ನವದೆಹಲಿ : ಉಕ್ರೇನ್-ರಷ್ಯಾ ಬಿಕ್ಕಟ್ಟಿನ ನಡುವೆ ಇಂಧನ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದೆ. ಹೀಗಾಗಿ, ವಿಮಾನಗಳಿಗೆ ಬಳಕೆ ಮಾಡುವ ಜೆಟ್ ಇಂಧನ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಇನ್ಮುಂದೆ ವಿಮಾನಯಾನ ಪ್ರಮಾಣ ಮತ್ತಷ್ಟು ದುಬಾರಿಯಾಗುವುದು ಬಹುತೇಕ ಖಚಿತಗೊಂಡಿದೆ. ಎಟಿಎಫ್ ಬೆಲೆಯಲ್ಲಿ ಶೇ.2ರಷ್ಟು ಏರಿಕೆಯಾರುವ ಕಾರಣ ಇದೀಗ ವಿಮಾನಯಾನ ದರದಲ್ಲಿ ಏರಿಕೆಯಾಗಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡು ಬರುತ್ತಿರುವ ಕಾರಣ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲೂ ಜೆಟ್ ಇಂಧನ ಬೆಲೆಯಲ್ಲಿ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಗಣನೀಯ ಮಟ್ಟದಲ್ಲಿ ಹೆಚ್ಚಳವಾಗಿರುವ ಕಾರಣ ವಿಮಾನದಲ್ಲಿ ಪ್ರಯಾಣ ಮಾಡುವ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಇದನ್ನೂ ಓದಿ: ಪತ್ನಿಯನ್ನು 'ಟೊಮೆಟೊ' ಎಂದು ಕರೆದಿದ್ದಕ್ಕೆ ನೆರೆ ಮನೆ ವೃದ್ಧನ ಕೊಲೆಗೈದ ಪತಿ
ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ ಏವಿಯೇಷನ್ ಟರ್ಬೈನ್ ಇಂಧನ(ATF) ಬೆಲೆಯಲ್ಲಿ ಪ್ರತಿ ಕಿಲೋಲೀಟರ್ಗೆ 1,12,924 ರೂ. ಏರಿಕೆಯಾಗಿದೆ. ಹೀಗಾಗಿ, ಪ್ರಯಾಣ ದರದಲ್ಲಿ ಮುಂದಿನ ಕೆಲ ದಿನಗಳಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ.
ವಿಶೇಷವೆಂದರೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಆದರೆ, ವಾಣಿಜ್ಯ ಎಲ್ಪಿಸಿ ಸಿಲಿಂಡರ್ ಬೆಲೆಯಲ್ಲಿ 250 ರೂ. ಏರಿಕೆ ಮಾಡಲಾಗಿದೆ. ಹೀಗಾಗಿ, ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯಲ್ಲೂ ತುಸು ಏರಿಕೆಯಾಗುವ ಸಾಧ್ಯತೆ ಇದೆ.