ್ತಿದ್ದಂತೆ ಕಾನೂನು ಪ್ರಕ್ರಿಯೆ ಶುರು ಮಾಡಲಾಗಿದೆ. ಜೈಲಿನೊಳಗೆ ಸಂಚು ರೂಪಿಸಿದ ಆರೋಪ ಉಮರ್ ಮೇಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಮೇಶ್ ಪಾಲ್ ಹತ್ಯೆ ಪ್ರಕರಣ: 2005ರ ಜನವರಿ 25ರಂದು ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ನಡೆದಿತ್ತು. ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ವಕೀಲ ಉಮೇಶ್​ ಪಾಲ್ ಆಗಿದ್ದರು. ರಾಜು ಪಾಲ್‌ ಹತ್ಯೆ ಪ್ರಕರಣದಿಂದ ಹಿಂದೆ ಸರಿಯುವಂತೆ ಉಮೇಶ್​ ಪಾಲ್​ಗೆ ಗ್ಯಾಂಗ್​ಸ್ಟರ್​​ ಅತೀಕ್ ಅಹ್ಮದ್​ ಬೆದರಿಕೆ ಹಾಕಿದ್ದನು. ಇದಕ್ಕೊಪ್ಪದ ಕಾರಣಕ್ಕೆ ಉಮೇಶ್​ ಪಾಲ್​​ರನ್ನು 2006ರ ಫೆಬ್ರವರಿ 28ರಂದು ಅಪಹರಿಸಲಾಗಿತ್ತು. 2023ರ ಫೆಬ್ರುವರಿ​ 24ರಂದು ಉಮೇಶ್​ ಪಾಲ್​ಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಧೂಮಂಗಂಜ್‌ನಲ್ಲಿ ಉಮೇಶ್ ಪಾಲ್‌ ಮೇಲೆ ಅಸಾದ್ ಗುಂಡಿನ ದಾಳಿ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಧುಮನ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಅತೀಕ್ ಅಹ್ಮದ್, ಅತೀಕ್ ಅವರ ಸಹೋದರ ಅಶ್ರಫ್, ಅತೀಕ್ ಅವರ ಪತ್ನಿ ಶಾಯಿಸ್ತಾ ಪರ್ವೀನ್, ಅತೀಕ್ ಅವರ ಇಬ್ಬರು ಪುತ್ರರು, ಅತೀಕ್ ಅವರ ಸಹಚರ ಗುಡ್ಡು ಮುಸ್ಲಿಂ ಮತ್ತು ಗುಲಾಮ್ ಮತ್ತು ಇತರ ಒಂಬತ್ತು ಸಹಚರರ ವಿರುದ್ಧ ತಹ್ರೀರ್ ಧುಮನ್‌ಗಂಜ್ ಪೊಲೀಸ್ ಠಾಣೆಯಲ್ಲಿ ಉಮೇಶ್ ಪಾಲ್ ಪತ್ನಿ ಜಯಪಾಲ್ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರು ಶೂಟರ್‌ಗಳು ಮತ್ತು ಡಜನ್ ಸಹ-ಸಂಚುಕೋರರ ಹೆಸರನ್ನು ಬಹಿರಂಗಪಡಿಸಿದರು. ಹೆಸರುಗಳಲ್ಲಿ ಅತೀಕ್ ಅಹ್ಮದ್, ಅವರ ಪತ್ನಿ ಶೈಸ್ತಾ ಪರ್ವೀನ್, ಅತೀಕ್ ಅವರ ಮಗ ಅಸದ್, ಮಗ ಅಲಿ ಹಾಗೂ ಈಗ ಉಮರ್ ಭಾಗವಹಿಸಿರುವುದು ಖಚಿತವಾಗಿದೆ.

ಇದನ್ನೂಓದಿ:ಅಕ್ರಮ ಹಣ ವರ್ಗಾವಣೆ ಆರೋಪ: ಟಿಎಂಸಿ ನಾಯಕಿ ಅನುಬ್ರತಾ ಪುತ್ರಿ ಸುಕನ್ಯಾ ಮೊಂಡಲ್ ಬಂಧನ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.